ಕುಷ್ಟಗಿ:ವಿದ್ಯುತ್ ವಾಯರ್ ಕಳ್ಳತನ ಮಾಡಿದ ಆರೋಪಿತರನ್ನು ಕುಷ್ಟಗಿ ಪೊಲೀಸರು ಬಂಧಿಸಿ 2,80,000 ರೂ. ಮೌಲ್ಯದ ಒಟ್ಟು 1,400 ಕೆ.ಜಿ. ತೂಕದ ವಿದ್ಯುತ್ ವಾಯರ್ ಶನಿವಾರ ವಶಕ್ಕೆ ಪಡೆದಿದ್ದಾರೆ.
ಕಳೆದ 2023 ನವೆಂಬರ್ 11 ರಂದು ಕುಷ್ಟಗಿ ಪಟ್ಟಣದ ಸರ್ವೆ ನಂಬರ್ 9/2. ಹಾಗೂ 9/3ನೇಯ ಕೆವಿಸಿ ನಗರದ ಖಾಲಿ ಪ್ಲಾಟಗಳ ರಸ್ತೆಗಳಲ್ಲಿನ ವಿದ್ಯುತ್ ಕಂಬಗಳಿಗೆ ಅಳವಡಿಸಲಾಗಿದ್ದ ವಿದ್ಯುತ್ ವಾಯರ್ ಕತ್ತರಿಸಿ ಕಳ್ಳತನ ಮಾಡಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಭೇದಿಸಲು ಕೊಪ್ಪಳ ಎಸ್ಪಿ ಯಶೋದಾ ವಂಟಿಗೋಡಿ ಅವರ ಮಾರ್ಗದರ್ಶನದ ಮೇರೆಗೆ ಕುಷ್ಟಗಿ ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್’ಐ ಮುದ್ದುರಂಗಸ್ವಾಮಿ, ಕ್ರೈಂ ಪಿಎಸ್ಐ ಮಾನಪ್ಪ ವಾಲ್ಮೀಕಿ ಮತ್ತು ಸಿಬ್ಬಂದಿಗಳು ತಂಡವನ್ನು ರಚನೆ ಮಾಡಿಕೊಂಡು ತಾಲೂಕಿನ ಚಿಕ್ಕನಂದಿಹಾಳ ಗ್ರಾಮದ ಐವರು ಆರೋಪಿತರನ್ನು ಬಂಧಿಸಿದ್ದು ಅವರಲ್ಲಿದ್ದ 2.80.000 .ಮೌಲ್ಯದ 1400ಕೆಜಿ ವಿದ್ಯುತ್ ವಾಯರ್ ಹಾಗೂ ವಿದ್ಯುತ್ ವಾಯರ್ ಸಾಗಿಸಲು ಬಳಸಿದ್ದ 2 ಲಕ್ಷ ರೂ. ಬೆಲೆ ಬಾಳುವ ಮಹೇಂದ್ರ ಕಂಪನಿ ಜಿತೂ ವಾಹನ ವಶಕ್ಕೆ ಪಡೆದು ಆರೋಪಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಕಳ್ಳರನ್ನು ಬಂಧಿಸಿ, ವಿದ್ಯುತ್ ವಾಯರ್ ವಶಪಡಿಸಿಕೊಳ್ಳಲು ಪತ್ತೆ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ಕೆ ಕೊಪ್ಪಳ ಜಿಲ್ಲಾ ಎಸ್ಪಿ ಯಶೋಧ ವಂಟಿಗೋಡಿ ಅವರು ಶ್ಲಾಘಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.