ಬಸವಕಲ್ಯಾಣ:ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಶರಣು ಸಲಗರ್ ಶನಿವಾರ ತಡ ರಾತ್ರಿ ಸುಮಾರು 12 ಗಂಟೆಗೆ ಧಿಡೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸಬೇಕಿದ್ದ ವೈದ್ಯರನ್ನು ಫೋನಿನ ಮೂಲಕ ಕರೆ ಮಾಡಿ ಚಳಿ ಬಿಡಿಸಿದರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಪಕ್ಕಾದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದರು.ಈ ಸಂದರ್ಬದಲ್ಲಿ ವೈದ್ಯರು ಗೈರು ಹಾಜರಾಗಿರುವ ಕಾರಣ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.ತಕ್ಷಣ ಕರ್ತವ್ಯ ನಿರತ ವೈಧ್ಯಾಧಿಕಾರಿಗಳಾದ ಡಾ.ವೈಶಾಲಿ ಅವರನ್ನು ಫೋನಿನ ಮೂಲಕ ಸಂಪರ್ಕಿಸಿ ಕೆಲಸ ಮಾಡದೆ ಮನೆಯಲ್ಲಿ ಹಾಯಾಗಿ ಮಲಗಿರುವುದಕ್ಕೆ ತರಾಟೆಗೆ ತೆಗೆದುಕೊಂಡರು.ಇದೆ ಸಮಯದಲ್ಲಿ ತಕ್ಷಣವೇ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಪರ್ಣ ಮಹಾನಂದ ಅವರನ್ನು ಸಂಪರ್ಕಿಸಿದ ಶಾಸಕರು ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ಹೇರಿಗೆಗೆಂದು ಆಗಮಿಸುವ ಮಹಿಳೆಯರಿಗೆ ಚಿಕಿತ್ಸೆ ನೀಡಬೇಕಾದ ವೈದ್ಯರು ಮನೆಯಲ್ಲಿ ಹಾಯಾಗಿ ಮಲಗಿದ್ದಾರೆ.ಹೀಗೆ ಆದರೆ ಬಡ ಮಹಿಳೆಯರಿಗೆ ಚಿಕಿತ್ಸೆ ಯಾರು ನೀಡಬೇಕು ಎಂದು ಶಾಸಕರು ಡಾ.ಅಪರ್ಣ ಮಹನಂದ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ರೀತಿ ಆಗಬಾರದು.ದಿನದ 24 ಘಂಟೆಗಳ ಕಾಲ ತಮ್ಮ ಸೇವೆಯನ್ನು ಸಾರ್ವಜನಿಕರಿಗೆ ನೀಡಬೇಕು ಸಾಮಾನ್ಯ ಜನರಿಗೆ ಯಾವುದೇ ರೀತಿಯಯಲ್ಲಿ ತೊಂದರೆಯಾಗಬಾದು ಒಂದು ವೇಳೆ ತೊಂದರೆ ಯಾದರೆ ಯಾವುದೇ ಕಾರಣಕ್ಕು ಸಹಿಸುವುದಿಲ್ಲ ಎಂದು ಶಾಸಕರು ಸೂಚಿಸಿದರು.
ವರದಿ:ಸಂದೀಪ್ ಕುಮಾರ್