ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ ಖಾನಟ್ಟಿ ವತಿಯಿಂದ ಪ್ರಥಮ ಬಾರಿಗೆ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಶುಕ್ರವಾರ ದಿನಾಂಕ 12.01.2024 ರಂದು ಜರುಗಿತು ಈ ಕಾರ್ಯಕ್ರಮಕ್ಕೆ ದಿವ್ಯಸಾನಿಧ್ಯವನ್ನು ಶ್ರೀ ಅಡವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು.ಅಧ್ಯಕ್ಷತೆ ಬಸಲಿಂಗ ನಿಂಗನೂರ್ ಚೇರ್ಮನ್ನರು ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಖಾನಟ್ಟಿ ಇವರು ಅಧ್ಯಕ್ಷತೆ ವಹಿಸಿಕೊಂಡಿದ್ದರು.ಅತಿಥಿಗಳಾಗಿ ಶಿವಲಿಂಗ ಅರ್ಗಿ ಶಿಕ್ಷಕರು ಶಿವಪುರ್ ಮಹದೇವಿ ತುಪ್ಪದ ಗ್ರಾಮ ಪಂಚಾಯತ್ ಅಧ್ಯಕ್ಷರು ಖಾನಟ್ಟಿ ಆರ್ ಎಸ್ ಹೊನ್ನೂರು ಮುಖ್ಯೋಪಾಧ್ಯಾಯರು ಜಿ ಎಚ್ ಎಸ್ ಖಾನಟ್ಟಿ ಮಹೇಶ್ ತುಪ್ಪದ ಅಧಿಕೃತ ಗೊಬ್ಬರ ವ್ಯಾಪಾರಸ್ಥರು ಖ ಸಿದ್ದಪ್ಪ ಹಾದಿಮನಿ ಕ್ಲಾಸ್ ಒನ್ ಕಾಂಟ್ರಾಕ್ಟರ್ ಮದನ್ ದಾನನ್ನವರ ಸದಸ್ಯರು ಪಿಕೆಪಿಎಸ್ ಮಹದೇವ್ ಕರಗಣ್ಣಿ ಮಾಜಿ ಅಧ್ಯಕ್ಷರು ಪಿಕೆಪಿಎಸ್ ನಾಗಪ್ಪ ಕರಗಣ್ಣಿ ಪಿಕೆಪಿಎಸ್ ಸದಸ್ಯರು ಆನಂದ್ ತುಪ್ಪದ ಯುವ ದೂರಿನರು ಕಲ್ಮೇಶ್ ಮಟಗಾರ್ ಶಿಕ್ಷಕರು ಜೆ ಸಿ ಸ್ಕೂಲ್ ಮಹಲಿನ0ಗಪೂರ ಈ ಎಲ್ಲಾ ಗಣ್ಯಾತಿ ಗಣ್ಯರು ಕಾರ್ಯಕ್ರಮಕದಲ್ಲಿ ಆಸಿನರಾಗಿದ್ದರು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿರುವ ಶಿವಲಿಂಗ ಅರ್ಗಿ ಶಿಕ್ಷಕರು ಇಂದಿನ ವಿದ್ಯಾರ್ಥಿಗಳು ಮುಂದಿನ ದೇಶದ ವಿಜ್ಞಾನಿಗಳು ಹಾಗೂ ಈಗಿನ ಯುಗದಲ್ಲಿ ತಾಯ0ದಿರ್ ಪಾತ್ರ ಮುಖ್ಯವಾದದ್ದು ಎಂದು ಹೇಳಿದರು ಈ ಗ್ರಾಮಿನ ಭಾಗದಲ್ಲಿ ಈ ಶಿಕ್ಷಣ ಸಂಸ್ಥೆಯು ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಹೆಮ್ಮೆಯ ವಿಷ್ಯಯ ಎಂದು ಹೇಳಿದರು ಅಧ್ಯಕ್ಷತೆ ವಹಿಸಿರುವ ಶ್ರೀಯುತ ಬಸಲಿಂಗ ನಿಂಗನೂರ ಇವರು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊ0ಡರೆ ಈ ಕಾರ್ಯಕ್ರಮ ಆಯೋಜಿಸಿದ್ದು ಸಾರ್ಥಕ ಎಂದು ಹೇಳಿದರು ದಿವ್ಯ ಸಾನಿಧ್ಯ ವಹಿಸಿರುವ ಅಡವಿ ಸಿದ್ದೇಶ್ವರ ಮಹಾಸ್ವಾಮಿಗಳು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಇದು ಸುವರ್ಣ ಅವಕಾಶ ಹಾಗೂ ಇಂದಿನ ತಂತ್ರಜ್ಞಾನ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾದದ್ದು ಇದರಲ್ಲಿ ತಾಯಿ ತಂದೆ ತಾಯಿಯರ ಪಾತ್ರ ಮಹತ್ವ ಮಹತ್ವವಾದದ್ದು ಎಂದು ಆಶೀರ್ವದಿಸಿದರು ಶಾಲೆಯ ಸಹ ಶಿಕ್ಷಕೆಯಾದ ಸಲ್ಮಾ ನಾಲ್ಬಂದ್ ಶಿಕ್ಷಕಿ ಕಾರ್ಯಕ್ರಮವನ್ನು ನಿರೂಪಿಸಿದರು.ಮಂಜುಳಾ ವಾಕೋಡೆ ಸತ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು ವಿಜ್ಞಾನ ಶಿಕ್ಷಕರಾದ ರಾಮಸ್ವಾಮಿ ಕೋಲ್ಕಾರ್ ಇವರು ಸಭೆಯನ್ನು ವಂದಿಸಿದರು ಶಾಲೆಯ ಎಚ್ ಓ ಡಿ ಆಗಿರುವ ಕುಮಾರ್ ರೆಡ್ಡೇರಟ್ಟಿ ಸಹ ಶಿಕ್ಷಕರಾದ ಆರ್‌ಬಿ ಕರೋಶಿ ಇಮ್ರಾನ್ ಪಿರ್ಜಾದೆ ಸೀಬಾ ಸ್ವಾಮಿ ಮನಿಷಾ ರಾಥೋರ್ ನೇಹಾ ಸಯ್ಯದ್ ಸ್ಪೂರ್ತಿ ಕೌಜಲಗಿ ಲಕ್ಷ್ಮೀಬಾಯಿ ರೆಡ್ಡೇರಟ್ಟಿ ಹಾಗೂ ಶಾಲೆಯ ಎಲ್ಲ ಮುದ್ದು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.