ಬಂತು ಬಂತು ಸಂಭ್ರಮದ ಹಬ್ಬ ಬಂತು
ಸುಖ ನೆಮ್ಮದಿಯ ಬಯಸಿರುವಂತ
ಸಂತೋಷ ತರುವ ಹಬ್ಬವು ಬಂತು
ವರ್ಷವಿಡಿ ದುಡಿದು ಸಂಭ್ರಮವು
ಆಚರಿಸುವ ಹಬ್ಬ ಬಂತು ಬಂತು
ಸಂತೋಷಿದ ಹಬ್ಬವು ಬಂತು//
ನಮ್ಮ ರೈತರು ಎಲ್ಲರೂ ಸೇರಿ ಎಳ್ಳುಬೆಲ್ಲ ಹಂಚಿ
ಸಂಭ್ರಮದ ಸಂಕ್ರಮಣ ಆಚರಿಸುವ ಹಬ್ಬವು ಬಂತು
ಸೂರ್ಯನು ತನ್ನ ಪಥವ ಬದಲಿಸುವನು ಇಂದು
ಮಕರರಾಶಿ ಸಂಕ್ರಾಂತಿಗೆ ಬಂದು ಸೇರುವನು ನೋಡು ಇಂದು ಬಂತು ಬಂತು ಸಂಭ್ರಮದ ಸಂತೋಷದ ಹಬ್ಬವು ಬಂತು//
ಪಾಪವ ಪುಣ್ಯವ ಕಳೆಲೆಂದು
ಪುಣ್ಯ ಸ್ಥಳಗಳಿಗೆ ಭೇಟಿ ಇಂದು
ಎಳ್ಳು ಅರಿಶಿನ ಮೈಯಿಗೆ ಹಚ್ಚಿ
ನದಿ ನೀರು ಜಳಕ ಮಾಡುವರು ನೋಡಿಂದು
ಬಂತು ಬಂತು ಸಂಭ್ರಮದ ಹಬ್ಬ ಬಂತು//
ಹೊಸ ವರ್ಷದ ಮೊದಲ ಸಂಭ್ರಮಿಸುವ ಹಬ್ಬ ಬಂತು
ಶೇಂಗದ ಹೋಳಿಗೆಯ ಬುತ್ತಿ ಕಟ್ಟಿ ಸಂತೋಷದ ಕಡೆ ಸುಲುಗೈ ಕೈಯಲ್ಲಿ ಹಿಡಿದು ಕಬ್ಬುತಿನ್ನುತ ನಡೆದಾರ ನೋಡು ಬಂತು ಬಂತು ಸಂಭ್ರಮದ ಹಬ್ಬವು ಬಂತು ನೋಡು//
ಭೇದ ಬಾವವಿಲ್ಲದ ಈ ಹಬ್ಬವು ಒಂದು ಗೂಡಿಸುವ ಹಬ್ಬ
ನೀವು ಕಂಡಕನಸು ನನಸಾಗಲಿ ಮುಂದೆ ಸಾಗಲಿ ಇಂದು
ಆರೋಗ್ಯವು ಭಾಗ್ಯವು ತರುವಂತ ಭಾಗ್ಯವಂತರು ನೀವು
ಸುಗ್ಗಿವು ಮುಗಿಸಿ ಹಿಗ್ಗುತಾ ಸಂಭ್ರಮವು ಆಚರಿಸುವ ಹಬ್ಬ
ಬಂತು ಬಂತು ಸಂಭ್ರಮದ ಹಬ್ಬ ಬಂತು ಸಂಭ್ರಮದ ಅನುಭವ ಬಂತು ಸಂಭ್ರಮದ ಹಬ್ಬವು ಬಂತು//
-ಮಹಾಂತೇಶ ಖೈನೂರ (ಯಾತನೂರ)