ಹನೂರು:ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಳಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿ ವೃತ್ತ ನಿರ್ಮಾಣ ಕಾರ್ಯ ಹಾಗೂ ರಸ್ತೆ ಅಗಲೀಕರಣ ಅಭಿವೃದ್ಧಿಗೆ ಚಾಲನೆ ನೀಡಿದರು.
ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ,ಹನೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ನಿರ್ಮಾಣ ಸೇರಿದಂತೆ ಗೌರವ ತರುವಂತೆ ಮಂಟಪ ಇದೀಗ ಕೆಲಸ ಪ್ರಾರಂಭ ಮಾಡಲಾಗಿದ್ದೇವೆ ಹೀಗಾಗಿ ರಸ್ತೆ ಅಗಲೀಕರಣಕ್ಕಾಗಿ ಉಪ ನೋಂದಾವಣೆ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗ ಸುತ್ತುಗೋಡೆ ತೆರವುಗೊಳಿಸಲಾಗುತ್ತಿದೆ.ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಇದ್ದು ಪುನರ್‌ನಿರ್ಮಾಣ ಬಗ್ಗೆ ಜಿಲ್ಲಾಧಿಕಾರಿಗಳು,ಉಪವಿಭಾಗಾಧಿಕಾರಿಗಳ ಗಮನಕ್ಕೆ ಇದೆ ಅವರ ವರದಿಯ ಸಂಪೂರ್ಣ ಮಾಹಿತಿ ತೆಗೆದುಕೊಳ್ಳಲಾಗುವುದು ಪ್ಲಾನ್ ಪ್ರಕಾರ ಮಾಡಲು ಕೆಲಸ ಶುರುಮಾಡಲಾಗಿದೆ ಎಂದು ಹೇಳಿದರು.
ಆದಷ್ಟು ಬೇಗ ಕೆಲಸ ಮುಗಿಸಿ ಪೂರ್ಣಗೊಳಿಸಲು ಶಕ್ತಿ ಮೀರಿ ಕೆಲಸ ಮಾಡಲಾಗುತ್ತಿದೆ ಹನೂರಿನ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರ ಬೆಂಬಲ ಇದ್ದು,ನಮ್ಮ ಸಹಕರವೂ ಸಹ ಇದೆ ಕೇಶೀಫ್ ರಸ್ತೆಯನ್ನು ಮಾರ್ಚ್ ಅಂತಿಮದೊಳಗೆ ಉದ್ಘಾಟನೆ ಮಾಡಲು ಚಂತನೆ ಇದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಹನೂರು ಉಪನೋoದಾವಣೆ ಕಚೇರಿಯ ಸುತ್ತುಗೋಡೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸುತ್ತುಗೋಡೆಯು ಸಹ ತೆರವುಗೊಳಿಸಲು ಮುಂದಾಗಿದ್ದಾರೆ.
ಈ ಸಂಧರ್ಭದಲ್ಲಿ ತಹಸೀಲ್ಧಾರ್ ಗುರುಪ್ರಸಾದ್, ಸೇರಿದಂತೆ ಕೆ-ಶಿಫ್ ಯೋಜನೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್