ಬಸವಕಲ್ಯಾಣ:ವಿಶ್ವ ಗುರು ಬಸವಣ್ಣನವರನ್ನು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಮತ್ತು ಸಚಿವ ಸಂಪುಟದ ಸದಸ್ಯರು ಸೇರಿ ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಪ್ರಯುಕ್ತವಾಗಿ ಬಸವಣ್ಣನ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.ನಗರದ ಬಸವೇಶ್ವರ ವೃತದಲ್ಲಿ ಜಮಾಯಿಸಿದ ವಿವಿಧ ಬಸವಪರ ಸಂಘಟನೆಗಳ ಪ್ರಮುಖರು ಹಾಗೂ ಪದಾಧಿಕಾರಿಗಳು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು ನಂತರ ಬಸವ ಮಹಾಮನೆಯ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ಈ ಒಂದು ಘೋಷಣೆ ತುಂಬಾ ಸಂತೋಷ ತಂದಿದೆ ಬಸವಾಭಿಮಾನಿಗಳ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ,ಕಾಯಕ, ದಾಸೋಹದಂತಹ ಶ್ರೇಷ್ಠ ತತ್ವ ನೀಡಿ ಬಸವಣ್ಣ ವಿಶ್ವದ ಸಾಂಸ್ಕೃತಿಕ ನಾಯಕನಾಗಿದ್ದಾನೆ.ಕರ್ನಾಟಕ ಅಷ್ಟೇ ಅಲ್ಲ,ನೆರೆಯ ರಾಜ್ಯಗಳಾದ ಮಹಾರಾಷ್ಟ್ರ,ಆಂಧ್ರ ಪ್ರದೇಶ,ತೆಲಂಗಾಣ,ತಮಿಳುನಾಡು ಸೇರಿದಂತೆ ದೇಶದ ಎಲ್ಲಾ ರಾಜ್ಯಗಳು ಸಹ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅನುಭವ ಮಂಟಪದ ಸಂಚಾಲಕರಾದ ಶ್ರೀ ಶಿವಾನಂದ ದೇವರು,ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಬಸವರಾಜ ಕೋರ್ಕೆ,ವಿಶ್ವ ಸಮಿತಿ ಉಪಾಧ್ಯಕ್ಷ ಡಾ.ಜಿ.ಎಸ್. ಭುರಳೆ,ರಾಷ್ಟ್ರೀಯ ಬಸವ ದಳದ ತಾಲೂಕು ಅಧ್ಯಕ್ಷ ರವಿ ಕೋಳಕೂರ,ಪ್ರಮುಖರಾದ ಜಗನ್ನಾಥ ಖೂಬಾ, ವಿವೇಕ ಹೊದಲೂರೆ,ಮಲ್ಲಿಕಾರ್ಜುನ ಚಿರಡೆ,ಸುನೀಲ ಪಾಟೀಲ,ನಾಗಯ್ಯ ಸ್ವಾಮಿ,ಶ್ರೀಕಾಂತ್ ಬಡದಾಳೆ, ಭೀಮಾಶಂಕರ ಬಿರಾದಾರ,ಶರಣಪ್ಪ ಪರೆಪ್ಪ,ಸಿದ್ದು ಬಿರಾದಾರ ಸೇರಿದಂತೆ ವಿವಿಧ ಬಸವಪರ ಸಂಘಟನೆಗಳ ಪ್ರಮುಖರು,ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಸಂದೀಪ್ ಕುಮಾರ್