ಕಲಬುರಗಿ:ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಾಳೆ ಜರುಗಲಿರುವ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತ್ಯೋತ್ಸವದ ತಯಾರಿಯನ್ನು ಅಂಬಿಗರ ಯುವ ಸೈನ್ಯ ಕಲಬುರಗಿಯಿಂದ ಭರ್ಜರಿಯಾಗಿ ನಡೆದಿದ್ದು.ಇಲ್ಲಿನ ಜಗತ್ ವೃತ್ತದಲ್ಲಿ ಅಂಬಿಗರ ಚೌಡಯ್ಯನವರು ದೋಣಿ ಸಾಗಿಸುತ್ತಿರುವ ಮಾದರಿಯಲ್ಲಿ ಪರದೆಯ ಮುಖಾಂತರ ತಯಾರಿಸಿದ ಕಲಾಕೃತಿಯು ನೋಡುಗರ ಮನಸೂರೆಗೊಳಿಸುತ್ತಿದೆ. ಇನ್ನೂ ಪರದೆಯಿಂದ ಮಾಡಿದ ಈ ಕಲಾಕೃತಿಯಲ್ಲಿ ನಡೆದಾಡುವ ದೇವರೇ ಎಂದು ಹೆಸರಾಗಿದ್ದ ಮಾತೇ ಮಾಣಿಕೇಶ್ವರಿ ಅಮ್ಮನವರ ಭಾವಚಿತ್ರವು ಎದ್ದು ಕಾಣುತ್ತಿದೆ,ಹಾಗೆಯೇ ಇನ್ನುಳಿದ ಭಾಗಗಳಲ್ಲಿ ಚೌಡಯ್ಯನವರ ಫೋಟೋ ಸೇರಿದಂತೆ ಅವರ ಕಿರು ಪರಿಚಯ ಮಾಡಿಕೊಡಲಾಗಿದೆ ಇನ್ನು ಕಳೆದ ಬಾರಿ ನಡೆದ 132 ನೆಯ ಅಂಬೇಡ್ಕರ್ ಜಯಂತೋತ್ಸವದ ಪ್ರಯುಕ್ತ ಇದೇ ರೀತಿಯಲ್ಲಿ ಪರದೆಯಿಂದಲೇ ನಿರ್ಮಿಸಿದ್ದ ಬುದ್ದ ವಿಹಾರದ ಮಾದರಿ ನೋಡುಗರಿಗೆ ಆಕರ್ಷಿಸಿತ್ತು ಒಟ್ಟಾರೆಯಾಗಿ ಒಂದಿಲ್ಲೊಂದು ಹೊಸತನ್ನು ಮಾಡುವುದರಿಂದ ಜನರಿಗೆ ಜಗತ್ ವೃತ್ತ ಕಣ್ಸೆಳೆಯುತ್ತಿದೆ.
ವರದಿ-ಅಪ್ಪಾರಾಯ ಬಡಿಗೇರ