ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಅಂಗವಾಗಿ ಶ್ರೀ ವಾಲ್ಮೀಕಿ ವಾಲ್ಮೀಕಿ ಮಹರ್ಷಿ ಮೂರ್ತಿಗೆ ರುದ್ರ ಅಭಿಷೇಕದೊಂದಿಗೆ ಕರ್ಪೂರ ಪೂಜೆ ನೆರವೇರಿಸಲಾಯಿತು ಗ್ರಾಮದ ಗುರು-ಹಿರಿಯರ ನೇತೃತ್ವದಲ್ಲಿ ಶ್ರೀ ಆಂಜನೇಯ ದೇವಸ್ಥಾನದಿಂದ ಶ್ರೀ ವಾಲ್ಮೀಕಿ ದೇವಸ್ಥಾನದವರಿಗೂ,ಸಿದ್ದಾಪುರದ ಗ್ರಾಮದ ವೇಷಗಾರರಿಂದ,ರಾಮ,ಲಕ್ಷ್ಮಣ,ಸೀತೆ ಮತ್ತು ಹನುಮಾನ್ ವೇಷ ಭೂಷಣದಲ್ಲಿ ಶ್ರೀ ರಾಮನ ಫೋಟೋ ಮೆರವಣಿಗೆ ಮಾಡಿದ ನಂತರ ಭಕ್ತರಿಗೆ ಪ್ರಸಾದ ಸೇವೆಯನ್ನು ನೆರವೇರಿಸಲಾಯಿತು,ಈ ಸಂದರ್ಭದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಯಿತು,ಪ್ರಥಮ,ದ್ವಿತೀಯ, ತೃತೀಯ ಬಹುಮಾನವನ್ನು ಗ್ರಾಮದ ಗುರಿ ಹಿರಿಯರ ಕೈಯಲ್ಲಿ ಸ್ಪರ್ಧೆಯಲ್ಲಿ ವಿಜೇತರಿಗೆ ವಿತರಿಸಲಾಯಿತು, ಸಂಜೆ 6.00 ಗಂಟೆಗೆ ಶ್ರೀ ರಾಮನ ಹೆಸರನಲ್ಲಿ ದೀಪಾಲಂಕಾರ ಬೆಳಗಿಸುವ ಮೂಲಕ
ಮಾತನಾಡಿದ ಶ್ರೀ ನಿಜಗುಣಯ್ಯ ಸ್ವಾಮಿಗಳು ಹಿರೇಮಠ್ ಅಯೋಧ್ಯೆಯ ರಾಮಮಂದಿರ ಒಂದು ಹಿಂದೂ ದೇವಾಲಯವಾಗಿದ್ದು,ಇದು ಭಾರತದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀ ರಾಮ ಜನ್ಮಭೂಮಿಯ ಪವಿತ್ರ ಯಾತ್ರಾ ಸ್ಥಳದಲ್ಲಿದೆ. ೦೬-೦೮-೨೦೧೮ ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ದೇವಾಲಯದ ಶಿಲಾನ್ಯಾಸವನ್ನು ನೆರವೇರಿಸಲಾಗಿದ್ದು ಭಾರತದ ಈ ಸ್ಥಳವು ರಾಮನ ಜನ್ಮಸ್ಥಳ,ರಾಮ ವಿಷ್ಣುವಿನ ಏಳನೇ ಅವತಾರ ಎಂದು ಪೂಜಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಈರಣ್ಣ ಐನಾಯಕ,ಶಾಂತನಗೌಡ ಮಾಲಿ ಪಾಟೀಲ್,ಸುರೇಶ್ ಗೋನಾಳ್,ಸೋಮಪ್ಪ ಮಡಿವಾಳ ಲಕ್ಷ್ಮಣ ಕುಂಡೋಜಿ,ನರಸಪ್ಪ ಐನಾಯಕ್, ಷಣ್ಮುಖಪ್ಪ ಐನಾಯಕ್,ಛತ್ರಪ್ಪ ಐನಾಯಕ್, ಮಲ್ಲಿಕಾರ್ಜುನ ಸಂಗಾಪುರ,ಲಕ್ಷ್ಮಣ ಜೀರಾಳ, ರಮೇಶಗೌಡ,ಲಕ್ಷ್ಮಣ ಐನಾಯಕ್ ಗ್ರಾಮದ ಗುರಿಯರು,ವಾಲ್ಮೀಕಿ ಸಮಾಜದ ಹಿರಿಯರು ಯುವಕ ಮಂಡಳಿಯವರು,ಗ್ರಾಮದ ಮಹಿಳೆಯರು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.