ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನಿನ್ನೆ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಮೂರ್ತಿಗೆ ಪಂಚಾಮೃತ ಅಭಿಷೇಕ ಹಾಗೂ ಅನೇಕ ಪೂಜಾ ಕೈಂಕರ್ಯಗಳಿಂದ ಪೂಜೆ ಸಲ್ಲಿಸಿದ ನಂತರ ಮೂರ್ತಿಗೆ ಚಿನ್ನ ಮತ್ತು ಬೆಳ್ಳಿ ಆಭರಣಗಳಿಂದ ಅಲಂಕರಿಸಿದ ನಂತರ ಭಕ್ತರಿಗೆ ದರ್ಶನ ಪ್ರಾರಂಭವಾಯಿತು.
ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಹಾಗೂ ಹೂ ಮಾಲೆಗಳಿಂದ ಅಲಂಕರಿಸಿ ಬೆಳಿಗ್ಗೆ 10 ಘಂಟೆಗೆ ಸಕಲ ಮಂಗಳಕರ ವಾದ್ಯಗಳಾದ ಡೊಳ್ಳಿನ ಮೇಳದ ಮೂಲಕ ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸಿ ಗಂಗೆಯ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವದ ಮೂಲಕ ಸಂಚರಿಸಿ ಗುಡಿಯನ್ನು ತಲುಪಿತು.
ನಂತರ ಗುಡಿಯ ಆವರಣದಲ್ಲಿ ಪೂಜಾರಿಗಳಿಂದ ಸುಡುವ ಸಾರಿನಲ್ಲಿ ಕೈ ಹಾಕುವುದು ಹಾಗೂ ಸುಡುವ ಗೋಧಿ ಹುಗ್ಗಿಯಲ್ಲಿ ಕೈಯನ್ನು ಹಾಕುವ ಮೂಲಕ ಅನೇಕ ಪವಾಡಗಳನ್ನು ಮಾಡಿದರು.
ಮಧ್ಯಾಹ್ನ ನೂರಾರು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.
ರಾತ್ರಿ 8 ಘಂಟೆಗೆ ಶಾಲಾ ಮಕ್ಕಳಿಂದ ಜಾನಪದ ಸಂಸ್ಕೃತಿ ರಸಮಂಜರಿ ಕಾರ್ಯಕ್ರಮವನ್ನು ಯಲ್ಲಪ್ಪ ಡಂಬಳ ಹಾಗೂ ಸುವರ್ಣ ಡಂಬಳ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಈ ಕಲಾವಿದರಿಗೆ ಸನ್ಮಾನಿಸಿದರು.
ಬೀರಲಿಂಗೇಶ್ವರ ಜಾತ್ರಾ ಕಮಿಟಿ ಸದಸ್ಯರಾದ ರಮೇಶ ಬನಾಪೂರ ,ಶಿವಾನಂದ ಡಂಬಳ,ಚಂದ್ರು ಆಲೂರ,ಹನುಮಪ್ಪ ಬೀಚಗಲ್ಲ,ಮಾರುತಿ ಕಟಗಿ, ಮಂಜುನಾಥ ಕೊಪ್ಪಳ,ಶ್ರೀಕಾಂತ ಬಾಬರಿ,ಮಾರುತಿ ಹಚ್ಚಪ್ಪನವರ,ಬೀರಪ್ಪ ಬಂಡಿಹಾಳ,ಮಲ್ಲಪ್ಪ ಡಂಬಳ, ಬೀರಪ್ಪ ಬಾನಾಪೂರ,ಹನುಮಪ್ಪ ಬಿಚಗಲ್ಲ,ಮಾರುತಿ ಗಾಜಿ,ಶರಣಪ್ಪ ಜೋಗಿನ,ಶ್ರೀನಿವಾಸ ಗಾಜಿ, ಹನುಮಪ್ಪ ಜೋಗಿನ,ಮಲ್ಲಪ್ಪ ಜೋಗಿನ,ಮಂಜು ವೀರಾಪುರ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.ಈ ಕಾರ್ಯಕ್ರಮವನ್ನು ಶಿಕ್ಷಕರಾದ ಸುರೇಶ ಬಿ ಆಲೂರು ನಿರೂಪಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.