ಚಿತ್ರದುರ್ಗ:ಕಾಂತರಾಜ್ ವರದಿ ವಿವಿಧ ಹಕ್ಕೊತ್ತಾಯ ನಿರ್ಣಯ ಮಂಡನೆ! ಶೋಷಿತರ ಸಮಾವೇಶಕ್ಕೆ ಕೋಟೆನಗರಿ ಸಜ್ಜು.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಇದೆ. 28ನೇ ತಾರೀಖು ಭಾನುವಾರ ಹಮ್ಮಿಕೊಂಡಿರುವ ಶೋಷಿತರ ಜಾಗೃತಿ ಸಮಾವೇಶಕ್ಕೆ ಕೋಟೆ ನಗರ ಚಿತ್ರದುರ್ಗ ಸಜ್ಜಾಗಿದೆ.
150 ಎಕರೆ ಪ್ರದೇಶದ ಮಾದಾರ ಚೆನ್ನಯ್ಯ ಗುರು ಪೀಠದ ಸಮೀಪ ಇರುವ ಪ್ರದೇಶದಲ್ಲಿ ಬೃಹತ್ ಪೆಂಡಾಲನ್ನ ನಿರ್ಮಿಸಲಾಗಿದೆ.
ಸಂವಿಧಾನ,ಸಾಮಾಜಿಕ ನ್ಯಾಯ,ಸಹಬಾಳ್ವೆ ಹಾಗೂ ಸ್ವಾಭಿಮಾನದ ಸಂರಕ್ಷಣೆಗಾಗಿ ಎಂಬ ಧ್ಯೇಯೋದ್ದೇಶದಿಂದ ಸಮಾವೇಶವನ್ನು ಆಯೋಜಿಸಲಾಗಿದೆ.
ಈ ಸಮಾವೇಶದಲ್ಲಿ ಮೀಸಲಾತಿ ಹಾಗೂ ಜಾತಿ ಗಣತಿ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನದ ಭಾಗವಾಗಿ ಸಮಾವೇಶವನ್ನು ಸಂಘಟಿಸಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಿಗ್ಗೆ 11 ಗಂಟೆಗೆ ಮಾದರ ಚೆನ್ನಯ್ಯ ಗುರು ಪೀಠಕ್ಕೆ ಭೇಟಿ ನೀಡಲಿದ್ದಾರೆ ಬಳಿಕ ಸಮಾವೇಶ ಪಾಲ್ಗೊಂಡು ಸಂಜೆ 4:00ಗೆ ಬೆಂಗಳೂರಿಗೆ ಮರಳಲಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್,ಆಹಾರ ಸಚಿವ ಕೆಎಚ್ ಮುನಿಯಪ್ಪ,ಲೋಕಪಯೋಗಿ ಸಚಿವ ಸತೀಶ್ ಜಾರಕಿಹೊಳಿ,ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ,ಸಹಕಾರ ಸಚಿವ ಕೆಎನ್ ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ,ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡರಾವ್,ಪೌರಾಡಳಿತ ಸಚಿವ ರಹೀಂ ಖಾನ್ ಸೇರಿ ಹಲವರು ಸಮಾವೇಶದಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ.
150 ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ.ದೊಡ್ಡ ವೇದಿಕೆ ಪ್ರಧಾನ ವೇದಿಕೆಯಲ್ಲಿ 300 ಹಾಗೂ ಎರಡು ಬದಿಯ ಸಮಾಂತರ ವೇದಿಕೆಯಲ್ಲಿ ತಲಾ ಇನ್ನೂರು ಗಣ್ಯರು ಆಸೀನರಾಗುವ ವ್ಯವಸ್ಥೆಯನ್ನು ಮಾಡಲಾಗಿದೆ.
5 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು ಚಿತ್ರದುರ್ಗ. ದಾವಣಗೆರೆ,ಶಿವಮೊಗ್ಗ,ಬಳ್ಳಾರಿ,ವಿಜಯನಗರ, ಚಿಕ್ಕಮಂಗಳೂರು,ಹಾವೇರಿ ಮತ್ತು ಗದಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ಸಾಧ್ಯತೆ ಇದು ಸಮಾವೇಶಕ್ಕೆ ಬರುವವರಿಗೆ ಮಧ್ಯಾಹ್ನದ ಊಟಕ್ಕೆ ಪ್ರತ್ಯೇಕ ವ್ಯವಸ್ಥೆ ಕೂಡಾ ಇರಲಿದೆ.
ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು.
ಮಾರ್ಗ ಬದಲಾವಣೆ:
ರಾಷ್ಟ್ರೀಯ ಹೆದ್ದಾರಿ 48ರ ಮಾದಾರ ಚೆನ್ನಯ್ಯ ಗುರುಪೀಠದ ಸಮೀಪದಲ್ಲಿ ನಡೆಯುವ ಸಮಾವೇಶಕ್ಕೆ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದ್ದು ಹೀಗಾಗಿ ಮುರುಘ ಮಠದಿಂದ ಸೀಬಾರ ದವರಿಗೆ ಸಾರ್ವಜನಿಕ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ದಾವಣಗೆರೆ ಹೊಸಪೇಟೆ ಮಾರ್ಗವಾಗಿ ಬರುವ ವಾಹನಗಳು ನೇರವಾಗಿ ನಗರವನ್ನು ಪ್ರವೇಶಿಸಿದಂತೆ
ನಿರ್ಬಂಧಿಸಲಾಗಿದೆ.ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಾಗಿ ಚಳ್ಳಕೆರೆ ರಸ್ತೆಯ ಮೂಲಕ ಮೂಲಕ ನಗರಕ್ಕೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.