ಕಲಬುರಗಿ:ಇಲ್ಲಿನ ಸ್ವಾಮಿನಾರಾಯಣ ಗುರುಕುಲ ಅಂತರಾಷ್ಟ್ರೀಯ ವಿದ್ಯಾಸಂಸ್ಥೆ ಆವರಣದಲ್ಲಿ ನಿನ್ನೆ ಪ.ಪೂ.ಕೃಷ್ಣಚರಣದಾಸ ಸ್ವಾಮೀಜಿ,ಸತ್ಸಂಗ ಸ್ವಾಮೀಜಿ ಹಾಗೂ ಋಷಿಚರಂದಾಸ್ ಸ್ವಾಮೀಜಿ ರವರ ದಿವ್ಯ ಉಪಸ್ಥಿತಿಯಲ್ಲಿ ಗುರುಕುಲ ಗ್ರಾಂಡ್ ಎಕ್ಸಪೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ನಯನ ಪ್ರಿಯದಾಸ ಸ್ವಾಮೀಜಿಯವರ ಮಾರ್ಗದರ್ಶನದ ಮೇರೆಗೆ ವಿದ್ಯಾರ್ಥಿಗಳು ಸೋಲಾರ್ ಸ್ಮಾರ್ಟ್ ಸಿಟಿ,ಟೆಲ್ಸಾ ಪ್ರಾಜೆಕ್ಟ್,ಗಣಿತದ ಮಾದರಿಗಳು,ಆಧುನಿಕ ತಂತ್ರಜ್ಞಾನ ಬಳಸಿ ವೈವಿಧ್ಯಮಯ ಪ್ರಾಜೆಕ್ಟ್ಗಳು ಇನ್ನೂ ಹಲವಾರು ಮಾದರಿಗಳು ರಚಿಸಿ ಅವುಗಳ ವಿಶ್ಲೇಷಣೆಗಳು ನೀಡಿದರು.ಈ ಮೇಳದ ಉದ್ಘಾಟನೆಯನ್ನು ಕಲಬುರಗಿ ಜಿಲ್ಲೆಯ ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರಾದ ಶ್ರೀಯುತ ಎಂ.ಎಸ್ ಜುಗದ್ ಅವರು ಮಾಡಿದರುನಂತರ ಎಲ್ಲಾ ಪ್ರೋಜೆಕ್ಟ್’ಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳ ಉತ್ತಮ ಚಟುವಟಿಕೆಯನ್ನು ಕಂಡು ಹರ್ಷ ವ್ಯಕ್ತಪಡಿಸಿದರು. ಈ ಮೇಳದಲ್ಲಿ ಶಾಲೆಯ ಪಾಲಕರು ಪೋಷಕರು ಭಾಗವಹಿಸಿ ಮಕ್ಕಳ ಕಲಿಕಾ ಶೈಲಿಗೆ,ಶಿಕ್ಷಕರ ಮಾರ್ಗದರ್ಶನಕ್ಕೆ ಹಾಗೂ ಶಿಕ್ಷಣ ಸಂಸ್ಥೆ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಹಾಗೂ ಕಾರ್ಯಕ್ಕೆ ಪ್ರಶಂಶಿಸಿದ್ದಾರೆ.ಈ ಮೇಳ ಯಶಸ್ವಿಯಾಗಿದ್ದಕ್ಕೆ ಶಾಲೆಯ ಪೂಜ್ಯರು ಆಡಳಿತ ಮಂಡಳಿಯವರು ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.
ವರದಿ-ಅಪ್ಪಾರಾಯ ಬಡಿಗೇರ