ಬಲೆಗೆ
ನ್ಯಾಮತಿ ನಾಡಕಛೇರಿಯ ಆಡಳಿತಾಧಿಕಾರಿ ಗಣೇಶ್ ಟ್ಯಾಪ್ ಆದ ವ್ಯಕ್ತಿ.ಈತ 6,000 ಲಂಚಕ್ಕೆ ಬೇಡಿಕೆ ಇಟ್ಟು 5,000 ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದ ವೀರೇಶ್ ಎಂಬಾತ ತನ್ನ ತಮ್ಮ ವಿಶೇಷಚೇತನ ಹರ್ಷನಿಗೆ ವಿಶೇಷ ಚೇತನ ಮಾಸಾಶನ ಪಡೆಯಲು ಫೆ.9 ಕ್ಕೆ ನ್ಯಾಮತಿ ನಾಡಕಛೇರಿಗೆ ಅರ್ಜಿ ಸಲ್ಲಿಸಿದ್ದರು ಬಳಿಕ ಸದರಿ ಅರ್ಜಿಯನ್ನು ಆರೋಪಿ ಕೆ.ಜಿ.ಗಣೇಶ್
ತನ್ನ ಲಾಗಿನ್ ನಿಂದ ಮೂವ್ ಮಾಡಲು ರೂ. 6,000/-ಲಂಚದ ಹಣಕ್ಕೆ ಬೇಡಿಕೆ ಇಟ್ಟು ಅಂತಿಮವಾಗಿ ರೂ. 5000/- ಗಳಿಗೆ ಒಪ್ಪಿ ಹಣ ಹೊಂದಿಸಿಕೊಂಡು ಬರಲು ತಿಳಿಸಿದ್ದ ನಂತರ ಶ್ರೀ ಗಣೇಶ್ ಅಂಗವಿಕಲ ಮಾಸಾಶನದ ಅರ್ಜಿಯನ್ನು ಶಿಫಾರಸ್ಸು ಮಾಡಲು ಲಂಚದ ಹಣ ಬೇಡಿಕೆ ಇಟ್ಟಿದ್ದಾನೆ ಎಂದು ಲೋಕಾಯುಕ್ತಗೆ ದೂರು ಸಲ್ಲಿಸಲಾಗಿತ್ತು ಈ ದೂರಿನ ಮೇರೆಗೆ ದಾವಣಗೆರೆ ಲೋಕಾಯುಕ್ತ ಆರೋಪಿ ಗಣೇಶ್ ಬಸವನಹಳ್ಳಿ ಗ್ರಾಮದ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ 5000/- ರೂ.ಲಂಚದ ಹಣವನ್ನು ಪಡೆಯುವಾಗ ಟ್ರ್ಯಾಪ್ ಆಗಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಎಸ್ ಪಿ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನ ನೀಡಿದ್ದು, ಪೊಲೀಸ್ ಉಪಾಧೀಕ್ಷಕಿ ಕೆ.ಕಲಾವತಿ,ಪೊಲೀಸ್ ನಿರೀಕ್ಷಕ ಹೆಚ್.ಎಸ್.ರಾಷ್ಟ್ರಪತಿ ಶ್ರೀ ಮಧುಸೂದನ್ ಸಿ ಹಾಗೂ ಸಿಬ್ಬಂದಿಗಳಾದ ಶ್ರೀ ವೀರೇಶಯ್ಯ,ಸುಂದರೇಶ,ಸುರೇಶ್,ಮಲ್ಲಿಕಾರ್ಜುನ, ಧನರಾಜ್,ಮಂಜುನಾಥ,ಗಿರೀಶ,ಲಿಂಗೇಶ, ಬಸವರಾಜ್,ಕೋಟಿನಾಯ್ಕ ಭಾಗಿಯಾಗಿದ್ದರು.
ವರದಿ-ಪ್ರಭಾಕರ ಡಿ ಎಂ ಹೊನ್ನಾಳಿ