ಯಡ್ರಾಮಿ:2011ರ ನಿರ್ಭಯ ಹತ್ಯಾಪ್ರಕರಣ ಆಗಿರಬಹುದು ಅಥವಾ ದಾನಮ್ಮ ಪ್ರಕರಣ ಆಗಿರಬಹುದು ಹಾಗೂ ಸೌಜನ್ಯ ಪ್ರಕರಣ ಆಗಿರಬಹುದು ಇದೇ ರೀತಿಯಾಗಿ ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಮೇಲೆ ಅಮಾನವೀಯ ಪೈಶಾಚಿಕ ಕೃತ್ಯ ಹಾಗೂ ಲೈಂಗಿಕ ಶೋಷಣೆ ನಡೆಯುತ್ತಿರುವುದು ದುರಂತವೇ ಸರಿ ಕಾನೂನು ಕಾಯ್ದೆಗಳು ಎಷ್ಟೇ ಕಠಿಣವಾಗಿ ಜಾರಿಗೆ ಬಂದರೂ ಅತ್ಯಾಚಾರಿಗಳಿಗೆ ಕಠಿಣವಾದ ಶಿಕ್ಷೆ ಆಗದಿರುವುದು ವಿಪರ್ಯಾಸವೇ ಸರಿ ಆದಕಾರಣ ಕರ್ನಾಟಕ ಸರ್ಕಾರ ಪ್ರತಿಯೊಂದು ಪ್ರೌಢಶಾಲೆಗಳಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಗೋಸ್ಕರ ಅಥವಾ ಅವರ ಆತ್ಮ ರಕ್ಷಣೆಗೋಸ್ಕರ ಕರಾಟೆ ತರಬೇತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಹಾಗೂ ಪ್ರತಿಯೊಂದು ಪ್ರೌಢಶಾಲೆಗಳಲ್ಲಿ ಕರಾಟೆ ಶಿಕ್ಷಣ ಖಾಯಂ ಗೂಳಿಸಬೇಕು ಎಂದು ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಎಸ್.ಟಿ ಕಬಾಡ ಮೇಡಂ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ಜನ್ನ ಶಿಟೋರಿಯೋ ಕರಾಟೆ ಅಸೋಸಿಯೇಷನ್ ತಾಲೂಕ ಅಧ್ಯಕ್ಷರಾದ ಜೆಟ್ಟಪ್ಪ ಎಸ್ ಪೂಜಾರಿ ಅವರು ಭಾಗವಹಿಸಿದ್ದರು ಹಾಗು ವಿಶೇಷ ಕರಾಟೆ ಶಿಕ್ಷಕರಾದ ಸೇನಸೈ ಶಾಂತಪ್ಪ ಮಾಸ್ಟರ್ ದೇವರಮನಿ ಬಿಳವಾರ್ ಅವರು ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಿದರು ಈ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಕೆಜಿ ಪರಗೊಂಡ ಅವರು,ಶ್ರೀಮತಿ ಬೀವಿ ಸಜ್ಜನ್ ಮೇಡಂ,ಶ್ರೀ ಎಸ್ ಬೀ ಬಿರಾದರ್ ಶಿಕ್ಷಕರು,ಶ್ರೀ ಎ.ಡಿ ನಾಯಕ್,ಸಂತೋಷ್ ಎನ್ನ ಮಣ್ಣಗೆರಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.