ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಬೀದರ್ ಸೈನಿಕ ಶಾಲೆಗೆ ಭವ್ಯ ಕಟ್ಟಡ:ಸಚಿವ ಭಗವಂತ ಖೂಬಾ

ಬೀದರ್‌:ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಗೆ ಸೇರಿದ ನಗರದ ಬಿ.ವಿ.ಭೂಮರಡ್ಡಿ ಕಾಲೇಜಿನಲ್ಲಿ ನಿನ್ನೆ ನೂತನ ಸೈನಿಕ ಶಾಲೆಗೆ ಅಡಿಗಲ್ಲು,ನೂತನ ಬಸವೇಶ್ವರ ಬಿಇಡಿ ಕಾಲೇಜಿನ ಮೊದಲನೇ ಮಹಡಿ ಕಟ್ಟಡ ಹಾಗೂ ನ್ಯಾಷನಲ್‌ ಇಂಗ್ಲಿಷ್‌ ಮೀಡಿಯಂ ಪಬ್ಲಿಕ್‌ ಶಾಲೆ,ವಿಸ್ತರಿತ ಅಕಾಡೆಮಿಕ್‌ ಬ್ಲಾಕ್‌ ಅಂಡ್‌ ಮಲ್ಟಿ ಪರ್ಪಸ್‌ ಹಾಲ್‌ ಉದ್ಘಾಟಿಸಿ ಕೇಂದ್ರ ಸಚಿವರಾದ ಭಗವಂತ ಖೂಬಾ ಮಾತನಾಡಿದರು.
ಕಳೆದ ಹತ್ತು ವರ್ಷಗಳಲ್ಲಿ ಬೀದರ್‌ ಜಿಲ್ಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಹೇಳಿಕೊಳ್ಳುವ ಯೋಜನೆಗಳು ಬಂದಿವೆ.ನರೇಂದ್ರ ಮೋದಿಯವರು ಹಾಗೂ ನನ್ನ ನಿಸ್ವಾರ್ಥದಿಂದ ಇದು ಸಾಧ್ಯವಾಗಿದೆ ಎಂದರು.

ಜಿಲ್ಲೆಗೆ 12 ರಾಷ್ಟ್ರೀಯ ಹೆದ್ದಾರಿಗಳು ಮಂಜೂರಾಗಿವೆ. ಬೀದರ್‌–ಔರಾದ್‌ ರಾಷ್ಟ್ರೀಯ ಹೆದ್ದಾರಿ ಮೇಲೆ ಬರುವ ಕೌಠಾ ಸೇತುವೆ ಸ್ಥಳದಲ್ಲಿ 15 ಮೀಟರ್‌ ಉದ್ದ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣವಾಗುತ್ತಿದೆ.ಇದರಿಂದ ರೈತರಿಗೆ ಪ್ರಯೋಜನವಾಗಲಿದೆ.40 ವರ್ಷಗಳ ಹಿಂದೆ ಮೈಸೂರಿನಲ್ಲಿ ಸಿಪೆಟ್‌ ಕಾಲೇಜು ಆರಂಭಿಸಲಾಗಿತ್ತು. ಅದಾದ ನಂತರ ಈಗ ಬೀದರ್‌ನಲ್ಲಿ ಆರಂಭಗೊಂಡಿದೆ ಎಂದು ತಿಳಿಸಿದರು.
ಸಿಪೆಟ್‌ ಆರಂಭಗೊಂಡು ತರಗತಿಗಳು ಆರಂಭವಾಗಿವೆ.ರಾಜಕೀಯ ವಿರೋಧಿಗಳು ದಿಕ್ಕು ತಪ್ಪಿಸುತ್ತಿದ್ದಾರೆ.ಔರಾದ್ ತಾಲ್ಲೂಕಿನ ಬಲ್ಲೂರ ಬಳಿ ಹತ್ತು ಎಕರೆ ಜಮೀನು ಮಂಜೂರಾಗಿದೆ.₹50 ಕೋಟಿ ಕೇಂದ್ರದಿಂದ ಮಂಜೂರಾಗಿದೆ.ಅಲ್ಲಿ ಕಟ್ಟಡ ನಿರ್ಮಾಣವಾಗುವವರೆಗೆ ಬೀದರ್‌ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕವಾಗಿ ತರಗತಿಗಳನ್ನು ಆರಂಭಿಸಲಾಗಿದೆ.ರಾಜ್ಯ ಸರ್ಕಾರದ ಪಾಲಿನ ₹50 ಕೋಟಿ ಬಿಡುಗಡೆ ಮಾಡುತ್ತಿಲ್ಲ.ಸಹಕಾರವೂ ನೀಡುತ್ತಿಲ್ಲ.ಜೊತೆಗೆ ಅನಗತ್ಯ ಟೀಕೆ,ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು.

ಈ ಸಂದರ್ಭದಲ್ಲಿ ವಿಜಯಪುರ–ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ,ಕಲಬುರಗಿ ಎಚ್‌ಕೆಇ ಸಂಸ್ಥೆ ಅಧ್ಯಕ್ಷ ಭೀಮಾಶಂಕರ ಸಿ.ಬಿಲಗುಂದಿ,ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್‌ ವಾಲಿ,ಉಪಾಧ್ಯಕ್ಷ ಶರಣಬಸಪ್ಪ ಆರ್‌. ಹರವಾಲ,ಕಾರ್ಯದರ್ಶಿ ಜಗನ್ನಾಥ ಬಿ.ಬಿಜಾಪುರೆ,ಜಂಟಿ ಕಾರ್ಯದರ್ಶಿ ಮಹದೇವಪ್ಪ ವಿ. ರಾಂಪುರೆ, ನಿರ್ದೇಶಕರಾದ ಅರುಣಕುಮಾರ ಎಂ.ಪಾಟೀಲ,ಎಸ್‌.ಬಿ. ಕಾಮರೆಡ್ಡಿ,ನಾಗೇಂದ್ರ ಎಸ್‌. ಮಂಠಾಳೆ ಇತರರಿದ್ದರು.

ವರದಿ:ರೋಹನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ