ಕೊಟ್ಟೂರು:ಐತಿಹಾಸಿಕ ವಿಜಯನಗರ
ಜಿಲ್ಲೆಯ ಕರ್ನಾಟಕದಲ್ಲಿ ಪವಾಡ ಪುರುಷನೆಂದು ಖ್ಯಾತಿ ಪಡೆದಿರುವ ಪ್ರಮುಖ ಧಾರ್ಮಿಕ ಕ್ಷೇತ್ರ ಕೊಟ್ಟೂರಿನಲ್ಲಿ ಪವಾಡ ಪುರುಷ ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವ ಮಾರ್ಚ್ 04 ರಂದು ನಡೆಯಲಿದೆ.
ಪ್ರತಿ ವರ್ಷದಂತೆ ದೇವಸ್ಥಾನದ ಕಾರ್ಯಕ್ರಮದಲ್ಲಿ ಒಂದಾದ ತೇರುಗಡ್ಡೆ ಹೊರ ಹಾಕುವುದು ಬುಧವಾರ ರಂದು ಸಂಜೆ ಕೊಟ್ಟೂರಿನ ಭಕ್ತರ ಸಮ್ಮುಖದಲ್ಲಿ ಆರಾಧ್ಯದೈವ ಶ್ರೀ ಗುರುಕೊಟ್ಟೂರೇಶ್ವರ ರಥದ ಗಡ್ಡೆಯನ್ನು ಹೊರಹಾಕಲಾಯಿತು.
ನೆರೆದಿದ್ದ ಭಕ್ತರು “ಶ್ರೀ ಗುರು ಕೊಟ್ಟೂರು ದೊರೆಯೇ ನಿನಗಾರು ಸರಿಯೇ…ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್…’ಎಂಬ ಜಯಘೋಷ ಮೊಳಗಿಸುತ್ತಾ ರಥದ ಗಡ್ಡೆಯನ್ನು ಹೊರ ತಂದರು.
ರಾತ್ರಿ ರಥದ ಹತ್ತಿರ ಗುಗ್ಗರಿ ಪೂಜೆ ನಡೆಯುತ್ತದೆ.15 ಫೆಬ್ರವರಿ 2024 ರಂದು ಗುರುವಾರ ಬೆಳಿಗ್ಗೆ 11:00ಗೆ ವಾರ್ಷಿಕ ರಥೋತ್ಸವದ ಪೂರ್ವಭಾವಿ ಸಿದ್ಧತಾ ಸಭೆಯನ್ನು ಮಾನ್ಯ ಶಾಸಕರು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಹೊಸಪೇಟೆ ಇವರ ಉಪಸ್ಥಿತಿಯಲ್ಲಿ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ ಜಾತ್ರೆ ಬಗ್ಗೆ ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯ ತಿಳಿಸಬೇಕು ಎಂದು ಕೋರಲಾಗಿದೆ.
ವರದಿ-ವೈ.ಮಹೇಶ್ ಕುಮಾರ್,ಕೊಟ್ಟೂರು