ಹುನಗುಂದ:ತಾಲೂಕಿನ ತಿಮ್ಮಾಪುರ ಗ್ರಾಮದ ರೆಡ್ಡಿ ಸಮಾಜದ ಹಿರಿಯರಾದ ಶ್ರೀಮತಿ ಗಂಗಮ್ಮ ನಿಂಗನಗೌಡ ಹಳ್ಳೂರ ಇವರು ಇಂದು ಸಾಯಂಕಾಲ 5: 10 ನಿಮಿಷಕ್ಕೆ ತಿಮ್ಮಾಪುರದಲ್ಲಿ ಹೃದಯಾಘಾತದಿಂದ ನಿಧನರಾದರು ಮೃತರಿಗೆ 69 ವರ್ಷ ವಯಸ್ಸಾಗಿತ್ತು ಮೃತರ ಅಂತ್ಯಕ್ರಿಯೆಯು ತಿಮ್ಮಾಪುರ ಗ್ರಾಮದಲ್ಲಿ ನಾಳೆ ಮಧ್ಯಾಹ್ನ 12,00 ಗಂಟೆಗೆ ಜರಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ ಮೃತರಿಗೆ ಸುಪುತ್ರರಾದ ಮಹಾಂತೇಶ ಮತ್ತು ವಿಜಯಕುಮಾರ(ಇಂಜಿನಿಯರ್) ಪುತ್ರಿಯರಾದ ಉಮಾ,ಸವಿತಾ,ಸುಮಾ ಹಾಗೂ ಸೊಸೆಯಂದಿರು ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ
ಸಂತಾಪ:ಗಂಗಮ್ಮ ನಿಧನಕ್ಕೆ ಮಾಜಿ ಸಚಿವ ಎಸ್ ಆರ್ ಪಾಟೀಲ್ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.
