*ಅತಿಯಾಗಿ ಯೋಚಿಸುವುದು ಬಿಡಿ.
*ನೋವಿನಲ್ಲೂ ನಗುವುದು ಕಲಿಯಿರಿ.
*ಅತಿಯಾದ ವಾದದಿಂದ ಪ್ರಯೋಜನ ಇಲ್ಲದಿದ್ದಾಗ ಮೌನವಾಗಿರುವುದು ಲೇಸು.
*ತಿರಸ್ಕರಿಸಿದವರನ್ನು ತಟಸ್ಥವಾಗುವಂತೆ ಮಾಡಿ.
*ಒಬ್ಬಂಟಿಯಾಗು ಪರವಾಗಿಲ್ಲ,ಆದರೆ ದುಷ್ಟರ ಗುಂಪಿಗೆ ರಾಯಭಾರಿ ಆಗಬೇಡಿ.
*ದೇವರ ಮುಂದೆ ಅಷ್ಟೇ ಕಣ್ಣೀರು ಹಾಕಿ ಅದನು ನೋಡಿ ಹಾಸ್ಯ ಮಾಡುವವರಿದ್ದಾರೆ.
*ನೊಂದಾಗ ಮೌನಿ ಆಗುತ್ತೇವೆ ಯಾಕೆ? ಮೌನಕ್ಕೆ ಸಾವಿರ ಅರ್ಥವಿದೆ.
*ಮನಸ್ತಾಪಗಳನ್ನು ಅದರ ಪಾಡಿಗೆ ಬಿಟ್ಟು ಬಿಡಿ.
*ತಾಳ್ಮೆಯನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಿ.
*ಬಂದಾಗಲೇ ಬದುಕು ಸುಂದರ.
*ಪುಸ್ತಕಗಳನ್ನು ಆತ್ಮೀಯರಂತೆ ಸ್ವೀಕರಿಸಿ.ಎಂದಿಗೂ ಅರ್ಧದಲ್ಲೇ ಬಿಟ್ಟು ಹೋಗುವುದಿಲ್ಲ ಹಾಗೆಯೇ ಮೋಸ ಮಾಡುವುದಿಲ್ಲ.
*ಮನಸ್ಸಿಗೆ ಕಡಿವಾಣ ಹಾಕಿ.
*ಅಜ್ಞಾನಿಗಳ ಮುಂದೆ ವಿಷಯಗಳು ಪ್ರಸ್ತಾಪಿಸಬೇಡಿ.
*ಅಂತರಂಗ ಸೌಂದರ್ಯ ಪ್ರಜ್ಞೆಯಿರಬೇಕು.
*ಬೆನ್ನು ಹಿಂದೆ ಮಾತನಾಡುವವರಿಗೆ ಅವರ ಪಾಡಿಗೆ ಬಿಟ್ಟು ಬಿಡಿ.
*ಚುಚ್ಚು ಮಾತು ಆಡಿದವರಿಗೆ ಧನ್ನವಾದ ಹೇಳಿ ಏಕೆಂದರೆ ನಿಮ್ಮ ಮುಂದಿನ ಹೆಜ್ಜೆಗೆ ಅವರೇ ಸ್ಫೂರ್ತಿ ಅಲ್ಲವೇ? ಯೋಚಿಸಿ.
ಲೇಖಕಿ-ರಮ್ಯಾ ಮಲ್ಲಿಕಾರ್ಜುನ ಕಳ್ಳಿಮನಿ