ಕೊಟ್ಟೂರು:ಕರ್ನಾಟಕ ರಾಜ್ಯ ಸರ್ಕಾರಿ ಸಂಘ, ಬೆಂಗಳೂರು ಹಾಗೂ ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳು ಸೇರಿ ದಿನಾಂಕ: 27.02.2024 ರಂದು ಅರಮನೆ ಮೈದಾನ,ಬೆಂಗಳೂರಿನಲ್ಲಿ ಮಹಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.ಈ ಸಮ್ಮೇಳನದಲ್ಲಿ ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಿದ್ದು,
ಪ್ರಮುಖವಾಗಿ
1)ಹಳೆ ಪಿಂಚಣಿ ಯೋಜನೆ ಮರುಜಾರಿ
2)7ನೇ ವೇತನ ಆಯೋಗದ ವರದಿಯ ಅನುಷ್ಠಾನ, 3)ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಈ ಬೇಡಿಕೆಗಳ ಈಡೇರಿಸಲು ಸರ್ಕಾರವನ್ನು ಒತ್ತಾಯಿಸಲು ಬೃಹತ್ ಸಮ್ಮೇಳನವನ್ನು ಆಯೋಜನೆ ಮಾಡಲಾಗಿದ್ದು,ಸದರಿ ಸಮ್ಮೇಳನಕ್ಕೆ ನೌಕರರು ಭಾಗವಹಿಸಿ ಯಶಸ್ವಿಗೊಳಿಸಲು ಕೋರಿ ಕೊಟ್ಟೂರಿನ ತಹಶೀಲ್ದಾರರ ಕಾರ್ಯಾಲಯದ ಅಧಿಕಾರಿ/ಸಿಬ್ಬಂದಿಯವರನ್ನು ಆಹ್ವಾನಿಸುತ್ತಾ,ಆಹ್ವಾನ ಪತ್ರಿಕೆಯನ್ನು ಶಿರಸ್ತೇದಾರರಾದ ಅನ್ನದಾನೇಶ ಬಿ ಪತ್ತಾರ ಇವರಿಗೆ ನೀಡಲಾಯಿತು.ದಿ:27.02.2024 ಮತ್ತು 28.02.2024 ರಂದು ಎರಡು ದಿನಗಳ ಅನ್ಯ ಕರ್ತವ್ಯದ ಮೇರೆಗೆ(ಒ.ಒ.ಡಿ) ಸೌಲಭ್ಯವಿದ್ದು, ಕೊಟ್ಟೂರಿನಿಂದ ವಾಹನದ ವ್ಯವಸ್ಥೆಯನ್ನು ಸಹಾ ಮಾಡಲಾಗಿದೆ ಎಂದು ಕೊಟ್ಟೂರು
ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಜಗದೀಶ.ಕೆ ಇವರು ಮನವಿ ಮಾಡಿದರು.ಈ ಸಮಯದಲ್ಲಿ ಸಂಘದ ಕಾರ್ಯದರ್ಶಿ ಜಿ.ಸಿದ್ದಪ್ಪ,ಖಜಾಂಚಿ ಬಸವರಾಜ,ಉಪಾಧ್ಯಕ್ಷರಾದ ಎಸ್.ಎಂ.ಗುರುಬಸವರಾಜ,ನಿರ್ದೇಶಕರಾದ ವಿನಯ, ರವಿಕುಮಾರ ತಾಲೂಕ ಕಛೇರಿಯ ಸಿಬ್ಬಂದಿ ಇದ್ದರು.
ವರದಿ-ವೈ.ಮಹೇಶ್ ಕುಮಾರ್ ಕೊಟ್ಟೂರು