ವಡಿಗೇರಾ:ಶಿಕ್ಷಣದ ಮಹತ್ವವನ್ನು ತಿಳಿದುಕೊಳ್ಳುವ ಮೂಲಕ ಎಲ್ಲರೂ ಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿ ದೀಪವಾಗಿ ಎಂದು ವಡಗೇರಾ ತಹಶಿಲ್ದಾರ ತಾಲ್ಲೂಕು ಶ್ರೀನಿವಾಸ ಚಾಪಲ್ ಹೇಳಿದರು.
ವಡಗೇರಾ ತಾಲ್ಲೂಕಿನ 285 ನೇ ಸಂತ ಸೇವಲಾಲ ಅವರ ಜಯಂತಿಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇಂತಹ ಮಹಾನ್ ಸಂತ ನಮ್ಮ ನಾಡಿನಲ್ಲಿ ನೆಲೆಸಿದ್ದರು ಎಂಬುದೇ ನಮಗೆ ಹೆಮ್ಮೆಯ ವಿಚಾರ.ಇವರಂತೆ ಹಲವು ಮಹನೀಯರ ವಿಚಾರಧಾರೆಗಳನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಗಳು ಅರ್ಥಪೂರ್ಣವಾಗುತ್ತದೆ.ಇಂತಹ ಮಹನೀಯರನ್ನು ಒಂದು ಜಾತಿ ಅಥವಾ ಧರ್ಮಕ್ಕೆ ಮೀಸಲಾಗಿಸದೇ ಸರ್ವರ ಸಾಂಸ್ಕೃತಿಕ ಹಾಗೂ ಧಾರ್ಮಿಕ ರಾಯಭಾರಿಗಳಾಗಿ ಸ್ವೀಕರಿಸಿದಾಗ ಮಾತ್ರವೇ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸೇವಾ ಲಾಲರು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಲು ಪ್ರೇರೇಪಿಸಿದರು.ತನ್ನ ಸಮಾಜದ ಜನರ ಕಷ್ಟಕ್ಕಾಗಿ ತಮ್ಮ ಪ್ರಾಣಾರ್ಪಣೆಗೂ ಸಿದ್ದರಾಗಿದ್ದರು. ಎಂದು ಬಸವರಾಜ್ ರಾಠೊಡ ಹೇಳಿದರು.
ಮಾನ್ಯ ಶ್ರೀನಿವಾಸ ಚಾಪಲ್ ತಹಶಿಲ್ದಾರರು,ಪ್ರಕಾಶ ತಹಶಿಲ್ದಾರರರು ಗ್ರೇಡ್-2,ಮಾನ್ಯ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಶೋಕ ಸಾಹು ಕರಣಿಗಿ, ಮಾಜಿ ಅಧ್ಯಕ್ಷರಾದ ಗೋಪಾಲನಾಯಕ,ಮಲ್ಲಣ್ಣ ನೀಲಹಳ್ಳಿ ಹಾಗೂ ಸಮಾಜದ ಮುಖಂಡರಾದ ರೆಡ್ಡಿ ರಾಥೋಡ್,ಲಕ್ಷ್ಮಣ್ ನಾಯಕ್,ರಾಜು ನಾಯಕ್, ಬಸವರಾಜ,ಧರ್ಮಣ್ಣ,ಬಸವರಾಜ್ ರಾಥೋಡ, ರಮೇಶ್,ಚನ್ನಪ್ಪ ಬೀರನಕಲ್,ರಾಜಪ್ಪ,ಗೋಪಾಲ ನಾಯಕ,ಗೋವಿಂದ ಚವ್ಹಾಣ,ಗೋವಿಂದ ಕಾರಭಾರಿ ಮತ್ತು ತಾಲ್ಲೂಕು ಸಿಬ್ಬಂದಿ ವರ್ಗ ಹಾಗೂ ಸೇರಿದಂತೆ ಅನೇಕರು ಇದ್ದರು.
ವರದಿ:ಶಿವರಾಜ್ ಸಾಹುಕಾರ್,ವಡಗೇರಾ