ನನ್ನ ಕವನಗಳ ಸಾರಥಿ ಕೃಷ್ಣಸುಂದರಿ
ಸಾವಿರ ಜನರೊಳಗಿದ್ದರು
ಮನಸೆಳೆಯುವ ಮನೋಹರಿ
ಈ ಕಪ್ಪು ವರ್ಣದ ಕಿನ್ನರಿ
ನಾ ಬರೆಯುವ ಕವಿತೆಗಳಿಗೆ
ಅವಳೇ ರೂವಾರಿ
ನನ್ನ ಲೇಖನಿಗೆ ನೀಲಿ ಶಾಯಿಯಿವಳು
ನನ್ನೆಲ್ಲ ಕವಿತೆಗಳಿಗೆ ಜೀವ ಭಾವ ನನ್ನವಳು
ಮೂರ್ಖನನ್ನೂ ಮಹಾರಾಜ ಮಾಡುವ
ಮಹಾಜ್ಞಾನಿ ನನ್ನವಳು
ನನ್ನ ಬಾಳಿನ ಬೆಳಕಿವಳು
ಬೆಡಗು ಬಿನ್ನಾಣದಲ್ಲಿ ವಯ್ಯಾರಿ
ಅವಳೆ ನನ್ನ ಕನಕ ಸುಂದರಿ
ಕೃಷ್ಣೆ ವರ್ಣದಲ್ಲಿ ಸ್ವಲ್ಪ ಕಪ್ಪು
ಮನಸ್ಸು ಕೆನೆ ಹಾಲಿನಂತೆ ಬಿಳುಪು
ಕಲ್ಲೆದಯನ್ನು ತನ್ನತ್ತ ಸೆಳೆಯುವ
ಕಣ್ಣುಗಳ ಹೊಳಪು
ಕೃಷ್ಣೆಯ ಸೌಂದರ್ಯ ಬಲು ಅಪರೂಪ
ರಂಭೆ,ಮೇನಕೆ,ಉರ್ವಶಿಯ ತದ್ರೂಪ
ಒಂಚೂರು ನಾನು ನನ್ನಿಂದಲೇ ಎನ್ನುವ ದಿಮಾಕು
ಇದು ಬಿಟ್ಟರೆ ನಿನಗೆ ನನ್ನ ಕಡೆಯಿಂದ
ಬಹುಪರಾಕ್
ನನ್ನ ಕೃಷ್ಣೇ ಕೊಂಚ ಕಪ್ಪು
ನಾನು ಸ್ವಲ್ಪ ಬಿಳುಪು
ಕೃಷ್ಣೆಯ ಮೇಲೆ ನನಗೆ ವಿಪರೀತ ಪ್ರೀತಿ
ಅವಳು ಮಲೆನಾಡ ಅಡಿಕೆ
ನಾನು ಮೃಸೂರು ವಿಳ್ಯದೆಲೆ
ಅವಳು ದಿನವೆಲ್ಲಾ ಬಿಸಿಲಲ್ಲಿದ್ದರು
ಬದಲಾಗದ ಬಣ್ಣ
ಬೆಳ್ಳಗಿರುವ ನಾನು ಬಳಿಯುತ್ತಿರಬೇಕು
ಆಗಾಗ ಸುಣ್ಣ ಬಣ್ಣ
ನಗು ನಗುತ್ತ ತನ್ನೆಲ್ಲ ಕಷ್ಟಗಳ
ನುಂಗುವ ಬಂಗಾರದ ಜಿಂಕೆ ನನ್ನವಳು
ಅವಳು ನೀರಾದರೆ ನಾನು ಮಿನಾಗುವೆ
ಕೃಷ್ಣೆ ಮಳೆಯಾದರೆ ನಾನು ಅವಳ
ಪ್ರೀತಿಗಾಗಿ ಕಾಯುವ ಇಳೆಯಾಗುವೆ
ನನ್ನ ಪ್ರೀತಿಯ ಅರಿಯಬೇಕಿತ್ತು ನನ್ನವಳು
ಪ್ರೀತಿಸಿದವನ ಮನಸ್ಸು ಬಲು ಮೃದು
ಪದೇ ಪದೇ ಈ ಮೂರ್ಖನ ಮನಸು
ಮಿಡಿಯುತ್ತಿದೆ ಅವಳಿಗಾಗಿ ಪ್ರತಿ ಕ್ಷಣ
ಬರಬಹುದೆ ಈ ಮೂರ್ಖನ
ಹೃದಯ ಬೆಳಗುವ ಮಹಾರಾಣಿಯಾಗಿ..
-ವಿ.ಶ್ರೀನಿವಾಸ
ವಾಣಿಗರಹಳ್ಳಿ.