ಯಡ್ರಾಮಿ:ರಾಜ್ಯದ ಮುಖ್ಯಮಂತ್ರಿಗಳು ಮಂಡಿಸಿರುವಂತಹ ಬಜೆಟ್ ಕೇವಲ ಲೋಕಸಭಾ ಚುನಾವಣೆಗೆ ಜನಸಾಮಾನ್ಯರ ಮೂಗಿಗೆ ತುಪ್ಪ ಸವರಿದಂತಾಗಿದೆ ಕಾಂಗ್ರೆಸ್ ಪಕ್ಷದವರು ಹೇಳಿಕೊಳ್ಳುವಂತೆ ಬಜೆಟ್ ನಲ್ಲಿ ಯಾವುದೇ ಹೊಸ ಯೋಜನೆಗಳಿಲ್ಲ.ಬೇಸಿಗೆಯ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಚರ್ಚೆಯಾಗಿಲ್ಲ ಅಷ್ಟೇ ಅಲ್ಲದೆ ನಮ್ಮ ರೈತರು ಈ ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಆಗಬಹುದೆಂಬ ಹುಮ್ಮಸ್ಸಿನಲ್ಲಿದ್ದ ರೈತರಿಗೆ ಈ ಬಜೆಟ್ ನಿರಾಶಾದಾಯಕವಾಗಿ ರೈತರಿಗೆ ಬರಗಾಲದಿಂದ ತತ್ತರಿಸಿ ಸಾಲದ ಸುಳಿಯಿಂದ ಹೊರ ಬರಲಾಗದೆ ಹತಾಶೆಯ ಸ್ಥಿತಿ ತಲುಪಿ ನಾಡಿನ ರೈತರು ತತ್ತರಿಸಿ ಹೋಗಿದ್ದಾರೆ ಅಷ್ಟೇ ಅಲ್ಲದೆ ನೊಂದಣಿ ಮುದ್ರಾಂಕ ಜೀವನ ಉಪಯುಕ್ತ ವಸ್ತುಗಳು ಅಬಕಾರಿ ಹೀಗೆ ಇನ್ನು ಅನೇಕ ಕಡೆಗಳಲ್ಲಿ ತೆರಿಗೆ ಹೆಚ್ಚಿಸಿ ಬಡವರ ಹಾಗೂ ಮಧ್ಯಮ ವರ್ಗದವರ ಜೀವನ ಭಾರವಾಗಿಸುವ ಈ ಬಜೆಟ್ ಸಂಪೂರ್ಣ ನಿರಾಶದಾಯಕವಾಗಿದೆ ಸಾಮಾನ್ಯ ಜನರಿಗೆ ನ್ನಿಸಪ್ರಯೋಜಕ ಬಜೆಟ್ ಇದು ಆಗಿದೆ ಮುಖ್ಯಮಂತ್ರಿಗಳು ಕೇವಲ ಗ್ಯಾರಂಟಿಗಳಲ್ಲಿ ವಿಶ್ವಾಸವಿಟ್ಟು ಬಜೆಟ್ ಮಂಡಿಸಿರುವುದು ರಾಜ್ಯದ ಅಭಿವೃದ್ಧಿಗೆ ಕುಂಠಿತ ಹಾಗೂ ಸರಕಾರದಿಂದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಯೋಜನೆಗಳು ಪ್ರಸ್ತಾಪಿಸಿಲ್ಲ ಕಾರ್ಮಿಕ ವರ್ಗ ಅತಿಥಿ ಉಪನ್ಯಾಸಕರು ಹಾಗೂ ಕೂಲಿ ಕಾರ್ಮಿಕರು ವಿದ್ಯಾರ್ಥಿ ವೇತನದ ಬಗ್ಗೆ ಹಾಗೂ ಹಿಂದಿನ ಸರಕಾರದಲ್ಲಿ ಜಾರಿ ಮಾಡಿದಂತಹ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಮತ್ತು ವಸತಿ ನಿಲಯದಲ್ಲಿ ಹಾಗೂ ಬಿಸಿಎಂ ವಸತಿ ನಿಲಯದಲ್ಲಿ ಮಹಿಳಾ ಸ್ವಯಂ ರಕ್ಷಣೆಯ ದೃಷ್ಟಿಯಿಂದ ಕರಾಟೆ ತರಬೇತಿಯ ಅನುದಾನ ಘೋಷಣೆ ಮಾಡದಿರುವುದು ದುರಂತವೇ ಸರಿ ಈ ಬಾರಿ ಮಂಡಿಸಿದ ಬಜೆಟ್ ಸಂಪೂರ್ಣ ನಿಷ್ಪ್ರಯೋಜಕ ಹಾಗೂ ನಿರಾಶದಾಯಕ ಬಜೆಟ್ ಆಗಿದ್ದು ನಾಡಿನ ರೈತರಿಗೆ ಯಾವುದೇ ರೀತಿಯ ಅನುಕೂಲಕರವಾದ ಬಜೆಟ್ ಇದು ಆಗಿರುವುದಿಲ್ಲ ಎಂದು ಯಡ್ರಾಮಿ ತಾಲೂಕ ಕರ್ನಾಟಕ ಪ್ರದೇಶ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಮಾಳು ಕಾರಗೊಂಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.