ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರಖೇಡ ಪಿಕೆಪಿಎಸ್ ರವಿವಾರ ನಡೆದ ಚುನಾವಣೆಯಲ್ಲಿ ಹಳೆ ಬಣವು ಭರ್ಜರಿ ಜಯಗಳಿಸಿದ್ದು ವಿರೋಧ ಬಣವು ಎರಡು ಸ್ಥಾನ ಮಾತ್ರ ಗೆದ್ದಿತ್ತು.ಒಟ್ಟು ಒಂಬತ್ತು ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಅದರಲ್ಲಿ ಏಳು ಸ್ಥಾನಗಳಲ್ಲಿ ಹಳೆಯ ಬಣದವರು ವಿಜೇತರಾಗಿದ್ದು, ಎರಡು ಸ್ಥಾನ ಮಾತ್ರ ಹೊಸ ಬಣದವರು ವಿಜೇತರಾಗಿ ತೃಪ್ತಿ ಪಡಬೇಕಾಯಿತು.ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಪಿಎಸ್ಐ ಮಂಜುನಾಥ್ ಹುಲಕುಂದ್ ಅವರು
ಎ ಎಸ್ ಐ ಗಳಾದ
ಡಿಎಲ್ ರಾಥೋಡ್
ಪಿ ಐ ಅರವತ್ತು,
ಎನ್.ಸಿ.ಜೆವೂರ್
ಹಾಗೂ ಪೋಲಿಸ್ ಸಿಬ್ಬಂದಿಗಳಾದ
ಎಸ್ ಪಿ ಕಾಂಬಳೆ,
ಎ ಎಸ್ ಗೋರ್ನಾಳ್,
ರಾಜಶೇಖರ್ ಕುಂಬಾರ್,
ಸಿದ್ದು ದಿಂಡವಾರ್,
ರಮೇಶ್ ಬಿರಾದಾರ್,
ಪ್ರಕಾಶ್ ನಾಯಕ್ ಮುಂತಾದವರ ಬಿಗಿ ಬಂದೋಬಸ್ತ್ ನ ಪರಿಣಾಮವಾಗಿ ಶಾಂತಿಯುತ ಮತದಾನ ನಡೆಯಿತು.ಈ ಚುನಾವಣೆಯಲ್ಲಿ ಅಶೋಕ್ ಕಂಡೆ ಕಾರ್,
ಭೀಮಾಶಂಕರ ಆಳುರ,
ಪ್ರಭುಲಿಂಗ ಬಿದರಕೋಟಿ
ಮುಂತಾದವರು ಸೇರಿಕೊಂಡು ತಮ್ಮ ಬಣದ ಗೆಲುವಿಗೆ ಸಾಕಷ್ಟು ಪ್ರಯತ್ನ ಮಾಡಿ ವಿಜಯದ ಮಾಲೆಯನ್ನು ಕೊರಳಿಗೆ ಹಾಕಿಸಿದ್ದಾರೆ.
ವಿಜೇತರಾದ ಅಭ್ಯರ್ಥಿಗಳ ವಿವರ ಹೀಗೆ ಇದೆ
1) ಅಣ್ಣಪ್ಪ ಭೀಮಶ್ಯಾ ಬಿದರ ಕೋಟಿ
2) ಶ್ರೀಶೈಲ್ ಲಕ್ಷ್ಮಣ್ಣ ಸಾವಳಗಿ
3) ಗುರುನಾಥ್ ಜಕ್ಕಪ್ಪ ಹವಳಗಿ
4) ದಿಲೀಪ್ ರುಪಸೆನ್ ಮರಗೂರ
5) ಮೋಹನ್ ಖಂಡೆಕರ್
6) ಅಣ್ಣಾರಾಯ ಮಲಕನಗೌಡ ಪಾಟೀಲ್
7) ಮಲ್ಲಿಕಾರ್ಜುನ್ ಮಡ್ಡಿಮನಿ
8) ರಾಜಕುಮಾರ್ ಕೌಲಗಿ
9)ಶಾಂತಪ್ಪ ಅಂದೇವಾಡಿ
ಹಳೆಯ ಬಣದ ಕಾರ್ಯಕರ್ತರು ಮುಖಂಡರು ಹಾಗೂ ಅಭ್ಯರ್ಥಿಗಳು ಶ್ರೀ ಬಸವೇಶ್ವರ ವೃತ್ತದಿಂದ ಜಯ ಘೋಷದೊಂದಿಗೆ ಮೆರವಣಿಗೆಯನ್ನು ಸಿದ್ಧಾರೂಢ ಮಠ,ಶಂಕರಲಿಂಗ ದೇವಸ್ಥಾನ,ಗಾಂಧೀಚೌಕ ಮಾರ್ಗವಾಗಿ ಗಂಗಲಿಂಗ ದೇವಸ್ಥಾನ,ಬಸ್ಟ್ಯಾಂಡ್ ವರೆಗೂ ತಮ್ಮನ್ನು ಚುನಾವಣೆಯಲ್ಲಿ ಗೆಲ್ಲಲು ಸಹಕರಿಸಿದ ಎಲ್ಲಾ ಮತದಾರರಿಗೂ ಹಾಗೂ ಊರ ಗ್ರಾಮಸ್ಥರಿಗೆ ಧನ್ಯವಾದ ಹೇಳುತ್ತಾ ಮೆರವಣಿಗೆಯಲ್ಲಿ ಸಾಗಿದರು.
ವರದಿ ಮನೋಜ್ ನಿಂಬಾಳ