ಹನೂರು : ಪಶು ಆಸ್ಪತ್ರೆ ಇಲಾಖೆಯ ಸಭಾಂಗಣದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೊಂದಾಯಿತ ಅರ್ಹ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್ಗಳನ್ನು ಶಾಸಕರಾದ ಎಂ ಆರ್.ಮಂಜುನಾಥ್ ರವರು ವಿತರಿಸಿದರು .
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ ಟಾಪ್ ನೀಡಿದ ನಂತರ ಮಾತನಾಡಿದ ಶಾಸಕರು ಕಾರ್ಮಿಕರ ಮಕ್ಕಳು ಸಹ ಇನ್ನೂಳಿದ ಮಕ್ಕಳಿಗೆ ಕಡಿಮೆಯಿಲ್ಲದಂತೆ ಬೆಳವಣಿಗೆ ಕಾಣುತ್ತಿರುವುದು ಬಹಳ ಉತ್ತಮ ಇವತ್ತಿನ ದಿನದಲ್ಲಿ ಸ್ಪರ್ಧಾತ್ಮಕಯುಗ ನಿಮಗೆ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಪಡೆದು ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆರಲು ಅನುಕೂಲವಾಗುತ್ತದೆ ನಿಮ್ಮ ಭವಿಷ್ಯ ಉಜ್ವಲವಾದ ವಾತವರ್ಣ ನಿರ್ಮಾಣ ಮಾಡಿಕೊಳ್ಳಲು ಸಹಕಾರಿಯಾಗಲಿ ಎಂದರು .
ಜಿಲ್ಲಾ ಕಾರ್ಮಿಕ ಅಧಿಕಾರಿ ಸವಿತಾ ರವರು ಮಾತನಾಡಿ
ಚಾಮರಾಜನಗರ ಜಿಲ್ಲೆಯಲ್ಲಿ 2600 ಅರ್ಜಿ ಬಂದಿದ್ದು . ಸರ್ಕಾರವು ಚಾಮರಾಜನಗರ ಜಿಲ್ಲೆಗೆ 200 ಲ್ಯಾಪ್ ಟಾಪ್ ಗಳನ್ನು ನೀಡಿದ್ದು ಇದನ್ನು ಚಾಮರಾಜನಗರ ಜಿಲ್ಲೆಯ 5 ತಾಲ್ಲೂಕಿಗೆ ಸಮಾನಾಗಿ ಹಂಚಿಲಾಗಿದೆ .ಅದರಲ್ಲಿ ಹನೂರು ತಾಲ್ಲೂಕಿನಲ್ಲಿ 40 ಜನರಿಗೆ ನೀಡಿದ್ದು ಅದರಲ್ಲಿ 20 ಪ್ರಥಮ ಪಿ ಯು ಸಿ ಮಕ್ಕಳಿಗೆ 20 ದ್ವಿತೀಯ ಪಿ ಯುಸಿ ಅರ್ಹ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ. ಹಾಗೂ ಸರ್ಕಾರವು ಕಟ್ಟಡ ಕಾರ್ಮಿಕ ಮಕ್ಕಳಿಗೆ ಉಪಯೋಗ ವಾಗಲೇಂದು ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕಾಧಿಕಾರಿಗಳಾದ ಉಮೇಶ
, ಹನೂರು ವೃತ್ತ ಕಾರ್ಮಿಕ ನಿರೀಕ್ಷಕರಾದ ಪ್ರಸಾದ್ , ಮಕ್ಕಳು ಪೋಷಕರು ,ಕಾರ್ಮಿಕರು , ಹಾಗೂ ಇನ್ನಿತರರು ಹಾಜರಿದ್ದರು .
ವರದಿ :ಉಸ್ಮಾನ್ ಖಾನ್.