ಗದಗ ಇಲ್ಲಿಯ ಸಮಿಪದ ತಿಮ್ಮಾಪೂರ ಗ್ರಾಮದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಪ್ರೌಢ ಶಾಲಾ ವಿಭಾಗದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿಗಳ ಸಂಸ್ಕೃತಿ ಜನಪದ ಸಂಭ್ರಮ ಸಡಗರದಿಂದ ಜರುಗಿತು.
ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿಯಾದ ರವೀಂದ್ರನಾಥ ಬಿ ದಂಡಿನ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ವಿನಾಕಾರಣ ಸಮಯವನ್ನು ಕಾಲಹರಣ ಮಾಡದೇ ಓದಿಗೆ ಸಮಯ ಮೀಸಲಿರಿಸಿ ಇಡಬೇಕು ಎಂದರು.
ಮಕ್ಕಳ ಕೈಯಲ್ಲಿ ಮೊಬೈಲ್ ಫೋನ್ ಬಳಕೆ ಹಾನಿಕಾರಕ ಮಿತವಾಗಿ ಬಳಸಬೇಕು.
ವಿದ್ಯಾರ್ಥಿಗಳ ಓದುವಿಕೆ ಬೆಳಗಿನ ಜಾವ ಸೂಕ್ತ ಸಮಯ ಈ ಸಮಯದಲ್ಲಿ ಮನಸು ಏಕಾಗ್ರತೆ ಇರುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಸಹ ಶಿಕ್ಷಕರಾದ ವ್ಹಿ ಆರ್ ಹುಯಿಲಗೋಳ ಅವರು ಮಾತನಾಡಿ ವಿದ್ಯಾರ್ಥಿಗಳು ಮುಂದಿನ ನಾಳಿನ ನಾಡಿನ ಪ್ರಜ್ಞಾವಂತ ಪ್ರಜೆಗಳು ವಿದ್ಯಾರ್ಥಿ ಜೀವನದಲ್ಲಿ ಓದಿಗೆ ಪ್ರಾಮುಖ್ಯತೆ ನೀಡಿ ವಿದ್ಯಾವಂತರಾಗಿ ಸಮಾಜ ನಿಮ್ಮನ್ನು ಗುರುತಿಸುವಂತಾಗಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಜನಪದ ಸೊಗಡಿನ ಕೋಲಾಟ ಕಂಸಾಳೆ ನೃತ್ಯ ಪ್ರದರ್ಶನ ರೂಪಕ ಜನಪ ಹಾಡು ಬಹಳ ಆಕರ್ಷಿಸಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯರಾದ ಸಿದ್ದು ಬಿ ಯಾಪಲಪರವಿ,ಸುರೇಶ್ ಕಮ್ಮಾರ,ಸಿ ಕೆ ಹೊಸಹಳ್ಳಿ,ಮಲ್ಲಪ್ಪ ಇದ್ಲಿ,ಹನುಮವ್ವ ತಳವಾರ, ಅಕ್ಕಮ್ಮ ಹಿರೆಬಸಣ್ಣವರ,ಬಾಳಪ್ಪ ಗಂಗರಾತ್ರಿ, ಶರಣಪ್ಪ ಜೋಗಿನ,ಅಲ್ಲಿ ಸಾಬ್ ನದಾಫ, ಪಾಲ್ಗೊಂಡಿದ್ದರು.
ಪ್ರಾರ್ಥನ ಗೀತೆಯನ್ನು ಸುನಿತಾ ಕೂಪ್ಪದ ಹಾಗೂ ಸಂಗಡಿಗರು ಹಾಡಿದರು.
ಪ್ರಾಸ್ತಾವಿಕವಾಗಿ ನುಡಿ ಹಾಗೂ ಸ್ವಾಗತವನ್ನು ಮುಖ್ಯೋಪಾಧ್ಯಾಯರಾದ ರಾಮಣ್ಣ ಪಿ ಕುರಡಗಿ ಹಾಗೂ ಶಿಕ್ಷಕರು ನುಡಿಯನ್ನು ಜಿ ಬಿ ಆಡಕಾಯು, ಹಾಗೂ ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮವನ್ನು ಗದಗ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಜು ಬಿ ಚವ್ಹಾಣ ಮತ್ತು ವಂದನಾರ್ಪಣೆಯನ್ನು ಕೆ ಎಸ್ ತಳವಾರ ಹಾಗೂ ನಿರೂಪಣೆಯನ್ನು ಎಸ್ ಎಚ್ ಮಲ್ಲಾಪೂರ ಉಪನ್ಯಾಸಕರು ನಿರೂಪಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.