ಹಾಸನ ಜಿಲ್ಲೆ ಅರಕಲಗೂಡು ತಾಲೂಕು ದೊಡ್ಡ ಮಗ್ಗೆ ಹೋಬಳಿಯ ಮೋಕಲಿ ಗ್ರಾಮದಲ್ಲಿ ಇರುವ ವಿಸ್ಡಂ ವೆಲ್ಲಿ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು Kidzee ನಲ್ಲಿ ಫುಡ್ ಫೆಸ್ಟಿವಲ್ ಹಾಗೂ ವಿಜ್ಞಾನದ ಮಾಡೆಲ್ ಗಳನ್ನ ಮಾಡಿ ಸಾರ್ವಜನಿಕರಲ್ಲಿ ಬದಲಾವಣೆ ಮಾಡಿಕೊಳ್ಳುವ ವಿಚಾರವಾಗಿ ಹಾಗೂ ಮಕ್ಕಳು ಅವರ ಅಭಿಪ್ರಾಯಕ್ಕೆ ಅನುಗುಣವಾಗಿ ಅವರು ಮಾಡೆಲ್ ಗಳನ್ನ ತಯಾರಿಸಿಕೊಂಡು ಅದರ ಬಗ್ಗೆ ವಿಶ್ಲೇಷಣೆಯನ್ನು ಕೂಡ ನೀಡಿ ಬದಲಾವಣೆ ತಂದು ಕೊಡುತ್ತಿರುವುದು ಸಂತಸದ ವಿಷಯ ಅತ್ಯುತ್ತಮವಾಗಿ ಮಕ್ಕಳಿಂದ ಅಪ್ಪು ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆಯನ್ನು ಒಂದು ಹಾಡಿನಲ್ಲಿ ರೂಪಿಸಿರುವುದು ತುಂಬಾ ಸಂತಸ ತಂದಿದೆ ಹಾಗೆ ಪೋಷಕರುಗಳು ಕೂಡಾ ಉತ್ತಮ ಶಾಲೆ,ಉತ್ತಮ ವಾತಾವರಣ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸಹ ನಮ್ಮ ಮಕ್ಕಳಿಗೆ ನೀಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮವು ತುಂಬಾ ಶ್ರದ್ದೆಯಿಂದ ಗೌರವಾನ್ವಿತವಾಗಿ ಅತ್ಯುತ್ತಮ ರೀತಿಯಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ಅರಕಲಗೂಡು ಶಿಕ್ಷಣ ಕ್ಷೇತ್ರಾಧಿಕಾರಿಯಾದ ದೇವರಾಜ್ ರವರು ಹಾಗೂ ಅರಕಲಗೂಡು ತಾಲೂಕು ಆರೋಗ್ಯ ಅಧಿಕಾರಿಯಾದ ಡಾ.ಪುಷ್ಪಲತಾ ರವರು ಹಾಗೂ ವಿಸ್ಡಂ ವೆಲ್ಲಿ ಶಾಲೆಯ ಕಾರ್ಯದರ್ಶಿಗಳು ಸಾಕಿಬ್ ರೆಹ್ಮಾನ್ ರವರು ಹಾಗೂ ಅಧ್ಯಕ್ಷರು ಹಾಗೂ ಶಿಕ್ಷಕ ವೃಂದ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.