ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ವಿಶೇಷ ಚೇತನ ಮಹಿಳೆಯರಿಗೆ ಬರುವ ಪಿಂಚಣಿ ಹಣ ಜಮೆ ಆಗಿಲ್ಲವೆಂದು ಸಮಸ್ಯೆಯನ್ನು ತೆಗೆದುಕೊಂಡು ಬಂದಾಗ ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ವರ್ಗವು ಊಟಕ್ಕೆ ಹೋದವರು ಮೂರುವರೆ ನಾಲ್ಕು ಗಂಟೆ ಸಮಯ ಆದರೂ ಬಂದಿರುವುದಿಲ್ಲ ಅಲ್ಲಿರುವ ಕೆಲವು ಸಿಬ್ಬಂದಿಗಳಿಗೆ ಆ ತಾಯಂದಿರು ವಿಚಾರಣೆ ಮಾಡಿದಾಗ ಅನಕ್ಷರಸ್ಥರು ಆದಕಾರಣ ಅವರಿಗೆ ಸರಿಯಾಗಿ ಮಾಹಿತಿಯನ್ನು ತಿಳಿಸದೆ ಅವರಿಗೆ ಬೆದರಿಸಿ ಮಾತನಾಡಿದ್ದಾರೆ.
ಸರಿಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಉರಿಯುವ ಬಿಸಿಲಿನಲ್ಲಿ ಕುಳಿತು ಕಾಯುತ್ತಾ ಇದ್ದರೂ ಈ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿ ಬಂದ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಜಿಲ್ಲಾ ಯುವ ಘಟಕ ಅಧ್ಯಕ್ಷರು ಅನ್ವರ್ ಪತ್ತೆಸಾಬ್ ಅವಟಿ ಇವರು ಬಂದು ಆ ತಾಯಂದಿರ ಸಮಸ್ಯೆಯನ್ನು ಕೇಳಿ ತಕ್ಷಣ ತಹಶಿಲ್ದಾರ ಅವರ ಗಮನಕ್ಕೆ ತಂದು ಅವರಿಗೆ ಕೆಲಸವನ್ನು ಮಾಡಿಕೊಡಲಾಯಿತು.ಈ ಸಂದರ್ಭದಲ್ಲಿ ಮಾನ್ಯ ತಹಶೀಲ್ದಾರ ಶ್ರೀಮತಿ ಕೀರ್ತಿ ಚಾಲಕ ಅವರು ನಮ್ಮ ಸಮಸ್ಯೆಯನ್ನು ಕೇಳಿದ ನಂತರ ತಕ್ಷಣ ಸಿಬ್ಬಂದಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡು ಬಂದಂತಹ ತಾಯಂದಿರ ಕೆಲಸವನ್ನು ಮಾಡಿ ಕೊಡುವಂತೆ ಆದೇಶ ನೀಡಿದರು.ಅದೇ ರೀತಿ ನಮ್ಮ ಸಮಸ್ಯೆಗೆ ಸ್ಪಂದಿಸಿ ಮತ್ತೊಮ್ಮೆ ಈ ರೀತಿ ಆಗದಂತೆ ನಾವು ಎಚ್ಚರಿಕೆ ವಹಿಸುತ್ತೇವೆ ಎಂದು ಭರವಸೆ ನೀಡಿ ನಮ್ಮ ಕೆಲಸವನ್ನು ಮಾಡಿಸಿ ಕಳಿಸಿದರು ಎಂದು ಕರುನಾಡ ಕಂದ ವರದಿಗಾರರಿಗೆ ತಿಳಿಸಿದರು.
ಈ ಕೆಲಸವನ್ನು ಅಖಿಲ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಯುವ ಘಟಕ ಅಧ್ಯಕ್ಷರು ಅನ್ವರ್ ಪತ್ತೆಸಾಬ್ ಅವಟಿ ಇವರು ಸ್ವತಃ ಮುಂದೆ ನಿಂತು ಮಾಡಿಸಿಕೊಟ್ಟಿದ್ದಕ್ಕೆ ತಾಯಂದಿರು ಗೌರವ ನೀಡಿ ಧನ್ಯವಾದಗಳನ್ನು ತಿಳಿಸಿದರು.
ವರದಿ-ಉಸ್ಮಾನ ಬಾಗವಾನ