ಗದಗ ಇಲ್ಲಿಯ ಸಮಿಪದ ತಿಮ್ಮಾಪೂರ ಗ್ರಾಮದ ಚಿರಾಗ್ ಎಜ್ಯುಕೇಶನಲ್ ಆ್ಯಂಡ್ ರೂರಲ್ ಡೆವೆಲಪ್ ಮೆಂಟ್ ಟ್ರಸ್ಟ್ ಗದಗ ಉದಯ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಏರ್ಪಡಿಸಲಾಗಿತ್ತು.
ಇದರ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಂದ ವಿವಿಧ ರೀತಿಯ ಕಾರ್ಯಕ್ರಮಗಳು ಕಣ್ಮನ ಸೆಳೆಯುವ ರೀತಿಯಲ್ಲಿ ನಡೆಯಿತು.
ಮೊದಲಿಗೆ ಸ್ವರಸ್ವತಿ ಪೂಜೆಯನ್ನು ಕೈಗೊಳ್ಳುವ ಮೂಲಕ ಸ್ವರಸ್ವತಿ ಭಾವಚಿತ್ರ ಮತ್ತು ಜ್ಯೋತಿಯನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಡೊಳ್ಳಿನ ಮೇಳದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳುವದರ ಮೂಲಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ನಂತರ ಭಾರತದ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಿ ಎಲ್ ಬಾರಾಟಕ್ಕೆ ಪ್ರಾಚಾರ್ಯರು ಡಯಟ್ ಶಾಲಾ ಶಿಕ್ಷಣ,ಸಾಕ್ಷರತಾ ಇಲಾಖೆ ಗದಗ ಇವರ ಮಾತನಾಡಿ ಮಕ್ಕಳ ಜ್ಞಾನದ ಅಭಿವೃದ್ಧಿಯ ಜೊತೆಗೆ ಮಕ್ಕಳ ಆಸಕ್ತಿ,ಅಭಿರುಚಿ,ಕಲ್ಪನೆ,ಭಾವನೆಗಳನ್ನು ಅರಿತು ಅವರಿಗೆ ಪಾಠವನ್ನು ಮಾಡುವುದು ಹಾಗೂ ಅವರಿಗೆ ಇಷ್ಟವಾಗುವ ಸರಳವಾಗಿ ಹೇಳುವುದಾದರೆ ಮಕ್ಕಳ ಕಲಿಕೆಯಲ್ಲಿ ಮುಂದು ಬರುವರು ಎಂದು ಹೇಳಿದರು.
ಎಂ ಎಫ್ ಇಂಗಳಗಿ ನಿವೃತ್ತ ಪ್ರೊಫೆಸರ್ ಬೆಂಗಳೂರು ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಿ ಆರ್ ಶಿರಕೋಳ,ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ,ಹನುಮವ್ವ ತಳವಾರ,ಎಂ ಎಸ್ ಹುಲ್ಲೂರ,ಅಕ್ಕವ್ವ ಹಿರೆಬಸಣ್ಣವರ,ಹುಚ್ಚೀರಪ್ಪ ಜೋಗಿನ,ಲಕ್ಷ್ಮೀ ಗಾಜಿ,ಬಾಳಪ್ಪ ಗಂಗರಾತ್ರಿ, ಹುಸೇನಸಾಬ ನದಾಫ ಹಾಗೂ ಪ್ರಧಾನ ಗುರುಗಳಾದ ರೇಣುಕಾ ಅಬ್ಬಿಗೇರಿ ಮತ್ತು ಸಹ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು,ಪಾಲಕರು ಪೋಷಕರು ಪಾಲ್ಗೊಂಡಿದ್ದರು.ನೀಲಮ್ಮ ಗದಗ ಕಾರ್ಯಕ್ರಮವನ್ನು ನಿರೂಪಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.