ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕುವೆಂಪು ಅವರ ಮಂತ್ರ ಮಾಂಗಲ್ಯ:ಬಸವಣ್ಣನ ವಚನ ಮಾಂಗಲ್ಯದಸರಳ ಕಲ್ಯಾಣ ಮಹೋತ್ಸವ

ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ ಕೂಡಲಸಂಗಮದೇವ…ಎಂಬಂತೆ ಶ್ರೀಮಂತರು ಅದ್ದೂರಿಯಾಗಿ ಮದುವೆ ಮಾಡುತ್ತಾರೆ ಆದರೆ ಬಡವರು ಸಾಲ ಮಾಡಿ ಅದ್ದೂರಿಯಾಗಿ ಮದುವೆ ಮಾಡಿ,ಮದುವೆಗೆ ಮಾಡಿದ ಸಾಲದ ಬಡ್ಡಿ ಕಟ್ಟಿ ತಮ್ಮ ಜೀವನ ಸವೆಸುತ್ತಾರೆ ಇಂತಹ ಅದ್ದೂರಿಯಾಗಿ ಮದುವೆ ಮಾಡುವದಕ್ಕಿಂತ ಸರಳವಾಗಿ
ಯಾವುದೇ ಸಾಲ ಮಾಡದೆ ವರದಕ್ಷಣೆ ನೀಡದೆ ಬಾಜಾ ಭಜಂತ್ರಿಗಳಿಲ್ಲದೆ,ಬಟ್ಟೆ,ಆಯರಿ ಹಾಗೂ ಕಾಣಿಕೆಗಳು ಇಲ್ಲದೆ ವಿಶೇಷವಾಗಿ ಮಂತ್ರ ಪಠಿಸೋ ಪುರೋಹಿತರೂ ಇಲ್ಲದೆ ಮದುವೆ ನಡೆದಿದ್ದು ಎಲ್ಲರಿಗೂ ಹೊಸದಿರಬಹುದು ಆದರೆ ಸುರಪುರ ತಾಲೂಕಿನ ಸತ್ಯಂಪೇಟೆ ಕುಟುಂಬದವರಿಗೆ ಇದು ಹೊಸದೇನೂ ಅಲ್ಲ ಯಾವ ಆಡಂಬರಗಳಿಲ್ಲದೆ ಹಾಗೂ ವಚನ ಮಾಂಗಲ್ಯ ನಡೆಯಿತು ಈ ಸಮಾರಂಭಕ್ಕೆ ಬಂದವರು ಯಾವುದೇ ಆಯೇರಿ ಮಾಡದೇ,ಅಕ್ಕಿಯ ಬದಲು ಪುಷ್ಪ ಹಾಕಿ,ನವ ದಂಪತಿಗಳಿಗೆ ತಮ್ಮ ಪ್ರೀತಿ ಅಭಿಮಾನದ ಉಡುಗೊರೆಯನ್ನು ನವ ದಂಪತಿಗಳಿಗೆ ಧಾರೆಯೆರೆದು ಶುಭಕೋರಿದರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಸತ್ಯಂಪೇಟೆ ಹಾಗೂ ಶ್ರೀಮತಿ ಅಮರಮ್ಮ ಅವರ ಪುತ್ರಿ ಅಕ್ಕಮಹಾದೇವಿ ಹಾಗೂ ವಾಡಿಯ ಪಾರ್ವತಿ ಲಿಂಗನಗೌಡ ಪುತ್ರ ಮಲ್ಲಿಕಾರ್ಜುನ ಅವರ ಜೊತೆ ಸರಳವಾಗಿ ವಿವಾಹ ಜರಗಿತು.ವಚನ ಮಾಂಗಲ್ಯ ಮುನ್ನ ಹಿರಿಯ ನ್ಯಾಯವಾದಿ ಜಿ.ಎಸ್.ಪಾಟೀಲ್ ಅವರು ಬಸವ ಧ್ವಜಾರೋಹಣ ನೆರವೇರಿಸಿದರು.
ನವ ದಂಪತಿ ಸೇರಿದಂತೆ ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆ ಬೋಧಿಸಲಾಯಿತು.
ಈ ಮದುವೆ ಕುರಿತು ಮಾತನಾಡಿದ ಪ್ರಗತಿ ಪರ ಚಿಂತಕ ಪ್ರೊಫೆಸರ್ ಆರ್.ಕೆ ಹುಡುಗಿ ಅವರು “ಮದುವೆ ಯಾವ ಸ್ವರ್ಗದಲ್ಲಿ ಆಗುವುದಿಲ್ಲ ಇಲ್ಲಿಯೇ ಇದೆ ಭೂಮಿ ಮೇಲೆಯೇ ಆಗುವುದು” ಸತಿಪತಿಗಳೊಂದಾಗಿ ಇಬ್ಬರೂ ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಎಂಬಂತೆ ಇಬ್ಬರೂ ದುಡಿದು ತಿನ್ನಬೇಕು ಆಗ ಮಾತ್ರ ಜೀವನ ಸುಖಮಯವಾಗಿರುವುದೆಂದು ನವ ದಂಪತಿಗಳಿಗೆ ಸಂಸಾರದ ಗುಟ್ಟು ತಿಳಿಸಿದರು.ವರದಕ್ಷಣೆಬಗ್ಗೆ ಮಾತನಾಡಿ ವರದಕ್ಷಣೆ ಕೊಡುವುದು ತಪ್ಪು ತೆಗೆದುಕೊಳ್ಳುವುದೂ ತಪ್ಪು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ಬಿ.ಪಾಟೀಲ್ ಅವರು ಮಾತನಾಡಿ ಕುವೆಂಪು ಅವರ ಮಂತ್ರ ಮಾಂಗಲ್ಯ ಹಾಗೂ ಬಸವಣ್ಣನವರ ವಚನ ಮಾಂಗಲ್ಯ ಎರಡನ್ನೂ ಒಳಗೊಂಡು ಈ ಮದುವೆ ವೈಚಾರಿಕ ಹಿನ್ನೆಲೆಯಿಂದ ಕೂಡಿದೆ ನಾನು ಈ ಥರ ಮದುವೆ ನೋಡುತ್ತಿರುವುದು ಮೊದಲನೇ ಬಾರಿಗೆ ಇಂಥ ಮದುವೆಗಳು ಆಗಬೇಕು ಈ ಮದುವೆಯಿಂದ ನಾವು ಬಹಳಷ್ಟು ಕಲಿಯಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸುರಪುರ ಶಾಸಕರಾದ ವೆಂಕಟಪ್ಪ ನಾಯಕ ಹಾಗೂ ಗಡಿ ಭಾಗದಲ್ಲಿ ಮೃತರಾದ ರೈತರ ನಿಧನ ಪ್ರಯುಕ್ತ ಎರಡು ನಿಮಿಷಗಳ ಕಾಲ ಮೌನಚರಣೆ ಆಚರಿಸಲಾಯಿತು
ದಿವ್ಯ ಸಾನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾಮಠದ ಮುರುಘರಾಜೇಂದ್ರ ಶರಣರು ಮಾತನಾಡಿ ಮದುವೆ ಮಂಟಪದಲ್ಲಿ ಮೌನಚರಣೆ ಮಾಡಿದ್ದು ಒಂದು ಇತಿಹಾಸ ಹಾಗೂ ಇಂಥ ಸರಳ ಮದುವೆಗಳು ಜನಸಾಮಾನ್ಯರು ಮಾಡಿ ತಮ್ಮ ಒಲವಿನ ದಾಂಪತ್ಯ ಗೀತೆಯನ್ನು ಬರೆಯಬೇಕು ಎಂದು ಹೇಳಿದರು ಹಾಗೂ ಎಷ್ಟು ಖುಷಿಯಾಗಿ ವಧು-ವರರು ಮದುವೆ ವೇದಿಕೆಯಲ್ಲಿ ತಮ್ಮ ಮದುವೆ ಬಗ್ಗೆ ಹಾಗೂ ಸರಳ ವಿವಾಹದ ಬಗ್ಗೆ ಮಾತನಾಡಿದ್ದು ಬಹುಶಃ ಇದೆ ಮೊದಲು ಎನಿಸುತ್ತಿದೆ ಎಂದು ಹೇಳಿದರು.
ಡಾ.ಶಿವರಂಜನ್ ಸತ್ಯಂಪೇಟೆ ಅವರು ಕಾರ್ಯಕ್ರಮ ನಿರೂಪಿಸಿದರು,ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕ ಮಾತನಾಡಿದರು.ಈ ಕಲ್ಯಾಣ ಮಹೋತ್ಸವವನ್ನು ವಿಶ್ವರಾಧ್ಯ ಸತ್ಯಂಪೇಟೆ ಹಾಗೂ ನೀಲಾಂಬಿಕೆ ಸತ್ಯಂಪೇಟೆ,ಸಾಕ್ಷಿ ಎಸ್ ಹಾಗೂ ಗುರುದೇವಿ ನರಕಲದಿನ್ನಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ವರದಿ:ಪುನೀತಕುಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ