ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಪಠ್ಯಕ್ರಮದ ಜೊತೆಗೆ ಕಾನೂನಿನ ಅರಿವು ಅಗತ್ಯವಾಗಿದೆ-ಎಸ್.ಕೆ..ಕನಕಟ್ಟೆ ಅಭಿಮತ”

ಬೀದರ್:ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡ್) ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ ವತಿಯಿಂದ ದಿನಾಂಕ 29-02-2024 ರಂದು ಆಯೋಜಿಸಿದ ಕಾನೂನು ಅರಿವು-ನೆರವು ಹಾಗೂ ಸಂವಾದ ಮತ್ತು ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಎಸ್.ಕೆ.ಕನಕಟ್ಟೆ ಅವರು ಮಾತನಾಡಿ ಭಾರತದ ಸಂವಿಧಾನದ ಅಡಿಯಲ್ಲಿ ಎಲ್ಲಾ ಕಾನೂನುಗಳನ್ನು ರಚಿತವಾಗಿವೆ.ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಿಕೊಡುವುದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜೊತೆಗೆ ಕಾನೂನಿನ ಅರಿವು ಸಹ ನೀಡಬೇಕು ಎಂದು ನುಡಿದರು.ಭಾವೀ ಶಿಕ್ಷಕರಾಗುವವರು ತಮ್ಮ ವೃತ್ತಿಯ ಜೊತೆಗೆ ಸಮಾಜದ ಜವಾಬ್ದಾರಿಯುತ ವ್ಯಕ್ತಿಯಾಗಿ ಸಮಾಜ ಕಟ್ಟುವ ಮಹತ್ವದ ಕಾರ್ಯವನ್ನು ನಡೆಸಬೇಕಾಗಿರುವುದು ಶಿಕ್ಷಕರಾಗುವವರ ಮತ್ತೊಂದು ಗುಣ.ಭಾರತದ ನ್ಯಾಯಾಲಯ ವ್ಯವಸ್ಥೆ, ಕಾನೂನು ಸೇವೆಗಳು ಲೋಕ ಅದಾಲತ್ ವ್ಯವಸ್ಥೆಯ ಕಾರ್ಯಗಳು ಮತ್ತು ಜವಾಬ್ದಾರಿಯ ಕುರಿತು ಮಾಹಿತಿ ನೀಡಿದರು ಜನಸಾಮಾನ್ಯರಿಗೆ ಇರುವ ನ್ಯಾಯಾಲಯದ ಸವಲತ್ತುಗಳು,ರಾಜಿ ಸಂಧಾನಗಳ ಮೂಲಕ ವ್ಯಾಜ್ಯಗಳ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಲೋಕಾಯುಕ್ತ ಪೋಲೀಸ್ ಇನ್ಸ್ಪೆಕ್ಟರ್ ಪ್ರದೀಪ ಕೊಳ್ಳಾ ಅವರು ಮಾತನಾಡಿ ಸ್ವಾಮಿ ವಿವೇಕಾನಂದವರು ಹೇಳಿದಂತೆ ಸದೃಢವಾದ ದೇಹದಲ್ಲಿ,ಸದೃಢವಾದ ಮನಸ್ಸಿರುತ್ತದೆ ಎಂಬಂತೆ ವಿದ್ಯಾರ್ಥಿಗಳು ವ್ಯಕ್ತಿತ್ವದ ಜೊತೆಗೆ ಉತ್ತಮ ಆಹಾರ, ನಿದ್ರೆ, ಉಪವಾಸ ಮತ್ತು ಉತ್ತಮ ದೈನಂದಿನ ಚಟುವಟಿಕೆಗಳಿಂದ ಉತ್ತಮ ಆರೋಗ್ಯವನ್ನು ಹೊಂದುವುದು ಅವಶ್ಯಕವಾಗಿದೆ.ಅಧ್ಯಯನದ ಹವ್ಯಾಸವನ್ನು ಬೆಳೆಸಿಕೊಂಡು ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧರಾಗಬೇಕು ಸಮಾಜದಲ್ಲಿ ಭ್ರಷ್ಟಾಚಾರ,ಅಕ್ರಮ ಆಸ್ತಿ, ಹಣ ಗಳಿಕೆ ವಿರುದ್ಧ ತಲೆ ಎತ್ತಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗಲು ವಿದ್ಯಾರ್ಥಿಗಳ ಸಹಾಯ,ಸಹಕಾರ ಇಂದು ಅವಶ್ಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಲ್ಲಿಕಾರ್ಜುನ ಚ.ಕನಕಟ್ಟೆ ಮಾತನಾಡಿ ಪ್ರಶಿಕ್ಷಣಾರ್ಥಿಗಳು ಮುಂದೆ ಉತ್ತಮ ಶಿಕ್ಷಕರಾಗಿ ಜೀವನವನ್ನು ರೂಪಿಸುವ,ಸಮಾಜದಲ್ಲಿ ಉತ್ತಮ ನಾಗರಿಕರನ್ನು ನಿರ್ಮಾಣ ಮಾಡುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ತಿಳಿಸಿ ಹಿರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಜಿಲ್ಲಾ ಹಿರಿಯ ವಕೀಲರಾದ ಶ್ರೀ ಬಿ.ಎಸ್.ಪಾಟೀಲ ಮಾತನಾಡಿ ಕಾನೂನಿನ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸಂತೋಷಕುಮಾರ ಸಜ್ಜನ, ರಾಜಕುಮಾರ ಸಿಂಧೆ,ಶಿಲ್ಪಾ ಹಿಪ್ಪರಗಿ, ಪಾಂಡುರಂಗ ಕುಂಬಾರ, ವೈಜಿನಾಥ ಬಿರಾದಾರ, ಡಾ. ಸಿದ್ರಾಮ ಸಂಗೀತಾ ಪಾಟೀಲ, ಅಶೋಕ ರೇವಣಿ, ಸುವರ್ಣಾ ಪಾಟೀಲ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ಶ್ರೀಮತಿ ವೀಣಾ ಜಲಾದೆ ಸ್ವಾಗತಿಸಿದರು.ನಿಖಿಲ್,ವಾಣಿ ನಿರೂಪಿಸಿದರು, ಸ್ವರೂಪರಾಣಿ ವಂದಿಸಿದರು.

ವರದಿ:ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ