ಮುಗ್ಧ ಮನಸ್ಸಿನ ಹೂವುಗಳು ಮಕ್ಕಳು
ನಗುವ ಕಂದಮ್ಮಗಳು ಬಣ್ಣ,ಜಾತಿ,ಧರ್ಮ ಬೇಧ ಭಾವ ಅರಿಯದ ಮುಗ್ಧ ಜೀವಗಳು.ಹೆತ್ತವರ ಬದುಕಿನ ಊರುಗೋಲಾಗಿ ದೇಶದ ಸತ್ಪ್ರಜೆಗಳಾಗುವ ಮುಂದಿನ ಭವಿಷ್ಯದ ಕುಡಿಗಳು.ಹೆತ್ತವರ ಮನೆ ಮನ ಬೆಳಗುವ ಹೊಂಬೆಳಕು.
ಒಂದು ಮಗುವಿಗೆ ತಾಯಿಯೇ ಮೊದಲ ಗುರು. ಮಕ್ಕಳಿಗೆ ಶಿಸ್ತು ಸಂಸ್ಕಾರ ಕಲಿಸುವುದು ಹೆತ್ತವರು.ಮಗುವನ್ನ ಜಗತ್ತಿಗೆ ಆದರ್ಶವಾಗಿ ಬೆಳೆಸಲು ತಾಯಿಯ ಪ್ರಯತ್ನ ಮೊದಲಿರಬೇಕು.
ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂಬಂತೆ ಇಂದಿನ ಸಮಾಜದಲ್ಲಿ ಮಕ್ಕಳ ಉನ್ನತ ಬದುಕನ್ನು ರೂಪಿಸಿ ಉತ್ತಮ ಸಂಸ್ಕಾರ ನೀಡುವುದು ಬಹು ಮುಖ್ಯವಾಗಿದೆ.ಮಕ್ಕಳಿಗೆ ಬಾಲ್ಯ ತುಂಬಾ ಮುಖ್ಯವಾಗಿರುತ್ತದೆ.ಮಕ್ಕಳು ತಮ್ಮ ಬಾಲ್ಯದ ಸವಿ ನೆನಪಿನಲ್ಲಿ ಜೀವನ ಕಳೆಯುತ್ತಾರೆ.
ಇಂದಿನ ಮಕ್ಕಳ ಜೀವನದ ಗುರಿ ಸಮಾಜದಲ್ಲಿ ಅವರ ನಡೆ ಎಲ್ಲವೂ ಕೆಟ್ಟು ಹೋಗಿದೆ ಮಕ್ಕಳಲ್ಲಿ ಶಿಸ್ತು ಸಂಸ್ಕಾರ ದಿನದಿಂದ ದಿನಕ್ಕೆ ಕಡಿಮೆ ಆಗಿದೆ.
ಮಕ್ಕಳನ್ನು ಬೆಳೆಸುವುದರಲ್ಲಿ ಹೆತ್ತವರ,ಹಿರಿಯರ, ಶಿಕ್ಷಕರ,ಸುತ್ತ ಮುತ್ತಲಿನ ಪರಿಸರದ,ಸಮಾಜದ ಪಾತ್ರ ಮುಖ್ಯ ಹಾಗೆ ತಾಯಿಯ ಪಾತ್ರವೂ ಬಹಳ ಮುಖ್ಯ.
ಮಕ್ಕಳಿಗೆ ಸದಾ ಒಳ್ಳೆಯ ವಿಚಾರಗಳನ್ನು ತುಂಬಬೇಕು,ಸಕಾರಾತ್ಮಕ ಸಂಗತಿಗಳನ್ನು ಹಾಗೂ ಜೀವನಕ್ಕೆ ಬೇಕಾದ ನೀತಿ ಕಥೆಗಳನ್ನು ಹೇಳಬೇಕು. ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸಬೇಕು. ಸಮಾಜಕ್ಕೆ ಆದರ್ಶವಾಗಬೇಕು ಮಕ್ಕಳಿಗೆ ಯೋಗ್ಯ ಮಾರ್ಗದರ್ಶನ ನೀಡಬೇಕು.
ಮಕ್ಕಳು ನೈತಿಕತೆಯ ಹೆಗ್ಗುರುತಾಗಬೇಕು ನಾವು ನಮ್ಮ ಮಗು ನಾಳೆ ಏನು ಆಗುತ್ತದೆ ಎಂಬುದನ್ನ ಚಿಂತೆ ಮಾಡ್ತೀವಿ ಆದರೆ ಇಂದು ಏನು ಆಗಿರುವನು ಅನ್ನುವದನ್ನ ಮರೆಯುತ್ತೇವೆ ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರ ಕೊಟ್ಟು ಸರಿಯಾದ ರೀತಿಯಲ್ಲಿ ಬೆಳೆಸಿದರೆ ಅವರು ಸಮಾಜದಲ್ಲಿ ಗೌರವಾರ್ಹ ವ್ಯಕ್ತಿಗಳಾಗಿ ಆದರ್ಶವಾಗಿ ಬೆಳೆಯುತ್ತಾರೆ.ಮಕ್ಕಳ ಮನಸ್ಸು ಹಸಿ ಗೋಡೆಯ ಹಾಗೆ ಅದಕ್ಕೆ ನಾವು ಯಾವ ಆಕಾರ ಕೊಡುತ್ತೇವೆ, ಏನು ಕೊಡುತ್ತೇವೆ ಅದನ್ನೇ ಸ್ವೀಕರಿಸುತ್ತಾರೆ ಒಳ್ಳೆಯ ಶಿಕ್ಷಣ ಕೊಟ್ಟರೆ ಒಳ್ಳೆಯ ಸಮಾಜ ನಿರ್ಮಾಣವಾಗುವುದು.ಓದುವ ಮಕ್ಕಳ ಕೈಗೆ ಪುಸ್ತಕಗಳನ್ನ ಕೊಡಿ ಮೊಬೈಲ್ ಗಳನಲ್ಲ
ಪರಿಶುದ್ಧ ಮನಸ್ಸುಗಳಿಗೆ ನಿಷ್ಕಲ್ಮಶ ಪ್ರೀತಿ ಕೊಡಿ.ಮಕ್ಕಳ ಮನಸನ್ನ ಪ್ರೀತಿ ಇಂದ ಗೆಲ್ಲಿ ನಮ್ಮ ಶಿಸ್ತು ಮಕ್ಕಳಿಗೆ ಶಿಕ್ಷೆಯಾಗಬಾರದು.
ಈಗಿನ ಕಾಲದಲ್ಲಿ ಪೋಷಕರು ಮಕ್ಕಳಿಗೆ ಸಮಯ ಕೊಡುವುದು ಮರೆತಿರುತ್ತಾರೆ ಅದರಿಂದ ಮಕ್ಕಳು ದಾರಿ ತಪ್ಪಿದ್ದಾರೆ.ಮಕ್ಕಳಿಗೆ ಬದುಕಿನ ಮೌಲ್ಯಗಳನ್ನು ಹೇಳಿ ಕೊಡುವುದು ತುಂಬಾ ಮುಖ್ಯ.ಮಕ್ಕಳಲ್ಲಿ ಸಾಧಿಸುವ ಛಲ ಹುಟ್ಟಿಸಬೇಕು.ಮಕ್ಕಳಿಗೆ ಒತ್ತಾಯದಿಂದ ಏನೂ ಕಲಿಸಬೇಡಿ.ನಮ್ಮ ಮಕ್ಕಳಲ್ಲಿ ದೇಶ ಪ್ರೇಮ,ಭಾಷೆ ಮೇಲೆ ಪ್ರೀತಿ,ನಾಡಿನ ಮೇಲೆ ಗೌರವ ಕಲಿಸಿ.ಮಕ್ಕಳು ದೊಡ್ಡವರನ್ನು ನೋಡಿ ಕಲಿಯುವುದೇ ಹೆಚ್ಚು ಅದ್ದರಿಂದ ನಾವು ಒಳ್ಳೆಯ ನೀತಿ,ನಡೆ ,ನುಡಿ ಸಂಸ್ಕೃತಿಯನ್ನು ಮೈಗೂಡಿಸಿ ಕೊಂಡಿರಬೇಕು.ನಾವು ಮಕ್ಕಳನ್ನು ಬೆಳೆಸುವ ವಿಧಾನ ಈ ಸಮಾಜದಲ್ಲಿ ಅವರ ಗೌರವ ನಿರ್ಧರಿಸುತ್ತದೆ.
-ಮಾನಸ.ಎಂ,ಸೊರಬ