ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆರೋಗ್ಯ ಇಲಾಖೆ ಹಾಗೂ ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಘಟಕದ ವತಿಯಿಂದ ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಅದ್ಯಕ್ಷರಾದ ರಾಜು ಪತ್ತಾರ ಬಳಗಾನೂರ ಮಾತನಾಡಿ ನಾಡಿನೆಲ್ಲಡೆ ಬೇಸಿಗೆ ಶುರುವಾಗಿದೆ ಅದರಲ್ಲೂ ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಬಿಸಿಲ ನಾಡು ಬಸಿಲಿನ ಬೇಗೆಯಿಂದ ಪ್ರಾಣಿಪಕ್ಷಿಗಳಿಗೆ ನೀರಿನ ಹಾಹಾಕಾರ ಉಂಟಾಗಿದೆ ಅದಕ್ಕೆ ನಮ್ಮ ವನಸಿರಿ ಫೌಂಡೇಶನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರು ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅಭಿಯಾನ ಹಮ್ಮಿಕೊಳ್ಳುವ ಮುಖಾಂತರ ರಾಜ್ಯಾದ್ಯಂತ ಬಾಯಾರಿದ ಬಾನಾಡಿಗಳಿಗೆ ಮಣ್ಣಿನ ನೀರಿನ ಅರವಟ್ಟಿಗೆ ನಿರ್ಮಿಸಿ ಕಾಳು ನೀರುಣಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ನಮ್ಮ ತಾಲೂಕ ಘಟಕದ ವತಿಯಿಂದ ಇಂದು ಬಳಗಾನೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಗುಟುಕು ನೀರುಣಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಇದಕ್ಕೆ ಎಲ್ಲರೂ ತಮ್ಮ ಮನೆ,ಹಿತ್ತಲು ಗಿಡಗಳಿಗೆ, ತೋಟಗಳಲ್ಲಿ,ವಿವಿಧ ಇಲಾಖೆಯ ಆವರಣದಲ್ಲಿನ ಗಿಡಮರಗಳಿಗೆ ಅರವಟ್ಟಿಗೆಗಳನ್ನು ಕಟ್ಟಿ ಕಾಳು ನೀರು ಹಾಕಿ ಪಕ್ಷಿಗಳ ಸಂಕುಲ ಉಳಿವಿಗಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಬಸವರಾಜ ಯಾತಗಿರಿ ದೈಹಿಕ ಶಿಕ್ಷಕರು ಮಾತನಾಡಿ ನಮ್ಮ ಭಾಗದಲ್ಲಿ ಹೆಚ್ಚು ಬಿಸಿಲಿನ ತಾಪಮಾನ ಹೊಂದಿದ್ದು,ಬೇಸಿಗೆಯಲ್ಲಿ ಸಾಮಾನ್ಯವಾಗಿ ನೀರಿನ ಅಭಾವದಿಂದ ಪ್ರಾಣಿಪಕ್ಷಿಗಳಿಗೆ ನೀರಿನ ತೊಂದರೆ ಉಂಟಾಗುತ್ತಿದೆ.ಮನುಜರಾದ ನಾವುಗಳು ಮಾತನಾಡುವ ಮೂಲಕ ಬಾಯಾರಿಕೆ ತೀರಿಸಿಕೊಳ್ಳುತ್ತೇವೆ.ಆದರೆ ಪ್ರಾಣಿ ಪಕ್ಷಿಗಳಿಗೆ ದ್ವನಿ ಇದೆ ಆದರೆ ನೀರನ್ನು ಬೇಡುತಕ್ಕಂತಹ ಮನಸ್ಥಿತಿ ಇಲ್ಲ ಅದಕ್ಕೆ ಮನುಜರಾದ ನಮ್ಮ ಮನುಷ್ಯತ್ವದಿಂದ ಪ್ರಾಣಿ ಪಕ್ಷಿಗಳಿಗೆ ನೀರೊದಗಿಸುವ ಕಾರ್ಯ ಮಾಡಬೇಕಾಗಿದೆ ಇಂತಹ ಒಂದು ಕಾರ್ಯದಲ್ಲಿ ಸುಮಾರು 6ವರ್ಷಗಳಿಂದ ವನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳುತ್ತಿರುವುದು ತುಂಬಾ ಶ್ಲಾಘನೀಯ. ನಾವುಗಳೆಲ್ಲರೂ ನಮ್ಮ ಮನೆಯ ಮೇಲೆ,ಆಸ್ಪತ್ರೆಯ, ಗ್ರಂಥಾಲಯ,ಗ್ರಾಮ ಪಂಚಾಯತಿಗಳ ಆವರಣದಲ್ಲಿ ಗಿಡಮರಗಳಿಗೆ ಅರವಟ್ಟಿಗೆ ಕಟ್ಟಿ ನೀರುಣಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ನಂತರ ಆರೋಗ್ಯ ಅಧಿಕಾರಿ ಡಾ.ದೌಲಸಾಬ್ ಮಾತನಾಡಿ ಮೂಕ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹತೀರಿಸುತ್ತಿರುವ ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯ.ಪಕ್ಷಿಗಳಿಂದ ನಮಗೆ ನೈಸರ್ಗಿಕ ಸಮತೋಲನವಿರುತ್ತದೆ.ಇದು ದಿನನಿತ್ಯ ನಡೆಯುವ ಕಾರ್ಯವಾಗಲಿ,ಮಸ್ಕಿ ವನಸಿರಿ ಫೌಂಡೇಶನ್ ತಂಡ ಉತ್ತಮ ಹೆಜ್ಜೆಗಳಿಡುಲು ಪ್ರಾರಂಭಿಸಿದೆ ಶುಭವಾಗಲಿ,ನಾವುಗಳೆಲ್ಲರೂ ನಮ್ಮ ಹುಟ್ಟು ಹಬ್ಬ,ಮದುವೆ ಸಮಾರಂಭ ಹಾಗೂ ಇನ್ನಿತರ ಕಾರ್ಯಗಳಲ್ಲಿ ಸಸಿಗಳನ್ನು ನೆಟ್ಟು ಆಚರಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಅದ್ಯಕ್ಷ ರಾಜು ಪತ್ತಾರ ಬಳಗಾನೂರ,ಡಾ.ದೌಲಸಾಬ್,ವೀರನಗೌಡ ಗದ್ದಿ,ಮೌನೇಶ್ dss,ಬಸವರಾಜ್ ಯಾತಗಿರಿ ದೈಹಿಕ ಶಿಕ್ಷಕರು,ದೀಪಕ್ ಸೇಠ್,ಹನುಮೇಶ್ ಮರದ್ದಿ,ವೀರನಗೌಡ,ಶಿವಕುಮಾರ್,ಚನ್ನಬಸವ, ಸಂಗಣ್ಣ ಲಕ್ಕೋಜಿ,ಆಶಾಕಾರ್ಯಕರ್ತೆಯರು, ಊರಿನ ಹಿರಿಯರು ಯುವಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.