ವಿದ್ಯಾರ್ಥಿಗಳ ರಜಾದ ದಿನದ ಕನಸನ್ನು ಕಾಣುತ್ತಿದ್ದ ಕೆಲವು ಖಾಸಗಿ,ಅನುದಾನಿತ,ಸರ್ಕಾರಿ,ರೆಸಿಡೆನ್ಸಿ ಶಾಲೆಯ ಮಕ್ಕಳಿಗೆ ಹೈಕೋರ್ಟ್ ಮತ್ತು ಶಿಕ್ಷಣ ಇಲಾಖೆ ದೊಡ್ಡ ಹೊಡೆತ ಕೊಟ್ಟಿದೆ.ಈಗಾಗಲೇ ಸೋಮವಾರದಿಂದ ಆರಂಭವಾಗಿದ್ದ ಪರೀಕ್ಷೆಗಳು ಮುನ್ನುಡಿಕೆಯಾಗಿದ್ದು ಪೋಷಕರ ಮತ್ತು ಮಕ್ಕಳಿಗೆ ಇಕ್ಕಟ್ಟಿನ ಪರಿಸ್ಥಿತಿಗೆ ದೂಡಿದೆ.ಈಗಾಗಲೇ ಖುಷಿಯಲ್ಲಿದ್ದ ಮಕ್ಕಳಿಗೆ ಅವರು ಖಿನ್ನತೆಗೆ ದೂಡಲು ಕಾರಣವಾಗಿದೆ.ಹೋದ ವರ್ಷ ಕೂಡ ಇದೇ ರೀತಿಯಾಗಿತ್ತು.ಮಕ್ಕಳ ಎರಡು ಬಾರಿ ಪರೀಕ್ಷೆ ಬರೆದಿದ್ದರು.ಪ್ರತಿ ವರ್ಷ ಸರ್ಕಾರದ ಶಿಕ್ಷಣ ಇಲಾಖೆ ಮತ್ತು ಖಾಸಗಿ ಸಂಸ್ಥೆಗಳ ಒಕ್ಕೂಟವು ಮಕ್ಕಳ ಮೇಲೆ ಪರಿಣಾಮವನ್ನು ಬೀರುತ್ತಿದ್ದಾರೆ.ಆತಂಕಕಾರಿ ಘಟನೆ ಎಂದರೆ ಮಕ್ಕಳು ಮತ್ತು ಶಿಕ್ಷಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ.ಆದಷ್ಟು ಬೇಗ ಸರ್ಕಾರ ಈ ಒಂದು ಸಮಸ್ಯೆಯನ್ನು ಬಗೆಹರಿಸಬೇಕು ಮಕ್ಕಳ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.