ಹನೂರು:ತಾಲೂಕಿನ ಕೆ ಗುಂಡಾಪುರ ಗ್ರಾಮದ ಪರಮೇಶ ರವರ ಜಮೀನಿನಲ್ಲಿ ಸಾಕಲಾಗಿದ್ದ ಮೇಕೆಯು ಚಿರತೆ ದಾಳಿಗೆ ಬಲಿಯಾಗಿರುತ್ತದೆ.
ತೋಟದ ಮನೆಯಲ್ಲಿ ಇದ್ದ ಮೇಕೆಗಳ ಮೇಲೆ ಬುಧವಾರ ರಾತ್ರಿ ಚಿರತೆ ದಾಳಿ ನಡೆಸಿ ಒಂದು ಚಿರತೆಯನ್ನು ಸಾಯಿಸಿದ್ದು ಒಂದು ಸಾಕು ನಾಯಿಯನ್ನು ಹೊತ್ತುಹೋಗಿರುತ್ತದೆ.ಈ ಸಂಬಂಧ ಮುಂದಿನ ಕ್ರಮಕ್ಕಾಗಿ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಲಾಗಿರುತ್ತದೆ.ಇಂಥ ಸಮಸ್ಯೆಯೂ ತಾಲೂಕಿನಾದ್ಯಂತ ನಿರಂತರವಾಗಿ ನಡೆಯುತ್ತಲೇ ಇದೆ ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಣ ಮಾಡಿ ಎಂದು ರೈತ ಸಂಘವು ಹಲವಾರು ಬಾರಿ ಪ್ರತಿಭಟನೆ ಧರಣಿ ಮಾಡಿದರು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮವಹಿಸದೆ ಇರುವುದು ಕಂಡು ಬಂದಿದೆ,ಕೂಡಲೇ ಅರಣ್ಯ ಅಧಿಕಾರಿಗಳು ಕಾಡು ಪ್ರಾಣಿಗಳಿಂದ ರೈತರಿಗೆ ಆಗುತ್ತಿರುವ ಬೆಳೆನಾಶ ಸಾಕುಪ್ರಾಣಿಗಳ ಮೇಲೆ ದಾಳಿ ಮಾಡುತ್ತಿರುವುದನ್ನು ತಡೆಯಬೇಕು ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹನೂರು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಆಗ್ರಹಿಸಿದ್ದಾರೆ.
ವರದಿ:ಉಸ್ಮಾನ್ ಖಾನ್