ಮಾನವೀಯತೆ ಮೆರೆದ ಅರಕಲಗೂಡು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಪ್ರಕಾಶ್,ನಿಜಗುಣ ಮತ್ತು ತಂಡ
ಬಹುತೇಕ ಪೊಲೀಸರೇ ಸರಿ ಇಲ್ಲ ಎನ್ನುವ ಈ ಕಾಲದಲ್ಲಿ ಕೊಳ್ಳೇಗಾಲದಿಂದ ಕೆಲಸ ಅರಸಿ ಬಂದು
ಸುಮಾರು ಎರಡು ಮೂರು ದಿನಗಳಿಂದ ಊಟ ಆಹಾರ ಇಲ್ಲದೆ ನಿತ್ರಾಣಗೊಂಡು ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಯುವಕನನ್ನು ಗಮನಿಸಿ ಅವನನ್ನು ಕೈ ತೋಳಿನಿಂದ ಎತ್ತಿಕೊಂಡು ಪೊಲೀಸ್ ಠಾಣೆಯ ಹತ್ತಿರ ಕರೆದುಕೊಂಡು ಬಂದು ಸ್ನಾನ ಮಾಡಿಸಿ
ಅವನು ಧರಿಸಿದ್ದ ಬಟ್ಟೆಗಳನ್ನು ಬಿಚ್ಚಿಸಿ ಅವನಿಗೆ ಹೊಸ ಬಟ್ಟೆಯನ್ನು ಕೊಡಿಸಿ ಹೋಟೆಲ್ ನಿಂದ ಊಟವನ್ನು ಸ್ವಂತ ಹಣದಲ್ಲಿ ತಂದು ಸ್ವತಃ ಪೊಲೀಸರೇ ಕೈಯಿಂದ ಅವನಿಗೆ ಊಟವನ್ನು ಮಾಡಿಸಿ ಸರ್ಕಾರಿ ಆಸ್ಪತ್ರೆಗೆ ಪೋಲಿಸ್ ಜೀಪಿನಲ್ಲೇ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದರು.
ವರದಿ:ಸುಧೀಂದ್ರ ಅರಕಲಗೂಡು