ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ಶಾಲೆಗೆ ಪೀಪಲ್ ಫಾರ್ ಪೀಪಲ್ ಸಂಸ್ಥೆಯ ಹೆಸರಾಂತ ವೈದ್ಯರಾದ ಡಾ.ಅರ್ಜುನ್ ಹಾಗೂ ಡಾ.ಸುನೀತಾ ಮೇಡಂ ರವರು 1 ಲಕ್ಷ ಬೆಲೆ ಬಾಳುವ ಆಟದ ಸಾಮಗ್ರಿಗಳನ್ನು ನೀಡಿದ್ದಾರೆ.ಈ ಶಾಲೆಯ ಜೊತೆಗೆ ತಲಮಕ್ಕಿ,ಹೋನಗೋಡು,ತುಪ್ಪುರು ಶಾಲೆಗೂ ಕೂಡಾ 1 ಲಕ್ಷ ಮೌಲ್ಯದ ಆಟದ ಸಾಮಗ್ರಿಗಳನ್ನು ನೀಡಿದ್ದಾರೆ. ಇವರ ಸೇವಾ ಕಾರ್ಯವನ್ನು ಸುಂಕದಗದ್ದೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸತೀಶ್ ಹಾಗೂ ಉಪಾಧ್ಯಕ್ಷರಾದ ಮಮತಾರವರು ಕೊಂಡಾಡಿದರು.ಮಲೆನಾಡಿನ ಮೂಲೆಯಲ್ಲಿರುವ ಶಾಲೆಯನ್ನು ಕೂಡಾ ಗುರುತಿಸಿ ಇವರು ನೀಡುವ ಸೇವೆ ತುಂಬಾ ಶ್ಲಾಘನೀಯವಾದುದು ಎಂದು ಸಹಶಿಕ್ಷಕರಾದ ಸಿ ಆರ್ ಸುರೇಶ್ ರವರು ಹೇಳಿದ್ದಾರೆ.ಸರ್ಕಾರಿ ಶಾಲೆಗಳನ್ನು ಉಳಿಸುವ ಕಾಳಜಿಗೆ ಎಸ್ ಡಿ ಎಂ ಸಿ ಪರವಾಗಿ ಹಾಗೂ ಊರಿನ ಪರವಾಗಿ ತುಂಬಾ ಹೃದಯದ ಧನ್ಯವಾದಗಳನ್ನು ಶಾಲೆಯ ಮುಖ್ಯಶಿಕ್ಷಕರಾದ ಮಮತಾರವರು ತಿಳಿಸಿದರು.ಈ ಸಂದರ್ಭದಲ್ಲಿ ಗಣೇಶ್,ಸಂಕೇತ್,ಕುಮಾರ್,ದಿವ್ಯ,ನವ್ಯ, ಪೂರ್ಣಿಮಾ,ಅಕ್ಷಯ್ ಹಾಗೂ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.