ಸಿಂಧನೂರು ನಗರದ ಅಮರ ಶ್ರೀ ಆಲದ ಮರದ ಹತ್ತಿರ ವನಸಿರಿ ಫೌಂಡೇಶನ್ (ರಿ).ರಾಜ್ಯ ಘಟಕದ ವತಿಯಿಂದ ಕರ್ನಾಟಕ ರತ್ನ,ನಗುಮುಖದ ಒಡೆಯ ಡಾ.ಪುನೀತ್ ರಾಜಕುಮಾರ ಅವರ ಹುಟ್ಟು ಹಬ್ಬದ ಅಂಗವಾಗಿ ಪ್ರಾಣಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆಗೆ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ ಹೆಸರಿನಲ್ಲಿ ಸಸಿನೆಟ್ಟು ಮಣ್ಣಿನ ಅರವಟ್ಟಿಗೆಗೆ ಕಾಳು ನೀರು ಹಾಕಿ ಪಕ್ಷಿಗಳ ಸಂಕುಲ ಉಳುವಿಗೆ ಕರೆ ನೀಡಿದರು.
ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪುರ,ಎಮ್.ಸುರೇಶ ಮಾಜಿ ಸೈನಿಕರು,ಸಂಚಾರಿ ಪೋಲಿಸ್ ಠಾಣೆಯ PSI ಅವರು ನೀರಿನ ಅರವಟ್ಟಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮಾಜಿ ಸೈನಿಕರಾದ ಎಮ್.ಸುರೇಶ ಹಾಗೂ ಸಂಚಾರಿ ಪೋಲಿಸ್ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಜಯ ಕಲರ್ ಲ್ಯಾಬ್ ಮಾಲಿಕರಾದ ಚೌದ್ರಿ ಸರ್,ಅಮರಯ್ಯ ಸ್ವಾಮಿ ಪತ್ರಿಮಠ,ಆದೇಶ ಶಿಕ್ಷಕರು,ಪ್ರಭಾಕರ ಶಿಕ್ಷಕರು,ಸಂಚಾರಿ ಪೋಲಿಸ್ ಠಾಣೆಯು ಸಿಬ್ಬಂದಿಗಳಾದ ಶ್ರೀಮತಿ ಶೋಭಾ,ಕಾರುಣ್ಯಾಶ್ರಮದ ಚನ್ನಬಸವ ಸ್ವಾಮಿ,ಜೀವಸ್ಪಂದನ ಟ್ರಸ್ಟ್ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ,ಸುರೇಶ ನೆಕ್ಕುಂಟಿ,ರಂಜಾನ್ ಸಾಬ್,ರಾಜು ಪಾಟೀಲ ಶಿಕ್ಷಕರು,ಮುದುಕಪ್ಪ ಹೊಸಳ್ಳಿ ಕ್ಯಾಂಪ್,ರಾಜವಂಶ ತಾಲೂಕ ಅದ್ಯಕ್ಷರಾದ ಮಂಜುನಾಥ ಗಿರಿಜಾಲಿ,ಚಂದ್ರಶೇಖರ ಪವಾಡಶಟ್ಟಿ,ನಾಗರಾಜ ಹತ್ತಿಗುಡ್ಡ,ಡಾ.ಬಸವರಾಜ,ರಾಜು ಪಾಟೀಲ ಶಿಕ್ಷಕರು,ಚನ್ನಪ್ಪ ಕೆ.ಹೊಸಹಳ್ಳಿ ಹಾಗೂ ವನಸಿರಿ ಫೌಂಡೇಶನ್ ಸದಸ್ಯರು,ಸಂಚಾರಿ ಪೋಲಿಸ್ ಠಾಣೆಯ ಅಧಿಕಾರಿಗಳು ಸಿಬ್ಬಂದಿಗಳು,ಪರಿಸರ ಪ್ರೇಮಿಗಳು,ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.