ಕೊಪ್ಪಳ:ಕುಕನೂರ ತಾಲೂಕಿನ ಗೊರ್ಲೆಕೊಪ್ಪ ಗ್ರಾಮದ ದಲಿತ ಚಳವಳಿ ಪರ ಹೋರಾಟಗಾರ,ದಲಿತ ಮುಖಂಡ,ಮಾನವ ಬಂಧುತ್ವ ವೇದಿಕೆ ಸಂಚಾಲಕ ಯಮನೂರಪ್ಪ ಗೊರ್ಲೆಕೊಪ್ಪರವರನ್ನು ಜಿಲ್ಲಾ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ಪ್ರತಿಬಂಧಕ) ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸದಸ್ಯರನ್ನಾಗಿ ಕೊಪ್ಪಳ ಉಪವಿಭಾಗದಿಕಾರಿಗಳು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಯಮನೂರಪ್ಪ ಗೊರ್ಲೆಕೊಪ್ಪ ಸುಮಾರು ಮೂವತ್ತು ವರ್ಷಗಳ ಕಾಲ ಡಿಎಸ್ ಎಸ್ ಸಂಘಟನೆ,ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು,ಅನೇಕ ದಲಿತಪರ,ಹಿಂದುಳಿದ, ಶೋಷಿತಪರ ಹೋರಾಟಗಳನ್ನು ಮಾಡಿದ್ದಾರೆ.ಇವರ ಚಳುವಳಿಪರ ಹೋರಾಟವನ್ನು ಗುರುತಿಸಿ ಸಕಾ೯ರ ಈ ನೇಮಕ ಮಾಡಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.