ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರಸಭೆ ವತಿಯಿಂದ ಗೌರಿ ಫಲ ಯೋಜನೆಯ ರೈತ ಮಹಿಳೆಯರು ಹಾಗೂ ರೈತರು ಉತ್ಪಾದಿಸಿರುವ ಉತ್ಪನ್ನಗಳ ಪ್ರದರ್ಶನ ಮತ್ತು ನೇರ ಮಾರಾಟ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ ಜಿಲ್ಲೆ ನಗರಸಭೆ ಕಾರ್ಯಾಲಯದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ 2024 ಏಪ್ರಿಲ್ 26ರಂದು ನಡೆಯಲಿರುವ ಚುನಾವಣೆ ನಮ್ಮೆಲ್ಲರ ಹಕ್ಕು “ಚುನಾವಣೆಯ ಗರ್ವ ದೇಶದ ಪರ್ವ ಎಂದು ಪಿಎಂ ಗೀತಾ ರವರು ಮಾತನಾಡಿ ಕಾರ್ಯಕ್ರಮ ಮುಂದುವರಿಸಿದರು.ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಭಾಗಿಯಾಗಿ ಕಾರ್ಯಕ್ರಮವನ್ನು ಚುನಾವಣೆಯ ಪ್ರತಿಜ್ಞೆಯ ಮೂಲಕ ಕಾರ್ಯಕ್ರಮ ಮುಂದುವರಿಸಿದರು.
ಗೌರಿಬಿದನೂರು ತಾಲೂಕಿನ ಹೆಮ್ಮೆಯ ತಹಶೀಲ್ದಾರರಾದ ಮಹೇಶ್ ಪತ್ರಿಕೆ ಅವರು ಭಾಗಿಯಾಗಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಲೋಕಸಭಾ ಚುನಾವಣೆಯ ಆಯೋಜನೆಯ ಬಗ್ಗೆ ವಿವರಣೆಯಾಗಿ ನೀಡಿ ಚುನಾವಣೆಯು ನಮ್ಮೆಲ್ಲರ ಹಿತ ನಮ್ಮ ಕರ್ತವ್ಯ ಎಂದರು.ತದನಂತರ ಗೌರಿ ಫಲ ಯೋಜನೆಯಡಿ ರೈತರು ಬೆಳೆದಿರುವ ಬೆಳೆ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಮಾರಾಟವಾಗಲಿದೆ ಇದು ವಾರಕ್ಕೊಮ್ಮೆ ನಡೆಯಲಿರುವ ಮೇಳವಾಗಿದೆ ಎಂದು ರೈತರಲ್ಲಿ ವಿವರಣೆ ನೀಡಿದರು.
ಗೌರಿ ಫಲ ಮಾರಾಟ ಮೇಳವನ್ನು ಹಣ್ಣುಗಳ ಮಾರಾಟ ವ್ಯವಸ್ಥೆಯನ್ನು ನಗರಸಭೆ ಆವರಣ ಗೌರಿಬಿದನೂರು ಇಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಸಹೋದರಿಯರ ಸಹಕಾರದೊಂದಿಗೆ ಮಾಡಲಾಗಿರುತ್ತದೆ ಹಣ್ಣು ಹಾಗೂ ತೆಂಗಿನಕಾಯಿ ಬೆಲೆಯು ಮುಕ್ತ ಮಾರುಕಟ್ಟೆಗಿಂತ ಬಹಳ ಕಡಿಮೆ ಇರುತ್ತದೆ ವಿವರಗಳು ಕೆಳಗಿನಂತಿವೆ.
ಏಲಕ್ಕಿ ಬಾಳೆಹಣ್ಣು 45 ರೂ
ಪಪ್ಪಾಯ ಹಣ್ಣು ಸೀಬೆಹಣ್ಣು 30
ತೆಂಗಿನ ಕಾಯಿ ಇಪ್ಪತ್ತು 25 ಗಾತ್ರದ ಆಧಾರದ ಮೇಲೆ ಕಳೆದ ಬಾರಿಯಂತೆ ಈ ಬಾರಿಯೂ ತಮ್ಮ ಸಹಕಾರವನ್ನು ಕೋರುತ್ತಿದ್ದೇವೆ ನಮ್ಮ ಗೌರಿಬಿದನೂರು ನಮ್ಮ ಹೆಮ್ಮೆ ನಮ್ಮ ರೈತ ನಮ್ಮ ಹೆಮ್ಮೆ ರೈತ ಬಲವರ್ಧನೆ ನಮ್ಮ ಗುರಿ ಎಂದು ತಾಲೂಕ್ ನೋಡಲ್ ಅಧಿಕಾರಿ ವರಪ್ರಸಾದ ರೆಡ್ಡಿ ಹೇಳಿದರು.ಈ ಸಂದರ್ಭದಲ್ಲಿ ರೈತರು,ವಿವಿಧ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿ ವರ್ಗದವರು,
ಪೌರಾಯುಕ್ತರಾದ ಪಿ.ಎಂ. ಗೀತಾ ಉಪಸ್ಥಿತರಿದ್ದರು.
ವರದಿ-ತುಳಸಿ ನಾಯ್ಕ್