ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

4 ಕೋಟಿ ರೂ ವೆಚ್ಚದ ಕನ್ನಡ ಸಾಹಿತ್ಯ ಭವನ ಕಟ್ಟಡ ನಿರ್ಮಾಣಕ್ಕೆ ರೂಪುರೇಷೆ ಸಿದ್ದ:ಡಾ.ವಿಜಯಾದೇವಿ

ಭದ್ರಾವತಿ: ನಗರಸಭೆ ವ್ಯಾಪ್ತಿಯ ಹೊಸ ಸಿದ್ದಾಪುರದಲ್ಲಿ ಅಂದಾಜು 4 ಕೋಟಿ ರೂ ವೆಚ್ಚದಲ್ಲಿ 100/80 ಅಳತೆಯ 3 ಅಂತಸ್ತಿನ ಕನ್ನಡ ಸಾಹಿತ್ಯ ಭವನ ಕಟ್ಟಡ ನಿರ್ಮಾಣ ಮಾಡಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಭವನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷರು ಹಾಗೂ ಸಾಹಿತಿ ಮತ್ತು ಸಾಂಸ್ಕೃತಿಕ ಚಿಂತಕರು ಆದ
ಡಾ.ವಿಜಯಾದೇವಿ ತಿಳಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಿತ “ಕನ್ನಡ ಸಾಹಿತ್ಯ ಭವನದ ಕಟ್ಟಡ ನಿರ್ಮಾಣ ಸಮಿತಿ” ವತಿಯಿಂದ ಹಳೇನಗರದ ಪತ್ರಿಕಾ ಭವನದಲ್ಲಿ
ಪತ್ರಿಕಾಗೋಷ್ಟಿಯಲ್ಲಿ, ಸಾಹಿತ್ಯ ಭವನದ ಕಟ್ಟಡ ನಿರ್ಮಾಣದ ಬೆಳವಣಿಗೆಗಳು ಮತ್ತು ಕಟ್ಟಡ ನಿರ್ಮಾಣ ಸಮಿತಿಯ ರಚನೆಯ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ರವರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಹಾಗೂ ಅವರ ಸಮಕ್ಷಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆಯು ತಾಲ್ಲೂಕು ಕಸಾಪ ಅಧ್ಯಕ್ಷ ಕೂಡ್ಲು ಎಮ್ಮೆಯ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಆದ ಸ್ವಂತ ಸಾಹಿತ್ಯ ಭವನ ಹೊಂದಬೇಕು ಎಂಬ ದೂರ ದೃಷ್ಟಿ ಹಾಗೂ ಎಲ್ಲಾ ಸಾಹಿತ್ಯ ಅಭಿಮಾನಿಗಳ ಕನಸಾಗಿತ್ತು ಈ ಕನಸನ್ನು ನನಸು ಮಾಡುವ ಸದುದ್ದೇಶದಿಂದ ಹೊಸ ಸಿದ್ದಾಪುರದ ಬೈಪಾಸ್ ರಸ್ತೆಯಲ್ಲಿ ಖಾಲಿ ಇರುವ ನಗರಸಭಾ ವ್ಯಾಪ್ತಿಯ ನಿವೇಶನ ಸಾಹಿತ್ಯ ಪರಿಷತ್ತಿಗೆ ನೀಡಿರುವ ನಿವೇಶನದಲ್ಲಿ ಸಾಹಿತ್ಯ ಭವನದ ಕಟ್ಟಡವನ್ನು ನಿರ್ಮಿಸಲು ಈಗಾಗಲೇ ಹಲವಾರು ಬಾರಿ ಚರ್ಚಿಸಿ ತೀರ್ಮಾನಗಳನ್ನು ಮಾಡಿದರು ಸಹ ಕಾರ್ಯಗತವಾಗಿರಲಿಲ್ಲ ಮುಂದೆ ವಿಳಂಬಕ್ಕೆ ಕಾರಣವನ್ನು ನೀಡಬಾರದು ಎಂದು ತೀರ್ಮಾನಿಸಲಾಗಿದೆ.
ಸಾಹಿತ್ಯ ಅಭಿಮಾನಿಗಳ ಕೊಡುಗೆ,ದಾನಿಗಳ ಜನಪ್ರತಿನಿಧಿಗಳ ಪ್ರಗತಿಪರ ಚಿಂತಕರ ಸಹಾಯ ಮತ್ತು ಸಹಕಾರವನ್ನು ಪಡೆದು ಕನ್ನಡ ಸಾಹಿತ್ಯ ಭವನದ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ನಿರ್ಣಯಿಸಲಾಗಿದೆ ಎಲ್ಲರ ಎಲ್ಲರ ಕನಸು ನನಸಾಗಿ ಸಹಕಾರ ಗೊಳಿಸಲು ಕನ್ನಡ ಸಾಹಿತ್ಯ ಭವನದ ಕಟ್ಟಡ ನಿರ್ಮಾಣಕ್ಕೆ ಪ್ರತ್ಯೇಕವಾದ ಕಟ್ಟಡ ಸಮಿತಿ ರಚನೆಯಾಗಬೇಕೆಂದು ತೀರ್ಮಾನಿಸಿ ತೀರ್ಮಾನದಂತೆ ಕಟ್ಟಡ ಸಮಿತಿಗೆ ಡಾಕ್ಟರ್ ವಿಜಯ ದೇವಿ ಎಮರೆಟರ್ ಸಾಹಿತಿ ಮತ್ತು ಸಂಸ್ಕೃತಿ ಚಿಂತಕರು ಭದ್ರಾವತಿ ಇವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸರ್ವಾನುಮತದದ ತೀರ್ಮಾನಿಸಿದೆ

ಉಳಿದ ಇತರ ಪದಾಧಿಕಾರಿಗಳನ್ನು ನೂತನ ಕಟ್ಟಡ ಸಮಿತಿಗೆ ಎಲ್ಲರೊಂದಿಗೆ ಚರ್ಚಿಸಿ ನೇಮಿಸಿಕೊಳ್ಳುವ ಅಧಿಕಾರವನ್ನು ನೂತನ ಅಧ್ಯಕ್ಷರಾದ ಡಾಕ್ಟರ್ ವಿಜಯ ದೇವಿಯವರಿಗೆ ನೋಡಿದ್ದು ಅದರಂತೆ ನೂತನ ಕಟ್ಟಡ ಸಮಿತಿಗೆ ರಚನೆ ಮಾಡಿಕೊಳ್ಳಲಾದ ಕನ್ನಡ ಸಾಹಿತ್ಯ ಭವನ ಕಟ್ಟಡ ನಿರ್ಮಾಣ ಸಮಿತಿ ಭದ್ರಾವತಿ ಇದರ ಕಾರ್ಯಕಾರಿ ಈ ರೀತಿ ಇರುತ್ತದೆ.

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಭವನ ಕಟ್ಟಡ ನಿರ್ಮಾಣ ಸಮಿತಿ ಗೌರವಾಧ್ಯಕ್ಷರಾಗಿ ಶಾಸಕರು ಹಾಗೂ ಕೆ ಆರ್ ಐ ಡಿ ಎಲ್ ಅಧ್ಯಕ್ಷರಾದ ಡಿಕೆ ಸಂಗಮೇಶ್ವರ ಅಧ್ಯಕ್ಷರು ಡಾಕ್ಟರ್ ವಿಜಯ ದೇವಿ ಉಪಾಧ್ಯಕ್ಷರು ಡಿಕೆ ಜಗನ್ನಾಥ್ ಹಾಗೂ ಡಿ ಪ್ರಭಾಕರ್ ಬೀರಯ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಎಂ ಪಿ ಜಗದೀಶ್ ಸಿ ಜಯಪ್ಪ ಹೆಬ್ಬಳಗೆರೆ ಹಾಗೂ ಎಂ ಎಸ್ ಸುಧಾಮಣಿ ವೆಂಕಟೇಶ್ ಕಾರ್ಯದರ್ಶಿಗಳಾಗಿ ಡಿ ನಾಗೋಜಿ ರಾವ್ ಡಿಎಸ್ ಪ್ರಕಾಶ್ ಮತ್ತು ಬಿ ಎಲ್ ಮೋಹನ್ ಕುಮಾರ್ ರವರುಗಳನ್ನು ಆಯ್ಕೆ ಮಾಡಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಕಟ್ಟಡ ನಿರ್ಮಾಣ ಸಮಿತಿಯ ಉಪಾಧ್ಯಕ್ಷರುಗಳಾದ ಬಿ.ಕೆ.ಜಗನ್ನಾಥ್ ಮತ್ತು ಪ್ರಭಾಕರ್ ಬೀರಯ್ಯ ಅಗತ್ಯ ಅಗತ್ಯ ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೂದಲು ಎಣ್ಣೆಯ ಹಾಗೂ ಸಾಹಿತ್ಯ ಭವನ ಕಟ್ಟಡ ನಿರ್ಮಾಣ ಸಮಿತಿಯ ಪದಾಧಿಕಾರಿಗಳಾದ ಬಿಕೆ ಜಗನ್ನಾಥ್ ಪ್ರಭಾಕರ್ ಬೀರಯ್ಯ ಎಮ್ಮಿ ಜಗದೀಶ್ ಈ ಜಯಪ್ಪ ಹೆಬ್ಬಳಗೆರೆ ಎಂ ಎಸ್ ಸುಧಾಮಣಿ ವೆಂಕಟೇಶ್ ಡಿ ನಾಗೋಜಿ ರಾವ್ ಬಿಎಸ್ ಪ್ರಕಾಶ್ ಹಾಗೂ ಬಿಎಲ್ ಮೋಹನ್ ಕುಮಾರ್ ಉಪಸ್ಥಿತರಿದ್ದರು.

ವರದಿ: ಕೆ ಆರ್ ಶಂಕರ್ ಭದ್ರಾವತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ