ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಹನೂರಿನ ಆಧಿದೇವತೆ ಶ್ರೀಬೆಟ್ಟಳ್ಳಿ ಮಾರಮ್ಮ ರಥೋತ್ಸವಕ್ಕೆ ಚಾಲನೆ

ಹನೂರು:ಪಟ್ಟಣದ ಅಧಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದಲ್ಲಿ ನೂತನ ರಥ ನಿರ್ಮಾಣ ಮಾಡಿದ್ದು ಲೋಕಾರ್ಪಣೆಯನ್ನು ಮಾಜಿ ಶಾಸಕರಾದ ಆರ್ ನರೇಂದ್ರ ರಥವನ್ನು ಎಳೆಯುವ ಮೂಲಕ ಚಲನೆಯನ್ನು ನೀಡಿದರು ನಂತರ ಮಾತನಾಡಿದ ಅವರು ಹನೂರು ಪಟ್ಟಣದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಕ್ತರ ಅಪೇಕ್ಷೆ ಮೇರೆಗೆ ಹಾಗೂ ಗ್ರಾಮಸ್ಥರು ಎಲ್ಲರೂ ತೀರ್ಮಾನಿಸಿ ಹಲವಾರು ತಲೆಮಾರುಗಳಿಂದ ಇದ್ದ ತೇರು ನಿರ್ಮಾಣದ ಕನಸು ಇಂದು ನನಸಾಗಿದೆ ಈ ರಥವು ಸುಮಾರು 14.5ಅಡಿಯ‌ ನೂತನ ರಥ ನೋಡುಗರ ಕಣ್ಮನ ಸೆಳೆಯುವಂತ ಶೈಲಿಯಲ್ಲಿದೆ.ರಥ ಶಿಲ್ಪಿಗಳಿಂದ ವಿನೂತನ ಮಾದರಿಯ ಸುಂದರವಾದ 4ಚಕ್ರಗಳುಳ್ಳ ರಥವು ತಳಭಾಗದ ಅಚ್ಚುಗಡ್ಡಿ,ಕುದುರೆ,ಸಿಂಹ ಲಾಂಛನ ಸೇರಿ ಎಂಟು ಅಷ್ಟಕಂಬಗಳುಳ್ಳ 14.5ಅಡಿಯ‌ ಶ್ರೀ ಬೆಟ್ಟಳ್ಳಿ ಮಾರಮ್ಮನ ಪುಷ್ಪಕ ರಥವು ನೋಡುಗರ ಕಣ್ಮನ ಸೆಳೆಯುವಂತ ಶೈಲಿಯಲ್ಲಿ ಕೆತ್ತಲ್ಪಟ್ಟಿದೆ ಈ ದೇವಾಲಯವು ಸುಮಾರು 500 ವರ್ಷಗಳ ಇತಿಹಾಸವಿದೆ ಹೊಂದಿರುವ ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯ ದಿನ ಕಳೆದಂತೆ ಪ್ರಖ್ಯಾತ ಹೊಂದುತ್ತಿದ್ದು ನೆರೆಯ ರಾಜ್ಯ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಕೂಡ ಭಕ್ತ ಸಮೂಹ ದೇವಾಯಲಯಕ್ಕೆ ಆಗಮಿಸುತ್ತಾರೆ ಇನ್ನೂ ವರ್ಷಕ್ಕೆ ಒಂದು ಭಾರಿ ನಡೆಯುವ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಗೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಟ್ಟು ತಮ್ಮ ಇಷ್ಟಾರ್ಥಗಳು ನೆರವೇರುವಂತೆ ಕೋರಿ ಪ್ರಾರ್ಥನೆ ಸಲ್ಲಿಸುತ್ತಾರೆ ಅಲ್ಲದೆ ವಿಶೇಷ ಪೂಜಾ ಪುನಸ್ಕಾರದಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ.ಅಲ್ಲದೆ ಪ್ರತಿ ಮಂಗಳವಾರ ಮಧ್ಯಾಹ್ನ ಆಗಮಿಸುವ ಸಮಸ್ತ ಭಕ್ತರಿಗೆ ಹಲವು ವರ್ಷಗಳಿಂದ ದಾಸೋಹದ ವ್ಯವಸ್ಥೆಯನ್ನು ಸಮಿತಿವತಿಯಿಂದ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಲಿಂಗರಾಜು ಮಾತನಾಡಿ
ಸೋಮವಾರ ರಾತ್ರಿಯಲ್ಲಿ ಜಾಗರ ಸಮರ್ಪಣೆ ಮಾಡಲಾಗಿದೆ,ಮಂಗಳವಾರ ಮಧ್ಯಾಹ್ನ 12ಘಂಟೆ ಸಮಯದಲ್ಲಿ ರಥೋತ್ಸವವು ಅದ್ದೂರಿಯಾಗಿ ಜರುಗಿತು ಇದೇ ದಿನ ತಂಪುಜ್ಯೋತಿಯನ್ನು ಬೆಳಗಲಾಯಿತು.ಬುಧವಾರದಂದು ಹರಕೆ ಹೊತ್ತಭಕ್ತರಿಂದ ಬಾಯಿ ಬೀಗ ಸೇರಿದಂತೆ ಏಪ್ರೀಲ್ 4ರ ಗುರುವಾರ ಮುಂಜಾನೆ ಆಗ್ನಿ‌ಕುಂಡ ಪ್ರದರ್ಶನ ಜರುಗಲಿದ್ದು ಇತಿಹಾಸದಲ್ಲಿ ಮೊದಲ ಭಾರಿಗೆ ರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು
ಬಂದು ಭಾಗಿಯಾಗಿ ಹೊಸ ಅನುಭವ ಪಡೆದುಕೊಂಡರು ಎಂದು ತಿಳಿಸಿದರು.
ಶ್ರೀಬೆಟ್ಟಳ್ಳಿ ಮಾರಮ್ಮ ದೇವಿಯ ಸಾನ್ನಿಧ್ಯದಲ್ಲಿ ನೂತನ ದೇವಿಯ ರಥೋತ್ಸವನ್ನು ಕಣ್ತುಂಬಿಕೊಂಡು ಅಮ್ಮನವರ ಆರ್ಶೀವಾದದೊಂದಿಗೆ ಭಕ್ತರ ಬೇಡಿಕೆಗಳು ಹಾಗೂ ಇಷ್ಟಾರ್ಥಗಳು ನೆರವೇರಲಿ ಸರ್ವರಿಗೂ ಒಳಿತಾಗಲಿ ಎಂದು ಗ್ರಾಮಸ್ಥರು ಸೇರಿದಂತೆ ಆಡಳಿತ ಮಂಡಳಿಯವರು ತಿಳಿಸಿದರು. ಇದೇ ಸಮಯದಲ್ಲಿ ಪ್ರಧಾನ ಅರ್ಚಕರಾದ ರಾಮೂಜೀರಾವ್ ಕುಟುಂಬ ವರ್ಗ ಸೇರಿದಂತೆ ಅಪಾರ ಭಕ್ತರು ಹಾಜರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ