ವಿಜಯ ಕರ್ನಾಟಕ ಕನ್ನಡಿಗರ ವೇದಿಕೆ ತಾಲೂಕ ಅಧ್ಯಕ್ಷರು ನಾಗರಾಜ್ ನಾಯಕ ಮತ್ತು ಅವರ ಶ್ರೀ ಮತಿ ನಿಂಗಮ್ಮ ಅವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು
ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಯಲಗಲದಿನ್ನಿ ಹತ್ತಿರ ವಾಸವಾಗಿದ್ದ ನಾಗರಾಜ್ ನಾಯಕ ಮತ್ತು ನಿಂಗಮ್ಮ ಎಂಬ ದಂಪತಿಗಳು.
ನಾಗರಾಜ್ ನಾಯಕ ಅವರು ವಿಜಯ್ ಕರ್ನಾಟಕ ಕನ್ನಡಿಗರ ವೇದಿಕೆಯ ತಾಲೂಕ ಅಧ್ಯಕ್ಷರು ಆಗಿದ್ದರು ಇವರು ಅಷ್ಟೇ ಅಲ್ಲದೆ ತಮ್ಮ ಸ್ವಂತ ಖರ್ಚಿನಲ್ಲೆ
ಸಮಾಜ ಸೇವೆಯನ್ನು ಮಾಡಿದ್ದಾರೆ.
2023 ರಲ್ಲಿ ಮಳೆ ಇಲ್ಲದೆ ಎಷ್ಟೋ ನದಿಗಳು ಜಲಾಶಗಳು ಬತ್ತಿ ಹೋಗಿವೆ ಅಷ್ಟೇ ಅಲ್ಲದೆ ಕೆರೆ ಬಾವಿ ಹಳ್ಳಕೊಳ್ಳಗಳೆಲ್ಲ ಬತ್ತಿ ಹೋಗಿದ್ದು ದನ ಕರುಗಳಿಗೆ ಕುಡಿಯಲು ನೀರು ಇಲ್ಲದೆ ಒದ್ದಾಡುವ ಪರಿಸ್ಥಿತಿ ಆಗಿದೆ ಇವಾಗ ದನ ಕರುಗಳಿಗೆ ಮನೆಯಲ್ಲಿ ಕಟ್ಟಿ ಮೇಯಿಸದೆ ಹಾಗೆ ಅಡವಿಗೆ ಬಿಟ್ಟು ಬಿಡುತ್ತಾರೆ ಇಂತಹ
ಸಮಯದಲ್ಲಿ ಬಿಸಿಲಿನ ತಾಪಮಾನ
ಹೆಚ್ಚಾಗಿದ್ದು ಮನುಷ್ಯರಿಗೇನೇ ಕುಡಿಯಲು ನೀರು ಸಿಗದೇ ಪರದಾಡುವಂತಾಗಿದೆ ಅಷ್ಟೇ ಅಲ್ಲದೆ
ಮನುಷ್ಯನಿಗೆ ನೀರಿನ ಅವಶ್ಯಕತೆ ಎಷ್ಟು
ಇದಿಯೋ ಅಷ್ಟೇ ಭೂಮಿಯ ಮೇಲೆ
ಪ್ರತಿಯೊಂದು ಜೀವರಾಶಿಗೂ ನೀರು ಬೇಕು ಎಂದು ತಿಳಿದು ತಾಲೂಕ ವಿಜಯ ಕರ್ನಾಟಕ ಕನ್ನಡಿಗರ ವೇದಿಕೆ ಅಧ್ಯಕ್ಷರಾದ ನಾಗರಾಜ್ ನಾಯಕ ರವರು ತಮ್ಮ ಸ್ವಂತ ಖರ್ಚಿನಲ್ಲೇ ಬೀದಿಯ ಬದಿ ರೋಡ್ ಪಕ್ಕದಲ್ಲಿ ಸಣ್ಣ ಸಣ್ಣ ಸಿಮೆಂಟ್ ನ ಗುಮ್ಮಿಗಳನ್ನು ನಿರ್ಮಿಸಿ ಪ್ರಾಣಿ ಪಕ್ಷಿಗಳಿಗೆ ದನ ಕರುಗಳಿಗೆ ಕುಡಿಯುವ ನೀರಿನ ಅರವಟಿಗೆಯನ್ನು ಮಾಡಿ ದಿನಾಲೂ ಟ್ಯಾಂಕರ್ ಮೂಲಕ ಗುಮ್ಮಿಗಳಿಗೆ ನೀರು ತುಂಬಿಸುತ್ತಾ ಪ್ರಾಣಿ ಪಕ್ಷಿಗಳಿಗೆ ದನಕರುಗಳಿಗೆ ಕುಡಿಯುವ ನೀರಿನ ಅನುಕೂಲ ಮಾಡಿ ಕೊಟ್ಟಿದ್ದಾರೆ ಇಂತ ಸಮಾಜ ಸೇವೆ ಮಾಡುವ ನಾಗರಾಜ್
ನಾಯಕ ಅವರಿಗೆ ದೇವರು ಇನ್ನಷ್ಟು
ಶಕ್ತಿಯನ್ನು ಕೊಡಲಿ ಇನ್ನು ಹೆಚ್ಚು ಹೆಚ್ಚು
ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ ಇದಕ್ಕೆ ಕುಟುಂಬದವರು ಸ್ನೇಹಹಿತರು
ಇನ್ನು ಹೆಚ್ಚು ಪ್ರೋತ್ಸಾಹ ನೀಡಲಿ ಹಾಗೂ ದೇವರು ಅವರಿಗೆ ಇನ್ನಷ್ಟು ಶಕ್ತಿ ಕೊಡಲಿ ಎಂದು ಹಾರೈಸಿದರು.
ಈ ಸಮಯದಲ್ಲಿ ಮಂಜುನಾಥ್ ಪಾಟೀಲ್ ವಕೀಲರು,ಮಾರುತಿ ಜಿಮ್ಮ್,ನಾಗರಾಜ್ ಸಂತೆಕೆಲ್ಲೂರ,ನಿರಂಜನ್ ಅಂಗಡಿ ಭಾಗಿಯಾಗಿದ್ದರು.
ವರದಿ:ನಿರಂಜನ್ ಅಂಗಡಿ