ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಯುಗಾದಿ ಹಬ್ಬದ ಅಂಗವಾಗಿ ಸಸಿ ನೆಟ್ಟ ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯ:ವ್ಯವಸ್ಥಾಪಕ ನಿರ್ದೇಶಕ ಅಮರೇಗೌಡ ಮಾಲಿ ಪಾಟೀಲ್

ಸಿಂಧನೂರು ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ವಸಂತ ಮಾಸದ ಮೊದಲದಿನವಾದ ಯುಗಾದಿ ಹಬ್ಬದ ದಿನದ ಅಂಗವಾಗಿ ವನಸಿರಿ ಫೌಂಡೇಶನ್ ವತಿಯಿಂದ ಸಸಿ ನೆಟ್ಟು ನೀರುಣಿಸುವ ಮೂಲಕ ಹೊಸವರ್ಷದ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಮರೇಗೌಡ ಹೆಚ್ ಮಾಲಿ ಪಾಟೀಲ ಅವರು ಸಸಿ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಇಂದು ಯುಗಾದಿ ಹಬ್ಬದ ಅಂಗವಾಗಿ ವನಸಿರಿ ಫೌಂಡೇಶನ್ ತಂಡ ಸಸಿ ನೆಡುವ ಕಾರ್ಯಕ್ರಮದ ಮೂಲಕ ನೂತನ ಚೈತ್ರ ಮಾಸದ ಹೊಸ ವರ್ಷವನ್ನು ಸ್ವಾಗತ ಮಾಡುತ್ತಿರುವುದು ತುಂಬಾ ಸಂತೋಷದ ಸಂಗತಿ.ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕರಾದ ನನ್ನ ಆತ್ಮೀಯರೂ ಆದ ಅಮರೇಗೌಡ ಮಲ್ಲಾಪೂರ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವುದು ನನಗೆ ಹೆಮ್ಮೆಯ ವಿಷಯ.ಈ ದಿನ ಪ್ರಕೃತಿಯು ಸೊಬಗನ್ನು ಹರಡುವ ದಿನ,ಪ್ರಕೃತಿ ಮಾತೆ ಚಿಗುರೊಡೆಯುವ ದಿನ, ಆನಂದ ಪಡುವ ದಿನ,ಈ ದಿನ ಎಲ್ಲಾ ಗಿಡಮರಗಳು ಹೊಸಚಿಗುರೊಡೆಯುವ ದಿನವಾಗಿದೆ,ಸದ್ಯ ಇದೀಗ ನಮ್ಮಲ್ಲಿ ಬರಗಾಲ ಎದುರಾಗಿದೆ ಪ್ರಾಣಿ ಪಕ್ಷಿಗಳಿಗೆ ನೀರಿನ ಹಾಹಾಕಾರ ಹೆಚ್ಚಾಗಿದೆ.ಮಳೆಯಿಲ್ಲದೆ ಗಿಡಮರಗಳು ಒಣಗುತ್ತಿವೆ.ಈಗ ಬೇಸಿಗೆ ಕಾಲ ಇರುವುದರಿಂದ ಪ್ರತಿಯೊಬ್ಬರೂ ಬಿಸಿಲಿನ ತಾಪಮಾನವನ್ನು ತಗ್ಗಿಸಲು ಗಿಡಮರಗಳನ್ನು ನೆಡಲು ಮುಂದಾಗಬೇಕು,ಪ್ರಾಣಿಪಕ್ಷಿಗಳಿಗೆ ನೀರಿನ ಅರವಟ್ಟಿಗೆಗಳನ್ನು ನಿರ್ಮಿಸುವ ಮೂಲಕ ಪಕ್ಷಿಗಳ ಮೇಲೆ ದಯೆ ತೋರಬೇಕು.ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ನೇತೃತ್ವದ ವನಸಿರಿ ತಂಡದ ಜೊತೆಗೆ ಕೈಜೋಡಿಸುವ ಮೂಲಕ ದಿನನಿತ್ಯ ಪರಿಸರ ಸೇವೆಯಲ್ಲಿ ತೊಡಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಷ.ಬ್ರ.ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಬಾಳೆಹೊನ್ನೂರು ಶಾಖಾ ಮಠ ಕರಿಬಸವನಗರ ಸಿಂಧನೂರು,ಪಂಡಿತಯ್ಯ ಶಾಸ್ತ್ರೀ,ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕರಾದ ಅಮರೇಗೌಡ ಮಲ್ಲಾಪೂರ,ಪಂಡಿತಯ್ಯ,ಹನುಮನಗೌಡ ಮಾಲಿ ಪಾಟೀಲ್,ಪಂಪನಗೌಡ ಮಾಲಿ ಪಾಟೀಲ್,ಶರಣಪ್ಪ ಸಾಹುಕಾರ,ಬಸವರಾಜ ಹುಣಸೆಗಿಡ,ರಾಜಪುತ್ರ ಕಂಬಾಳಿ,ದೇವರಡ್ಡಿ ಕೆಸರಟ್ಟಿ,ಆನಂದ ಮಾಸ್ಟರ್ ಸಾಹುಕಾರ,ವಿನೋದ ಕುಮಾರ,ನಾಗರಾಜ ಕೆಸರಟ್ಟಿ,ವೆಂಕನಗೌಡ ಕಾರಿಗನೂರು,ಮಲ್ಲಿಕಾರ್ಜುನ ಹೆಚ್,ಬಸವರಾಜ ನಿಟ್ಟೂರು ಗುತ್ತಿಗೆದಾರರು,ತಿಪ್ಪಣ್ಣ ಹೂಗಾರ್,ಬಸವರಾಜ ಪ್ರಾಧ್ಯಾಪಕ,ನಿರುಪಾದಿ ಹಾಲುಮತ,ಮಲ್ಲಪ್ಪ ಹಾಲುಮತ,ಬಸವರಾಜ ಹೋಟೆಲ್,ಅಮರೇಶ ಕೆಂಗುಂಟಿ ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ