ಕಲಬುರಗಿ ಜಿಲ್ಲೆಯ ಜೇವರ್ಗಿ ನೇದಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕುರನಳ್ಳಿ ಗ್ರಾಮಕ್ಕೆ ನೀರಿನ ತೊಂದರೆ ನೀಗಿಸದ ಪಿಡಿಓಗೆ ಮೇಲಾಧಿಕಾರಿಗಳು ಈ ಕೂಡಲೇ ವಜಾ ಮಾಡಬೇಕು ಏಕೆಂದರೆ ಸುಡು ಬೇಸಿಗೆ ಬಿಸಿಲಿನಲ್ಲಿಯೂ ಗ್ರಾಮಸ್ಥರೆಲ್ಲರೂ ನೀರಿಗಾಗಿ ಅಲೆದಾಡುತ್ತಾ ಕಂಗಾಲಾಗಿ ನೀರಿನ ದಾಹ ತೀರದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಯಲ್ಲಪ್ಪ ಜೇರಟಗಿಯವರಿಗೆ ಪೋನ್ ಕರೆ ಮಾಡಿದರೆ ಕರೆ ಸ್ವಿಕರಿಸುತ್ತಿಲ್ಲ,ಪಂಚಾಯತ್ ಗೆ ಬರೋದಿಲ್ಲ,ಸಾರ್ವಜನಿಕರ ಕಷ್ಟಗಳನ್ನು ಕೇಳಲು ಸ್ಥಳಕ್ಕೂ ಆಗಮಿಸುವುದಿಲ್ಲ,ನೀರಿನ ವ್ಯವಸ್ಥೆ ಮಾಡುವುದು ಬಿಟ್ಟು ಅನುದಾನದ ನೆಪವೊಡ್ಡಿ ಪಂಚಾಯತಿಗೂ ಬರದೆ ಪೋನ್ ಸ್ವಿಚ್ ಆಫ್ ಮಾಡುತ್ತಾರೆ ತಮಗೆ ಬೇಕಾದಗೊಮ್ಮೆಆಗಾಗ ಚಾಲು ಮಾಡಿ ಸಿಬ್ಬಂದಿಗೆ ಮಾತಾಡಿ ಯಾರಾದರೂ ಮೇಲಾಧಿಕಾರಿಗಳು ಬಂದಾರ ಏನ್ ಇಲ್ಲ ಅಂತಹ ಮಾಹಿತಿ ಪಡೆಯುತ್ತಾ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯವನ್ನು ನೀಗಿಸದೆ ನಿರ್ಲಕ್ಷ್ಯ ತೋರಿಸಿ ಬೇಜವಾಬ್ದಾರಿ ಮಾತುಗಳನ್ನಾಡುತ್ತಾರೆ.ಇಂಥ ಅಧಿಕಾರಿಗಳಿಗೆ ಮೇಲಾಧಿಕಾರಿಗಳು ಯಾರು ಹೇಳೋರು-ಕೇಳೋರಿಲ್ವ? ಗ್ರಾಮದಲ್ಲಿ ದವಲಮಲಿಕ ಜಾತ್ರಾ ಮಹೋತ್ಸವವಿದ್ದು ಬೇರೆ-ಬೇರೆ ಗ್ರಾಮದಿಂದ ಭಕ್ತಾಧಿಗಳು ಮತ್ತು ಪರಸ್ಥಳದಿಂದ ಬರುವ ಎಲ್ಲರಿಗೂ ಈ ನೀರಿನ ದಾಹ ತೀರಿಸುವವರು ಯಾರು ಸ್ವಾಮಿ..!!?
ಶುದ್ಧ ಕುಡಿಯುವ ನೀರಿನ ಘಟಕವಿಲ್ಲ ಮತ್ತು ಕೊಳವೆ ಬಾವಿಯಿಂದ ನೀರು ಬರುತ್ತಿಲ್ಲ ಅಂತರ್ಜಲ ಕುಸಿತವಾಗಿದೆ ಕೊಳವೆ ಬಾವಿಗೆ ಇನ್ನಷ್ಟು ಪೈಪುಗಳು ಹಾಕಿಸಿ ವ್ಯವಸ್ಥೆ ಕಲ್ಪಿಸಿ ಎಂದು ಗ್ರಾಮಸ್ಥರೆಲ್ಲರೂ ಕೇಳಿದರೂ ಕೇಳುತ್ತಿಲ್ಲ.
ಅತಿ ಶೀಘ್ರದಲ್ಲಿಯೇ ಮೇಲಾಧಿಕಾರಿಗಳು ಪಿಡಿಓ ಯಲ್ಲಪ್ಪ ಜೇರಟಗಿಯವರಿಗೆ ವಜಾಗೊಳಿಸದಿದ್ದರೆ ಮುಂದಿನ ದಿನ-ಮಾನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತೆ ಎಂದು ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ಗ್ರಾಮಸ್ಥರೆಲ್ಲರೂ ಆಕ್ರೋಶ ಹೊರ ಹಾಕುತ್ತಾ ಪ್ರತಿ ದಿನ ಉಪಯುಕ್ತವಾಗುವ ಶುದ್ಧ ಕುಡಿಯುವ ನೀರಿನ ಘಟಕದ ಒಂದೊಂದು ಸಾಮಾನುಗಳನ್ನು ಬಿಚ್ಚಿ ತೆಗೆದುಕೊಂಡು ಹೋಗಿ ಬೇರೆ ಊರಿನ ಘಟಕಗಳಿಗೆ ಬಳಸಲು ಸಿಬ್ಬಂದಿಗೆ ಹೇಳಿ ಎಲ್ಲಾ ನಮ್ಮ ಕುರನಳ್ಳಿ ಗ್ರಾಮದ ವ್ಯವಸ್ಥೆ ಮತ್ತಷ್ಟು ಹದಗೆಡಿಸಿ ಬಿಟ್ಟು ಕುರನಳ್ಳಿ ಗ್ರಾಮಕ್ಕೆ ನಿರ್ಲಕ್ಷ್ಯ ತೋರುತ್ತಿದ್ದಾರೆ ನಮ್ಮ ಊರು ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಗ್ರಾಮದ ಜನತೆಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದೆ ಎಂದು ಗ್ರಾಮಸ್ಥರು ಹಾಗೂ ಗ್ರಾಮದ ನೊಂದ ಯುವಕ ಬಸವರಾಜ
ಹಳಿಮನಿ ಕುರನಳ್ಳಿಯವರು “ಕರುನಾಡ ಕಂದ ಪತ್ರಿಕೆ”ಯ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್