ರಾಯಚೂರು:ಲಿಂಗಸುಗೂರು ತಾಲೂಕು ನಾಗಲಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಡಾ.ಚಂದ್ರಶೇಖರ್ ವ್ಯಾಕರನಾಳ ಅವರು ಅಂಬೇಡ್ಕರ್ ಅವರು ಶೋಷಿತರ ಪರವಾಗಿ ಹೋರಾಡಿದ ನಾಯಕ ನೊಂದವರ ಆಶಾಕಿರಣ,ಅವರು ಕೊಟ್ಟ ಸಂವಿಧಾನಾತ್ಮಕ ಅವಕಾಶಗಳಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದ್ದು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ ಎಂದು ಲಿಂಗಸುಗೂರಿನ ಡಾ.ಸುಧಾಮೂರ್ತಿ ಇನ್ಫೋ ಮಹಿಳಾ ಪದವಿ ಕಾಲೇಜಿನ ಉಪನ್ಯಾಸಕ ಡಾ.ಚಂದ್ರಶೇಖರಪ್ಪ ವ್ಯಾಕರನಾಳ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಇಂದು ಸರ್ಕಾರಿ ಪ್ರೌಢಶಾಲೆ ನಾಗಲಾಪುರದಲ್ಲಿ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಸರ್ವರ ಏಳಿಗೆಯ ಆಲೋಚನೆಯ ಮಹಾ ನಾಯಕ,ಶೋಷಿತರ ಬಾಳಿಗೆ ಬೆಳಕಾಗಿದ್ದು,ಕೇವಲ ಕೆಳವರ್ಗದವರಷ್ಟೇ ಅಲ್ಲ ಮೇಲ್ವರ್ಗದವರಿಗೂ ಆದರ್ಶ ಎಂಬುದು ಅರಿತುಕೊಳ್ಳಬೇಕಾದ ವಿಷಯ ಎಂದರು.ದೀನ ದಲಿತರು,ಬಡವರು,ಶ್ರಮಿಕರು,ಕಾರ್ಮಿಕರು ಹೀಗೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಸಂವಿಧಾನಬದ್ಧ ಹಕ್ಕುಗಳನ್ನಾಗಿ ನೀಡಿ ಸಾಮಾಜಿಕ ವ್ಯವಸ್ಥೆಯ ಒಗ್ಗೂಡುವಿಕೆಗೆ ಶ್ರಮಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಭಾರತಿ ಕುಲಕರ್ಣಿಯವರು ಮಾತನಾಡಿ ಅಂಬೇಡ್ಕರ್ ರವರ ಜಯಂತಿಯಂದು ನಮ್ಮ ಶಾಲೆಯ ಮೊದಲ ಬ್ಯಾಚ್ ನ ವಿದ್ಯಾರ್ಥಿ ಸಾಧನೆ ಮಾಡಿ ಇಂದು ಸನ್ಮಾನಕ್ಕೆ ಅಣಿಯಾಗಿದ್ದು ಎಲ್ಲರಿಗೂ ಹೆಮ್ಮೆಯ ಸಂಗತಿ. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪೂರ್ತಿಯ ವಿಷಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ನಾಗರಾಜ್ ಪಾಟೀಲ್,ಬಬಲೇಶ್, ಶಿವಲಿಂಗಯ್ಯ,ಚೆನ್ನಪ್ಪ ಶೆಟ್ಟರ್,ಬಿ.ಎಸ್.ಬೇನಾಳ ಉಪಸ್ಥಿತರಿದ್ದರು.
ವರದಿ-ಬಸವರಾಜ್ ಬಡಿಗೇರ್