ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯಿಂದ 133 ನೇ ಜನ್ಮದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಗ್ರಾಮದ ಹಿರಿಯರ ನೇತೃತ್ವದಲ್ಲಿ ಹೂವಿನ ಪುಷ್ಪಾಲಂಕಾರದೊಂದಿಗೆ ಜಯಂತಿಯನ್ನು ನೆರವೇರಿಸಲಾಯಿತು.ಅಂಬೇಡ್ಕರ್ ಅವರ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮಾಜಿ ಉಪಾಧ್ಯಕ್ಷರಾದ ರುದ್ರೇಶ್ ಬಿ ಹಾಗೂ ಹುಸೇನಪ್ಪ ಗ್ರಾಮ ಪಂಚಾಯತ್ ಸದಸ್ಯರು ಮಾತನಾಡಿ, ಭಾರತೀಯ ಸಂವಿಧಾನದ ಪಿತಾಮಹ”ಎಂದು ವ್ಯಾಪಕವಾಗಿ ಗುರುತಿಸಲ್ಪಟ್ಟ ಡಾ.ಭೀಮ್ ರಾವ್ ಅಂಬೇಡ್ಕರ್ ಅವರ ಜನ್ಮದಿನದ ನೆನಪಿಗಾಗಿ ವಾರ್ಷಿಕವಾಗಿ ಏಪ್ರಿಲ್ 14 ರಂದು ಭೀಮ್ ಜಯಂತಿ ಎಂದೂ ಕರೆಯಲ್ಪಡುವ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ.1891 ರಲ್ಲಿ ಜನಿಸಿದ ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಪ್ರಧಾನ ವಾಸ್ತುಶಿಲ್ಪಿಯಾಗಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು ಮತ್ತು ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದರು.ಇದಲ್ಲದೆ,ಅವರು ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ ಮತ್ತು ಸಮಾಜ ಸುಧಾರಕ ಎಂದು ಗೌರವಿಸಲ್ಪಟ್ಟಿದ್ದಾರೆ ಎಂದರು.ಈ ಸಂದರ್ಭದಲ್ಲಿ ಬಸರಾಜ ಹೊಸಕೇರಾ,ರುದ್ರೇಶ್ ಬಿ,ಮಲ್ಲಿಕಾರ್ಜುನ ಸಂಗಾಪುರ,ಸಿದ್ದಪ್ಪ ಕಂಬಳಿ,ಡಾಕ್ಟರ್ ಬಾಬು ಸಾಬ್, ಹುಸೇನಪ್ಪ ಗ್ರಾಮ ಪಂಚಾಯತ್ ಸದಸ್ಯರು,ಲಕ್ಷ್ಮಣ ಮಾಜಿ ಗ್ರಾಮ್ ಪಂಚಾಯತ್ ಸದಸ್ಯರು,ಎಲ್ಲಪ್ಪ ಬೋವಿ,ಲಕ್ಷ್ಮಿಕಾಂತ ಜಿರಾಳ,ಛತ್ರಪ್ಪ ನಾಯಕ, ನಾಗಪ್ಪ ನವಲಿ,ಮಲ್ಲಿಕಾರ್ಜುನ ಗೌಡ ಪಾಟೀಲ್, ಅಜ್ಮೀರ್ ಸಾಬ್,ಬಸವರಾಜ ಲಿಂಗ ರೆಡ್ಡಿ, ಡಿಎಸ್ಎಸ್ ಜಿಲ್ಲಾ ಅಧ್ಯಕ್ಷರಾದ ಆದಪ್ಪ ಸಿಂಗನಾಳ,ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ಆದಪ್ಪ,ಹುಸೇನಪ್ಪ,ಮಹೇಶ, ಕನಕಪ್ಪ,ಉಮೇಶ,ಗುರುಲಿಂಗಪ್ಪ,ಕಂಠಪ್ಪ,ಚಂದಪ್ಪ, ಮರಿಯಪ್ಪ ಪಿಕೆಜಿ ಬ್ಯಾಂಕ್,ಮಂಜುನಾಥ ಹಣವಾಳ, ಚಂದ್ರಶೇಖರ್ ಸಿಂಧನೂರ್,ಮಂಜುನಾಥ ಎನ್ ಗ್ರಾಮದ ಎಲ್ಲಾ ಸಮುದಾಯದವರು ದಲಿತ ಸಂಘರ್ಷ ಸಮಿತಿ ಸದಸ್ಯರು ಪದಾಧಿಕಾರಿಗಳು, ಯುವಕರು ಮಹಿಳೆಯರು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.