ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾ ಲಿಂಗಸೂಗೂರು ಗ್ರಾಮದ ಸರ್ವೆ ನಂಬರ್ 502-5,3,7 ಜಮೀನನ್ನು ವಾಸದ ಉದ್ದೇಶಕ್ಕಾಗಿ ಬಿನ್ ಶೇತ್ಕಿ ಜಮೀನನಾಗಿ ಭೂ ಪರಿವರ್ತನೆ ಮಾಡುತ್ತಿದ್ದು, ಸದರಿ ಜಮೀನಿನ ಸುತ್ತಮುತ್ತ ಇರುವ ಅರಣ್ಯ ಇಲಾಖೆಯ ಜಮೀನನ್ನು ಮತ್ತು ರಾಜ್ಯ ಹೆದ್ದಾರಿಯ ರಸ್ತೆ ಮತ್ತು ರಾಂಪುರ್ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಅತಿಕ್ರಮಿಸಿಕೊಂಡು ಲೇಔಟ್ ಮಾಡುತ್ತಿರುವುದರಿಂದ ಬಿನ್ ಶೇತ್ಕಿ ಆದೇಶವನ್ನು ರದ್ದುಪಡಿಸಬೇಕೆಂದು ದಲಿತ ಸಂಘರ್ಷ ಸಮಿತಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಣ್ಣ ಪರಂಗಿಯವರು 01-12-2023 ರಂದು ಮಾನ್ಯ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಮಾನ್ಯ ತಹಶೀಲ್ದಾರರು 25-02-2024 ಕ್ಕೆ ತಾಲೂಕು ಭೂಮಾಪಕರು ಲಿಂಗಸುಗೂರು,ಕಂದಾಯ ನಿರೀಕ್ಷಕರು ಲಿಂಗಸಗೂರು/ಗ್ರಾಮ ಆಡಳಿತ ಅಧಿಕಾರಿಗಳು ಲಿಂಗಸುಗೂರು ಇವರಿಗೆ ಒಂದು ಮೆಮೋವನ್ನು ಕಳಿಸಿರುತ್ತಾರೆ.ಸದರಿ ಪ್ರಕರಣವನ್ನು ತುರ್ತಾಗಿ ವಿಲೇ ಮಾಡಿ ಮಾನ್ಯ ಸಹಾಯಕ ಆಯುಕ್ತರು ಲಿಂಗಸ್ಗೂರು ರವರಿಗೆ ವರದಿಯನ್ನು ಸಲ್ಲಿಸಬೇಕಾಗಿರುವುದರಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾ ಲಿಂಗಸೂಗೂರು ಗ್ರಾಮದ ಸರ್ವೇ ನಂಬರ್ 502-5,3,7 ಜಮೀನುಗಳ ಹಾಗೂ ಸದರಿ ಜಮೀನುಗಳಿಗೆ ಹೊಂದಿಕೊಂಡಿರುವ ಅರಣ್ಯ ಇಲಾಖೆಯ ಜಾಗ,ಲೋಕೋಪಯೋಗಿ ಇಲಾಖೆ ಮತ್ತು ಸರಕಾರದ ಜಾಗಗಳ ಅಳತೆ ಬಗ್ಗೆ ಜಂಟಿಯಾಗಿ ಸರ್ವೆ ಮಾಡಿ ಒತ್ತುವರಿಯಾಗಿರುವ ಬಗ್ಗೆ ಸ್ಪಷ್ಟವಾದ ವರದಿಯನ್ನು ಮೂರು ದಿನಗಳ ಒಳಗೆ ಸಲ್ಲಿಸಲು ತಹಶೀಲ್ದಾರರು ಮೆಮೋ ಕೊಟ್ಟರೂ ಕೂಡಾ ತಹಶೀಲ್ದಾರರು ಹಾಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದು ವರ್ತಿಸುವುದು ಕಾನೂನು ಉಲ್ಲಂಘನೆಯಾಗಿದೆ.
ಈ ಕೂಡಲೇ ಮಾನ್ಯ ತಹಶೀಲ್ದಾರರು ಹಾಗೂ ಮಾನ್ಯ ಸಹಾಯಕ ಆಯುಕ್ತರು ಲಿಂಗಸ್ಗೂರು ಅರಣ್ಯ,ರಾಜ್ಯ ಹೆದ್ದಾರಿ,ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಭೂ ಮಾಫಿಯಾಗಳಿಗೆ ಹಾಗೂ ಮಾಫಿಯಾ ಗಳ ಜೊತೆ ಸಹಕರಿಸಿದ ಕೆಲವು ಅಧಿಕಾರಿ ಗಳಿಗೂ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ.
ವರದಿ ಬಸವರಾಜ್ ಬಡಿಗೇರ್