ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಬಿಜೆಪಿ ಮತ್ತು ಜಾತ್ಯಾತೀತ ಜನತಾದಳದ ಮೈತ್ರಿ ಅಭ್ಯರ್ಥಿಯಾದ ಯದುವೀರ್ ಕೃಷ್ಣದತ್ತ ಒಡೆಯರ್ ರವರು ಪಿರಿಯಾಪಟ್ಟಣ ತಾಲೂಕಿನ ವಿವಿಧ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡುತ್ತಾ “ಭಾರತ ದೇಶ ಸುಭದ್ರವಾಗಿರಲು ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿಯಾಗಿ ಮಾಡಲು ಬಿಜೆಪಿ ಮತ್ತು ಜಾತ್ಯಾತೀತ ಜನತಾದಳದ ಮೈತ್ರಿ ಅಭ್ಯರ್ಥಿಯಾದ ನಾನು ಈ ಗ್ರಾಮದಲ್ಲಿ ಮತ ಕೇಳಲು ಬಂದಿದ್ದು ನಿಮ್ಮೆಲ್ಲರ ಆಶೀರ್ವಾದ ಲೋಕಸಭಾ ಚುನಾವಣೆಯಲ್ಲಿ ನನ್ನ ಗುರುತಾದ ಕಮಲದ ಗುರುತಿಗೆ ಮತ ಹಾಕುವುದರ ಮೂಲಕ ಜಯಶೀಲರನ್ನಾಗಿ ಮಾಡಬೇಕು ಮಾಡಿದರೆ ಮೈಸೂರು ಲೋಕಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಮತ್ತು ಈ ಭಾಗದಲ್ಲಿ ತಂಬಾಕು ಹೆಚ್ಚಾಗಿ ಬೆಳೆಯುವ ರೈತರ ಕಷ್ಟಕ್ಕೆ ನಾನು ಸ್ಪಂದಿಸುತ್ತೇನೆ”ಎಂದು ತಿಳಿಸಿದರು.
ನನ್ನ ಮೇಲೆ ಇಲ್ಲಸಲ್ಲದ ಅಪವಾದವನ್ನು ಕಾಂಗ್ರೆಸ್ ಅಭ್ಯರ್ಥಿಗಳು ನಡೆಸುತ್ತಿದ್ದು ನಾನು ರಾಜನಾದರೂ ಸಹ ಸಾಮಾನ್ಯ ಜನರ ಕೈಗೆ ಸಿಕ್ಕುತ್ತೇನೆ ಅವರ ಅಪವಾದಕ್ಕೆ ದೂರವಾಗುತ್ತೇನೆ ಅದರಿಂದ ನನ್ನನ್ನು ಗೆಲ್ಲಿಸಿ ಎಂದು ಕೇಳಿಕೊಂಡರು ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ ಮಾದೇವ ಅವರು,ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರಾದ ಅಣ್ಣಯ್ಯ ಶೆಟ್ಟಿ ರವರು,ಮಾಜಿ ಶಾಸಕರಾದ ಹೆಚ್ ಸಿ ಬಸವರಾಜ್ ರವರು,ತಾಲೂಕು ಬಿಜೆಪಿ ಘಟಕದ ಅಧ್ಯಕ್ಷರಾದ ರಾಜೇಂದ್ರ ಅವರು,ದೇವರಾಜ್ ಅರಸು ರವರ ಮೊಮ್ಮಗ ಮಂಜುನಾಥ್ ಅರಸರವರು,ಬಿಜೆಪಿ ಮುಖಂಡರಾದ ಆರ್ ಟಿ ಸತೀಶ್ ರವರು, ರಾಜೇಗೌಡರು ಎಚ್ ಎ ರಾಮಚಂದ್ರರವರು,ಎಚ್ ಡಿ ಶ್ರೀನಿವಾಸ್ ಹೆಚ್ಆರ್ ದೀಪು ರವರು,ಗ್ರಾಮ ಪಂಚಾಯತಿ ಸದಸ್ಯರು,ಯುವಕರು,ಮಹಿಳೆಯರು ಹಾಗೂ ಹಂಡಿತವಳ್ಳಿ ಗ್ರಾಮಸ್ಥರು ಸಂದರ್ಭದಲ್ಲಿ ಹಾಜರಿದ್ದರು.
ವರದಿ-ಹೆಚ್.ಆರ್.ಶಂಕರ್,ಹಂಡಿತವಳ್ಳಿ