ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ನಡೆದ ಭಾರತ ರತ್ನ,ಭಾಗ್ಯವಿಧಾತ,ಸಮಾಜವಾದಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜಯಂತಿಯನ್ನು ಗ್ರಾಮದ ದಲಿತ ಬಾಂಧವರು ಮತ್ತು ಎಲ್ಲಾ ಸಮುದಾಯದ ಯುವಕರು ತಾಯಂದಿರು ಸೇರಿ ಬಹಳ ಅದ್ದೂರಿಯಾಗಿ ಆಚರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಾದಿಗಳಾದ ಹಿರಗಪ್ಪ ಅರಳಿಕಟ್ಟಿ ಅವರು ಮಾತನಾಡುತ್ತಾ
“ಡಾ.ಭೀಮರಾವ್ ರಾಮಜಿ ಅಂಬೇಡ್ಕರ್ (1891-1956) ಬಾಬಾ ಸಾಹೇಬ್ ಎಂದು ಪ್ರಸಿದ್ಧರಾಗಿದ್ದಾರೆ ಅವರು ಭಾರತೀಯ ನ್ಯಾಯಶಾಸ್ತ್ರಜ್ಞ,ಅರ್ಥಶಾಸ್ತ್ರಜ್ಞ,ರಾಜಕಾರಣಿ ಮತ್ತು ಸಮಾಜ ಸುಧಾರಕರಾಗಿದ್ದರು ಅವರು ದಲಿತ ಬೌದ್ಧ ಚಳುವಳಿಯನ್ನು ಪ್ರೇರೇಪಿಸಿದರು ಮತ್ತು ಅಸ್ಪೃಶ್ಯತೆ ವಿರುದ್ಧ ಸಮಾಜ ತಾರತಮ್ಯದ ವಿರುದ್ಧ ಪ್ರಚಾರ ಮಾಡಿದರು ಮತ್ತು ಮಹಿಳೆಯರ ಹಕ್ಕುಗಳನ್ನು ಸಹ ಬೆಂಬಲಿಸಿದರು ಮತ್ತು ಕಾರ್ಮಿಕ ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ ಮತ್ತು ಭಾರತದ ಸಂವಿಧಾನ ಸ್ಥಾಪಿಸಿದವರು”ಎಂದು ತಿಳಿಸಿದರು.
ನಂತರ ಸಿದ್ದಪ್ಪ ಹೊಸಮನಿ ಯುನಿವರ್ಸಿಟಿ ಪಿ.ಯು. ಲೆಕ್ಚರರ್ ಅವರು ಮಾತನಾಡಿ ಅಂಬೇಡ್ಕರ್ ಅವರು ನಮಗೆ ಕೊಟ್ಟಂತಹ ಕೊಡುಗೆ ಒಂದಲ್ಲ ಎರಡಲ್ಲ ಇದು ಒಂದು ವಿಶ್ವದ ಅತಿ ದೊಡ್ಡ ಮರ ಇದು,ವಿಶ್ವದ ಎಲ್ಲಾ ಜನರಿಗೆ ನೆರಳು ನೀಡಿದ ಮರ ಡಾ.ಬಾಬಾಸಾಹೇಬ್ ಅಂಬೇಡ್ಕರ್.ಅವರ ಮಾರ್ಗದಲ್ಲಿ ನಡೆದರೆ ನಮಗೆ ಯಾವ ಕೊರತೆಯಾಗುವುದಿಲ್ಲ ಮತ್ತು ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಿ ಮತ್ತು ಅದ್ದೂರಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಸಮಾಜದ ಮುಖಂಡರಾದ
ಸಿರುಗಪ್ಪ ಅರಳಿಕಟ್ಟಿ,
ಬಸವರಾಜ್ ಸಿ ತಳವಾರ,
ತಮ್ಮಣ್ಣ ಜಾಲಿಗಿಡದ,
ನಿಂಗಪ್ಪ ಹೊಸಮನಿ,
ಪರಶುರಾಮ್ ಸಿ ತಳವಾರ್,
ಮಡಿವಾಳಪ್ಪ ಬ ಚಲವಾದಿ,
ಮಲ್ಲಿಕಾರ್ಜುನ್ ತಳವಾರ,
ಗುರಪ್ಪ ಸ ತಳವಾರ,
ಗುರಪ್ಪ ಚ ತಳವಾರ,
ಬಸವರಾಜ್ ಹೂ ಹೊಸಮನಿ,
ಸಿಂಗಪ್ಪ ಹೊಸಮನಿ ಹಾಗೂ ಯುವಕರಾದ
ಹುಸನಪ್ಪ ಹೊಸಮನಿ,
ಯಲ್ಲಾಲಿಂಗ ಭಾವೂರ್,
ಶಂಕರ್ ಲಿಂಗ,
ಬಂದು ಬಳಗಾನೂರ,
ಉಸ್ಮಾನ್ ಬಾಗವಾನ,
ಅಮೀರ್ ವಾಲಿಕಾರ್,
ರಿಯಾಜ್ ವಾಲಿಕಾರ್,
ಲಾಳೇಸಾಬ ಅವಟಿ ಭಾಗವಹಿಸಿದ್ದರು.
ವರದಿ:ಉಸ್ಮಾನ ಬಾಗವಾನ