ಬೀದರ್:ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿಯ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಿತ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜು ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿದೆ.
ಪರೀಕ್ಷೆ ಬರೆದ ಕಾಲೇಜಿನ ಎಲ್ಲ 179 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 80 ಅಗ್ರಶ್ರೇಣಿ ಹಾಗೂ 99 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ವಿಕಾಸ ರಾಚಣ್ಣ ಶೇ 97, ರಂಜಿತಾ ಕುಶಾಲರಾವ್ ಶೇ 96, ಅಭಿಷೇಕ ವಿಠ್ಠಲ ಶೇ 96, ಸೌಮ್ಯ ಕಲ್ಲಪ್ಪ ಶೇ 96, ಸಂದೀಪ್ ರಮೇಶ ಶೇ 95, ಸಾಯಿನಾಥ ಗೋಪಾಲ್ ಶೇ 95, ನವಿನಾ ಬಕ್ಕಪ್ಪ ಶೇ 95, ಮಹಮ್ಮದ್ ಖುತಬುದ್ದೀನ್ ಎಂ.ಡಿ. ಗಫರ್ ಶೇ 95 ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಅನೇಕ ವಿದ್ಯಾರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರದಲ್ಲಿ ಗರಿಷ್ಠ 100ಕ್ಕೆ 100ಕ್ಕೆ ಅಂಕ ಪಡೆದಿದ್ದಾರೆ.
ಕಾಲೇಜಿನಲ್ಲಿ ಪ್ರಾಚಾರ್ಯ ಶ್ರೀ ಗೋವಿಂದ ಡಿ. ತಾಂದಳೆ
ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಡಿ. ತಾಂದಳೆ, ಕಾರ್ಯದರ್ಶಿ ಶ್ರೀ ಗೋಪಾಲ್ ಡಿ. ತಾಂದಳೆ, ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು.
ಉಪನ್ಯಾಸಕರಾದ ಶ್ರೀ ಸಲಾಉದ್ದಿನ, ಶ್ರೀ ಬಿರೇಶ ಯಾತನೂರ, ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀ ಡಾ|| ಆಸಿಫ್, ಭೌತಶಾಸ್ತ್ರ ಉಪನ್ಯಸಕರಾದ ಶ್ರೀ ಆಸಿಫ್ ಅಲಿ, ಜೀವಶಾಸ್ತ್ರದ ಉಪನ್ಯಾಸಕರಾದ ಶ್ರೀ ಅನೀಲ ಜಾಧವ, ಆಂಗ್ಲ ಭಾಷಾ ಉಪನ್ಯಾಸಕರಾದ ಶ್ರೀ ಸಾಗರ ಪಡಸಲೆ, ಗಣಿತ ಉಪನ್ಯಾಸಕರಾದ ಶ್ರೀ ಚಂದ್ರಕಾಂತ ಝಬಾಡೆ, ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀ ಸಂತೋಷ ಗಿರಿ, ಶ್ರೀ ಗಣೇಶ ರೆಡ್ಡಿ , ಸೈಯದ ಜಾಫರ್ ಅಲಿ, ಕು. ಪ್ರಾಜಕ್ತಾ, ಶ್ರೀ ನಾಗರಾಜ , ಶ್ರೀ ಪ್ರೇಮಕುಮಾರ, ಕು. ದಿವ್ಯ, ಕು. ಸಿಮಾ, ಶ್ರೀ ಮಂಜುನಾಥ, ಇತರ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ-ಸಾಗರ ಪಡಸಲೆ