ದಲಿತರ ಪ್ರಗತಿ ಬಿಜೆಪಿಯಿಂದ ಸಾಧ್ಯ,ಮೈತ್ರಿ ಅಭ್ಯರ್ಥಿ ಗೋವಿಂದಕಾರಜೋಳರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಮೋದಿ ಪ್ರಧಾನಿಯಾಗಿಸುವಂತೆ,ಆಂಧ್ರದ ದಂಡೋರ ರಾಜ್ಯಾಧ್ಯಕ್ಷ ಮಂದಕೃಷ್ಣ ಅವರು ಸಮಸ್ತ ಮಾದಿಗ ಸಮಾಜಕ್ಕೆ ಕರೆ
ಪಾವಗಡ:ಸಮಾಜ ಪ್ರಗತಿ ಕಾಣಬೇಕು.ಈ ನಿಟ್ಟಿನಲ್ಲಿ ಕಳೆದ 30ವರ್ಷಗಳಿಂದ ನನ್ನ ಹೋರಾಟವಿದ್ದು ದಲಿತರ ಪ್ರಗತಿ ಮೋದಿ ನೇತೃತ್ವದ ಬಿಜೆಪಿಯಿಂದ ಮಾತ್ರ ಸಾಧ್ಯ.ಸಂಘಟಿತರಾಗಿ ಈ ಭಾಗದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಗೋವಿಂದಕಾರಜೋಳರನ್ನು ಹೆಚ್ಚು ಮತಗಳಿಂದ ಗೆಲ್ಲಿಸುವ ಮೂಲಕ ಬಿಜೆಪಿ ಬಲಪಡಿಸುವಂತೆ ಆಂಧ್ರದ ರಾಜ್ಯ ಮಾದಿಗ ದಂಡೋರದ ಅಧ್ಯಕ್ಷರಾದ ಮಂದ ಕೃಷ್ಣ ಮಾದಿಗ ಅವರು ತಾಲೂಕಿನ ಮಾದಿಗ ಸಮುದಾಯಕ್ಕೆ ಕರೆ ನೀಡಿದರು.
ತಾಲೂಕಿನ ಜೆಡಿಎಸ್ ಹಾಗೂ ಬಿಜೆಪಿಯ ಎಸ್‌ಸಿ ಘಟಕದ ವತಿಯಿಂದ ಗುರುವಾರ ಪಟ್ಟಣದ ಎಸ್‌ಎಸ್‌ಕೆ ಬಯಲುರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮಾದಿಗ ಸಮಾಜದ ಕಾರ್ಯಕರ್ತರ ಸಮಾವೇಶದ ಉದ್ಘಾಟನೆ ನೆರೆವೇರಿಸಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದರು.
ರಾಷ್ಟ್ರಧ್ಯಂತ ಮಾದಿಗ ಸಮಾಜ ಪ್ರಗತಿ ಕಾಣಬೇಕು.ಸಮಾಜದ ಪ್ರಗತಿಗೆ ನನ್ನ ನಿರಂತರ ಹೋರಾಟವಿದೆ.ಸಮಾಜಕ್ಕೆ ನ್ಯಾಯ ಸಿಗಬೇಕು.ಶೈಕ್ಷಣಿಕ ಸಾಮಾಜಿಕ ಹಾಗೂ ಅರ್ಥಿಕ ಪ್ರಗತಿ ಹಿನ್ನಲೆಯಲ್ಲಿ ಕಳೆದ 30ವರ್ಷಗಳಿಂದ ಮಾದಿಗ ದಂಡೋರ ಹೋರಾಟ ಸಮಿತಿಯ ಮೂಲಕ ಶ್ರಮಿಸುತ್ತಿದ್ದೇನೆ.ಎಸ್‌ಸಿ ಮೀಸಲಾತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಣ ಆಗಬೇಕು.ಇದರಿಂದ ಸಮಾಜ ಪ್ರಗತಿ ಸಾಧ್ಯವಿದೆ.ಈ ಬಗ್ಗೆ ಈ ಹಿಂದೆ ಆಗಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ಹಾಗೂ ಈಗಿನ ಎಐಸಿಸಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ.ಬರೀ ಅಶ್ವಾಷನೆ ನೀಡಿದ್ದಾರೆ ಹೊರತು ನಮ್ಮ ಹೋರಾಟಕ್ಕೆ ಪೂರಕವಾಗಿ ಸ್ಪಂಧಿಸಲಿಲ್ಲ.ಮೋದಿ ಪ್ರಧಾನಿಯಾದ ಬಳಿಕ ಮೀಸಲಾತಿ ವರ್ಗೀಕರಣ ವಿಚಾರವಾಗಿ ಭರವಸೆ ವ್ಯಕ್ತಪಡಿಸಿದ್ದು ಈ ಸಮಾಜಕ್ಕೆ ನ್ಯಾಯ ಕಲ್ಪಿಸುವ ಎಲ್ಲಾ ರೀತಿಯ ಸೂಚನೆ ನೀಡಿದ್ದಾರೆ.
ಬಿಜೆಪಿ ವಿಶ್ವಾಸಕ್ಕೆ ಬದ್ದವಾಗಿದ್ದು ದಲಿತ ಹಾಗೂ ಎಲ್ಲಾ ವರ್ಗದ ಜನತೆಗೆ ಸಾಮಾಜಿಕ ನ್ಯಾಯ ಆ ಪಕ್ಷದಿಂದ ನಾವು ಕಾಣಬಹುದು.ಹೀಗಾಗಿ ಸರಳ ಸಜ್ಜನಿಕೆಗೆ ಹೆಸರಾದ ಅಭಿವೃದ್ದಿ ಪರ ನಾಯಕ ಗೋವಿಂದ ಕಾರಜೋಳರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಸಮಾಜದ ಪ್ರಗತಿಗೆ ಸಹಕರಿಸುವಂತೆ ಕರೆ ನೀಡಿದರು.ನಾನು ರಾಜಕೀಯದಿಂದ ದೂರವಿದ್ದು ಎಂಎಲ್‌ಎ ಹಾಗೂ ಎಂಎಲ್‌ಸಿಯಂತಹ ಅಶ್ವಾಷನೆ ನೀಡಿದ್ದು ತಿರಸ್ಕರಿಸಿದ್ದೇನೆ.ಸಮಾಜದ ಪ್ರಗತಿಗೆ ಜನಿಸಿದ್ದೇನೆ.ಸಮಾಜಕ್ಕಾಗಿ ತ್ಯಾಗ ಮಾಡುತ್ತೇನೆ ಸಮಾಜದ ಪ್ರಗತಿಗೆ ಬೆಂಬಲಿಸುವ ಪಕ್ಷದ ಪರ ನನ್ನ ನಿಲುವು ಹೊಂದಿದ್ದು ಇದಕ್ಕೆ ಪ್ರಧಾನಿ ಮೋದಿ ಸಹಮತವಿದೆ.ಬಿಜೆಪಿಗೆ ಮತ ನೀಡಿ ಎಂದು ಕರೆ ನೀಡಿದರು.
ಕಳೆದ 70ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಕೇಂದ್ರ ಹಾಗೂ ರಾಜ್ಯದಲ್ಲಿ ಮಾದಿಗ ಸಮಾಜಕ್ಕೆ ಪ್ರಾಶಸ್ತ್ಯ ನೀಡಲಿಲ್ಲ.ಕಡಿಮೆ ಸಂಖ್ಯೆಯಲ್ಲಿರುವ ಛಲವಾದಿ ಸಮಾಜಕ್ಕೆ ಆದ್ಯತೆ ನೀಡಿದ್ದಾರೆ.ಖರ್ಗೆ ಎಐಸಿಸಿ ಅಧ್ಯಕ್ಷ,ಪ್ರಧಾನಿ ಆಕಾಂಕ್ಷಿಯಾಗಿದ್ದಾರೆ.ರಾಜ್ಯದಲ್ಲಿ ಡಾ.ಪರಮೇಶ್ವರ್ ಡಿಸಿಎಂ ಆಗಬಹುದು.ಆದರೆ ಮಾದಿಗ ಸಮಾಜದಲ್ಲಿ ಯಾರೂ ಕಾಣುತ್ತಿಲ್ಲ.ತಿರಸ್ಕರಿಸಿದ್ದು,ಇಂತಹ ಪಕ್ಷ ನಮಗೆ ಬೇಕಾ ಎಂದು ಪ್ರಶ್ನಿಸಿದ ಅವರು ಮಾಜಿ ಪ್ರಧಾನಿ ದೇವೇಗೌಡರ ಪರಿಚಯ ಇರಲಿಲ್ಲ.ಇಲ್ಲಿನ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಭೇಟಿ ಮಾಡಿಸಿದ್ದು ಅವರದ್ದು ಜಾತ್ಯಾತೀತ ನಿಲುವು.ಒಳಮೀಸಲಾತಿ ವರ್ಗೀಕರಣ ವಿಚಾರವಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಆಗಮಿಸಿ ಪ್ರತಿಭಟನೆಗೆ ಬೆಂಬಲಿಸಿದ್ದು ಗೌಡರು ದಲಿತರ ಪ್ರಗತಿಗೆ ಪೂರಕವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರೆ.ಆಂತಹ ನಾಯಕರ ಅಗತ್ಯವಿದ್ದು ಸಮಾಜದ ಸರ್ವತ್ತೋಭಿವೃದ್ಧಿ ಹಿನ್ನಲೆಯಲ್ಲಿ ಮೋದಿ ಆಡಳಿತ ಬೇಕಿದೆ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಬೆಂಬಲಿಸಿ ಹೆಚ್ಚು ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಮತ್ತೆ ಪಾವಗಡಕ್ಕೆ ಭೇಟಿ ನೀಡಿ ಸಮಾಜದ ಸಮಸ್ಯೆ ಪರ ದ್ವನಿಯಾಗುವ ಭರವಸೆ ನೀಡಿದರು.ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ,ದಲಿತರ ಪ್ರಗತಿ ಹಿನ್ನಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿಯ ಮೈತ್ರಿ ಅಭ್ಯರ್ಥಿ ಗೋವಿಂದಕಾರಜೋಳರನ್ನು ಗೆಲ್ಲಿಸುವಂತೆ ಕರೆ ನೀಡಿದರು.
ಹಿರಿಯ ಮುಖಂಡ ಎನ್.ತಿಮ್ಮಾರೆಡ್ಡಿ,ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ,ಬಿಜೆಪಿ ತಾ,ಅಧ್ಯಕ್ಷ ರಂಗಣ್ಣ,ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್ ಬಿಜೆಪಿ ಪರ ಮತಯಾಚಿಸಿ ಕಾರಜೋಳರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ
ವಕೀಲ ಪಾವಗಡ ಶ್ರೀರಾಮ್,ಜೆಡಿಎಸ್ ಹಿರಿಯ ಮುಖಂಡರಾದ ಬಲರಾಮರೆಡ್ಡಿ,ವಕ್ತಾರ ಅಕ್ಕಲಪ್ಪ ನಾಯ್ಡ್ ,ಜೆಡಿಎಸ್ ಅಧ್ಯಕ್ಷ ಎನ್.ಎ.ಈರಣ್ಣ,ತಾ,ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸಾಯಿ ಸುಮಾನ್ ಹನುಮಂತರಾಯಪ್ಪ,ಮುಖಂಡ ಗೋವಿಂದಬಾಬು,ಕೆ.ವಿ.ಗಿರಿರಾಜ್,ರಾಜ್‌ಗೋಪಾಲ್,ಬಿಜೆಪಿಯ ಸೂರ್ಯನಾರಾಯಣ್,ಮಹಲಿಂಗಪ್ಪ ಮಾದಿಗ ದಂಡೋರದ ವಕೀಲ ಶ್ರೀರಾಮ್,ಶಿವಕುಮಾರ್ ಸಾಕೇಲ್ ಮಾಜಿ ಜಿಪಂ ಅಧ್ಯಕ್ಷ ನರಸಿಂಹಪ್ಪ,ಸೊಗಡು ವೆಂಕಟೇಶ್ ಜಿ.ಟಿ.ಗಿರೀಶ್ ಬಲರಾಮರೆಡ್ಡಿ ಕೆ.ವಿ.ಗಿರಿರಾಜ್,ಬಿ.ಪಿ.ಪೆದ್ದನ್ನ,ರಾಜ್‌ಗೋಪಾಲ್ ಹಾಗೂ ದಲಿತ ಮುಖಂಡರಾದ ಮಂಗಳವಾಡ ಮಂಜುನಾಥ್,ಕೃಷ್ಣಪುರ ರಾಮಕೃಷ್ಣ ದೇವಲಕೆರೆ ಲಿಂಗಣ್ಣ,ಮಾದಿಗ ದಂಡೋರ ಹನುಮಂತರಾಯಪ್ಪ,ಬಿಜೆಪಿಯ ಪ್ರಸಾದ್‌ಬಾಬು ಹಾಗೂ ಇತರೆ ಆನೇಕ ಮಂದಿ ದಲಿತ ಮುಖಂಡರು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ-ಪೃಥ್ವಿರಾಜ್